ಹಿರಿಯರ ತ್ಯಾಗ,ಬಲಿದಾನದಿಂದ ಬಿಜೆಪಿ ಉದಯ

0
89

ಶಹಾಬಾದ: ಹಿರಿಯರ ತ್ಯಾಗ,ಬಲಿದಾನದಿಂದ 1980ರಲ್ಲಿ ಉದಯವಾದ ಭಾರತೀಯ ಜನತಾ ಪಾರ್ಟಿ ಇಂದು ದೇಶದಲ್ಲಿಯೇ ದೊಡ್ಡ ಪಕ್ಷವಾಗಲು ಕಾರ್ಯಕರ್ತರ ಪರಿಶ್ರಮ ಅಪಾರವಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ಅರುಣ ಪಟ್ಟಣಕರ್ ಹೇಳಿದರು.

ಅವರು ಶನಿವಾರ ನಗರದ ಬಿಜೆಪಿ ಕಛೇರಿಯಲ್ಲಿ ಆಯೋಜಿಸಲಾದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ಬಿಜೆಪಿಯು ಎಲ್ಲ ವರ್ಗದವರ ಹಿತ ರಕ್ಷಣೆಗೆ ಬದ್ಧವಿದೆ.ಬಡವರು,ಕಾರ್ಮಿಕರು,ರೈತರು ಹಾಗೂ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಕಟಿಬದ್ಧವಿದೆ.ಈ ದಿಸೆಯಲ್ಲಿ ದೇಶದ ಅಧಿಕಾರ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ಅವರು ಸವಾಂಗೀಣ ವಿಕಾಸಕ್ಕಾಗಿ ಶ್ರಮಿಸುತ್ತಿದ್ದಾರೆ.ಇಡೀ ವಿಶ್ವವೇ ಭಾರತದತ್ತ ಕಾತುರದಿಂದ ನೋಡುತ್ತಿದೆ.ಇದಕ್ಕೆ ಮೋದಿಯವರ ಸಮರ್ಥ ಆಡಳಿತ ಹಾಗೂ ದೂರದೃಷ್ಠಿಯ ನಾಯಕತ್ವವೇ ಕಾರಣವೆಂದು ಹೇಳಿದರು.

ಬಿಜೆಪಿ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಮಾತನಾಡಿ, 1977ರಲ್ಲಿ ಮುರಾರ್ಜಿ ದೇಸಾಯಿ ಸರ್ಕಾರ ಪತನವಾದ ನಂತರ 1980ರಲ್ಲಿ ದೀನ್ ದಯಾಳ ಉಪಧ್ಯಾಯ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರ ಶ್ರಮದ ಫಲವಾಗಿ ಭಾರತೀಯ ಪಕ್ಷ ಉದಯವಾಯಿತೆಂದು ಹೇಳಿದರು.

ಮುಖಂಡರಾದ ಕನಕಪ್ಪ ದಂಡಗುಲಕರ,ಜ್ಯೋತಿ ಶರ್ಮಾ ಮಾತನಾಡಿದರು. ನಂತರ ಎಲ್ಲಾ ಭೂತಿನಲ್ಲಿ ಉಸ್ತುವಾರಿಗಳು ಅಧ್ಯಕ್ಷರು ಮತ್ತು ಕಾರ್ಯಕರ್ತರು ಸ್ಥಾಪನ ದಿವಸ ಆಚರಣೆ ಮಾಡಿ, ಭೂತ್ ಅಧ್ಯಕ್ಷರ ಮನೆಗೆ ಧ್ವಜ ಕಟ್ಟಿದರು. ನಂತರ ಸಿಹಿ ಹಂಚಿ ಮನೆ ಮನೆ ಸಂಪರ್ಕಿಸಿ ಕರಪತ್ರ ಹಂಚಲು ಚಾಲನೆ ನೀಡಲಾಯಿತು. ದೇವದಾಸ ಜಾಧವ್ ನಿರೂಪಿಸಿ, ಸ್ವಾಗತಿಸಿದರು. ದೀನೇಶ ಗೌಳಿ ವಂದಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಪದಾಧಿಕಾರಿಗಳು, ಪ್ರಮುಖರು, ನಗರಸಭೆ ಸದಸ್ಯರು, ಮಹಾಶಕ್ತಿ ಕೇಂದ್ರ ಮತ್ತು ಶಕ್ತಿ ಕೇಂದ್ರದ ಪ್ರಮುಖರು, ಮೊರ್ಚಾಗಳ ಮತ್ತು ಭೂತಿನ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here