ಅಶ್ಪøಶ್ಯತೆ ತೊಡೆದು ಹಾಕುವಲ್ಲಿ ಶ್ರಮಿಸಿದ ಮಹಾನ್ ನಾಯಕ ಜಗಜೀವರಾಂ

0
23

ಶಹಾಬಾದ: ಬಾಬು ಜಗಜೀವರಾಂ ಅವರು ಅಶ್ಪøಶ್ಯತೆಯನ್ನು ತೊಡೆದು ಹಾಕಿ ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದರು.ಶೋಷಿತರ ಪರವಾಗಿ ಹೋರಾಟ ಮಾಡಿ ಅವರನ್ನು ಮುಖ್ಯ ವಾಹಿನಿಗೆ ತರುವಲ್ಲಿ ಯಶಸ್ವಿಯಾಗಿದ್ದರು ಎಂದು ಬಿಜೆಪಿ ಹಿರಿಯ ಮುಖಂಡ ಕನಕಪ್ಪ ದಂಡಗುಲಕರ್ ಹೇಳಿದರು.

ಅವರು ನಗರದ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಲಾದ ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಉಪಪ್ರಧಾನ ಮಂತ್ರಿ ಬಾಬು ಜಗಜೀವನರಾಮ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಬಾಬು ಜಗಜೀವರಾಂ ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು.ಶಿಕ್ಷಣವನ್ನು ಮೂಲ ಅಸ್ತ್ರವನ್ನಾಗಿಸಿಕೊಂಡು ಚೆನ್ನಾಗಿ ಓದಿ ಉನ್ನತ ಹುದ್ದೆ ಪಡೆದು ಸಮಾಜ ಸೇವೆ ಮಾಡಬೇಕು.ಆಗಲೇ ಅಸ್ಪøಶ್ಯತೆ ನಿವಾರಣೆ ಸಾಧ್ಯವಾಗುತ್ತದೆ ಎಂದರು.

ಮುಖಂಡ ಮೋಹನ ಹಳ್ಳಿ ಮಾತನಾಡಿ, ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಇವರು ದಲಿತ ನಾಯಕರಲ್ಲ.ಇವರು ಮನುಕುಲದ ನಾಯಕರು. ಅವರ ಆದರ್ಶಗಳನ್ನು ನಾವೆಲ್ಲರೂ ಪಾಲನೆ ಮಾಡುವ ಮೂಲಕ ಸುಂದರ ಸಮಾಜದ ಬೆಳವಣಿಗೆಗೆ ಕೈಜೋಡಿಸಬೇಕೆಂದು ಹೇಳಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ ಗೌಳಿ, ದೇವದಾಸ ಜಾಧವ, ಸಿದ್ರಾಮ ಕುಸಾಳೆ, ಸದಾನಂದ ಕುಂಬಾರ, ದುರ್ಗಪ್ಪ ಪವಾರ, ಬಸವರಾಜ ಬಿರಾದಾರ, ಸಂಜಯ ವಿಟಕರ್, ಯಲ್ಲಪ್ಪ ದಂಡಗುಲಕರ, ತಿಮ್ಮಣ್ಣ ಕುರಡೆಕರ, ರಾಮು ಕುಸಾಳೆ, ಬಸವರಾಜ ಸಾತ್ಯಾಳ, ನಾರಾಯಣ ಕಂದಕೂರ, ಶರಣು ವಸ್ತ್ರದ, ದತ್ತಾತ್ರೇಯ ಘಂಟೆ, ಮಂಜುನಾಥ ದೊಡ್ಡಮನಿ, ತಿಪ್ಪಯ್ಯ ಕಣಸೂರ, ಅಮರ ಕೋರೆ, ಸಂತೋಷ ಹುಲಿ, ಶ್ರೀನೀವಾಸ ದೇವಕರ, ಮಲ್ಲು ಪುಜಾರಿ, ನಾಗರಾಜ ಮುದ್ನಾಳ, ಶರಣರಾಜ ಗೊಬ್ಬೂರಕರ, ಬಸವರಾಜ ತುಮಕೂರ, ಯಲ್ಲಾಲಿಂಗ ಹಯ್ಯಾಳಕರ, ಶೀವು ರಾಮಗಡ, ವಿಶ್ವರಾಜ,ಸುರೆಶ ಹಯ್ಯಾಳಕರ, ಶಂಕರ ದಂಡೊತಿಕರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ದೇವದಾಸ ಜಾಧವ್ ಸ್ವಾಗತಿಸಿ, ನಿರೂಪಿಸಿದರು. ಸಿದ್ರಾಮ ಕುಸಾಳೆ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here