ವಾಡಿ: ಬಿಜೆಪಿಯ 44ನೇ ಸಂಸ್ಥಾಪನಾ ದಿನಾಚರಣೆ

0
143

ವಾಡಿ: ಪಟ್ಟಣದ ಹನುಮಾನ ಮಂದಿರದಲ್ಲಿ ಭಾರತೀಯ ಜನತಾ ಪಾರ್ಟಿಯ 44ನೇ ಸಂಸ್ಥಾಪನಾ ದಿನದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ವೇಳೆ ಪಕ್ಷದ ಮುಖಂಡರಾದ ಬಸವರಾಜ ಪಂಚಾಳ ಮಾತನಾಡಿ ಬಿಜೆಪಿ ಪಕ್ಷ ದೇಶ ಅಭಿಮಾನದ,ಹಿಂದುತ್ವದ ಆಧಾರದ ಮೇಲೆ ಅಸ್ತಿತ್ವಕ್ಕೆ ಬಂದು,ಸರ್ವರ ಕಲ್ಯಾಣಕ್ಕಾಗಿ ಪಕ್ಷ ಶ್ರಮಿಸುತ್ತಿದೆ.

Contact Your\'s Advertisement; 9902492681

ವಿಶ್ವದಲ್ಲಿ ಹೆಚ್ಚು ಸದಸ್ಯತ್ವ ಹೊಂದಿರುವ ಏಕೈಕ ರಾಷ್ಟ್ರೀಯ ಪಕ್ಷ ವಾಗಿದೆ. ಹಲವರು ಹಿರಿಯರು ಕಿರಿಯರು ಎನ್ನದೇ ನಿಸ್ವಾರ್ಥವಾಗಿ ಶ್ರಮಿಸಿದ ಫಲದಿಂದ ಪಕ್ಷವು ಈಗ ಹೆಮ್ಮರವಾಗಿ ಬೆಳೆದಿದೆ.ಅದರಂತೆ ನಮ್ಮ ಮೋದಿ ಜಿ ಜನಪರ ಆಡಳಿತದಿಂದ ಇನ್ನೂ ಹೆಚ್ಚಿನ ಶ್ರೇಯಸ್ಸು ಪಕ್ಷ ಹೊಂದುತ್ತಿದೆ,ಈ ಪಕ್ಷದ ಪ್ರತಿಯೊಬ್ಬರೂ ಕಾರ್ಯಕರ್ತರು ಹೆಮ್ಮೆಪಡುವಂತ ಕಾರ್ಯದಲ್ಲಿ ಪಕ್ಷ ತೋಡಗಿದೆ ಎಂದರು.

ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಭಾರತೀಯ ಜನತಾ ಪಾರ್ಟಿಯ 44ನೇ ಸ್ಥಾಪನಾ ದಿನ ನಾವು ಆಚರಿಸುತ್ತಿದೆವೆ. 1980ರ ಏಪ್ರಿಲ್ 6 ರಂದು ನಮ್ಮ ಪಕ್ಷದ ಹೆಮ್ಮೆಯ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಅಧ್ಯಕ್ಷತೆಯಲ್ಲಿ ಜನಸಂಘದಲ್ಲಿದ್ದ ಸದಸ್ಯರು ಬಿಜೆಪಿ ಸ್ಥಾಪಿಸಿದ್ದರು.

ಶ್ಯಾಮ್ ಪ್ರಸಾದ್ ಮುಖರ್ಜಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ,ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ,ಮುರಳಿ ಮನೋಹರ ಜ್ಯೋಷಿ ಹಾಗೂ ಉಮಾಚ ಭಾರತಿ ಸೇರಿದಂತೆ ಅನೇಕ ಮಹಾನ ನಾಯಕರ ಶ್ರಮದಿಂದ
ಇಂದು ಜಗತ್ತಿನಲ್ಲಿ ನಮ್ಮ ಪಕ್ಷದ ತತ್ವ ಸಿದ್ಧಾಂತಗಳು ಶ್ರೇಷ್ಠತೆ ಮೆರೆಯುತ್ತಿವೆ.ಮೋದಿ ಜೀ ಅವರು ನಮ್ಮ ಹಿಂದಿನ ನಾಯಕರ ಕನಸನ್ನು ನನಸು ಮಾಡುತ್ತಿದ್ದಾರೆ ಅವರೆಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ರಾಮಚಂದ್ರ ರಡ್ಡಿ,ಶರಣಗೌಡ ಚಾಮನೂರ,ಅಶೋಕ ಹರನಾಳ,ಕಿಶನ ಜಾಧವ,ಆನಂದ ಡೌವಳೆ,ಆನಂದ ಇಂಗಳಗಿ,ಪ್ರೇಮ ರಾಠೋಡ,ಬಸವರಾಜ ಕಿರಣಗಿ,ಮಹಾಲಿಂಗ ಶೆಳ್ಳಗಿ,
ಅಯ್ಯಣ್ಣ ದಂಡೋತಿ,ಮಲ್ಲಿಕಾರ್ಜುನ ಸಾತಖೇಡ,ದೇವೇಂದ್ರ ಬಡಿಗೇರ,ವಿಜಯ ಬಾಬು,ಬಸವರಾಜ ಪಗಡಿಕರ,
ಯಂಕಮ್ಮ ಗೌಡಗಾಂವ, ಶರಣಮ್ಮ ಯಾದಗಿರಿ, ಉಮಾದೇವಿ ಗೌಳಿ,ದೆವಕ್ಕಿ ಪೂಜಾರಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here