ಓಜೋನ ರಕ್ಷಣೆ ಇಂದಿನ ತುರ್ತು ಅಗತ್ಯ: ಪ್ರೊ.ಎಚ್.ಬಿ.ಪಾಟೀಲ

0
35

ಕಲಬುರಗಿ: ಸೂರ್ಯನಿಂದ ಹೊರಬರುವ ನೇರಳಾತೀತ ಕಿರಣಗಳಿಂದ ಭೂಮಿಯನ್ನು ರಕ್ಷಿಸುವ ಮೂಲಕ ಓಜೋನ ಪದರು ಸರ್ವ ಜೀವಿಗಳ ರಕ್ಷಾ ಕವಚವಾಗಿದೆ. ಕೆಲವು ಕಾರಣಗಳಿಂದ ಇದು ಅಪಾಯವನ್ನು ಎದುರಿಸುತಿದ್ದು, ಅದರ ರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆಯೆಂದು ಉಪನ್ಯಾಸಕ, ಚಿಂತಕ ಪ್ರೊ.ಎಚ್.ಬಿ.ಪಾಟೀಲ ಹೇಳಿದರು.

ಅವರು ನಗರದ ಗಂಜ್ ಪ್ರದೇಶದ, ಒಕ್ಕಲಗೇರಾದಲ್ಲಿರುವ ’ಶ್ರೀ ವೀರತಪಸ್ವಿ ಚನ್ನವೀರ ಶಿವಾಚಾರ್ಯ ಅನುದಾನಿತ ಪ್ರೌಢಶಾಲೆ’ಯಲ್ಲಿ, ಇಲ್ಲಿನ ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ’ವಿಶ್ವ ಓಝೋನ ದಿನ’ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಇದು ಆಕ್ಸಿಜೆನ್‌ದ ಮೂರು ಅಣುಗಳಿಂದ ರಚನೆಯಗಿದೆ. ಅಂಟಾರ್ಟಿಕ ಪ್ರದೇಶದಲ್ಲಿ ಇದಕ್ಕೆ ರಂಧ್ರವಿರುವುದನ್ನು ೧೯೮೫ರಲ್ಲಿ ಗಮನಿಸಲಾಯಿತು. ಆ ವರ್ಷ ವಿಂiiನ್ನಾದಲ್ಲಿ ಓಜೋನ್ ಪದರಿನ ರಕ್ಷಣೆಯ ಬಗ್ಗೆ ಸಮ್ಮೇಳನ ಜರುಗಿತು.

Contact Your\'s Advertisement; 9902492681

ಸಿ.ಎಫ್.ಸಿ.ಗಳ ಉತ್ಪಾದನೆ ಬಳಕೆ & ವಿಸರ್ಜನೆಗಳನ್ನು ಕಡಿಮೆಗೊಳಿಸುವ ನಿರ್ಧಾರವವನ್ನು ಕೈಗೊಳ್ಳಲಾಯಿತು. ಮೌಂಟ್ರೇಯಲ್ ಒಪ್ಪಂದಕ್ಕೆ ೧೫೦ ರಾಷ್ಟ್ರಗಳು ಸಹಿ ಹಾಕಿದವು. ಭಾರತವು ೧೯೯೨ರಲ್ಲಿ ಇದಕ್ಕೆ ಸಹಿ ಹಾಕಿತು. ಈ ಒಪ್ಪಂದ ಪ್ರಕಾರ, ಶೇ.೫೦ರಷ್ಟು ಮೇತುಡಾನಕ್ ವಸ್ತುಗಳನ್ನು ಬಳಸಬಾರದೆಂದು ಒಪ್ಪಂದ ಮಾಡಿಕೊಳ್ಳಲಾಯಿತು. ಆದರೆ ಇದು ಇನ್ನೂ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲವೆಂದು ವಿಷಾದಿಸಿದರು. ಓಜೋನ್ ಪದರಿನ ನಾಶದಿಂದ ಚರ್ಮರೋಗ, ಕಣ್ಣಿನದೋಷ, ಗಂಟಲಿನಲ್ಲಿ ಕೆರೆತ,ಕ್ಯಾನ್ಸರ್,ರೋಗ ನಿರೋಧಕ ಶಕ್ತಿಯ ಕುಗ್ಗುವಿಕೆಯಾಗುತ್ತದೆ. ಆದ್ದರಿಂದ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡು, ದಟ್ಟವಾದ ಹೊಗೆ ಹೊರಹಾಕುವ ವಾಹನಗಳ ಬಳಕೆಯನ್ನು ತಗ್ಗಿಸಬೇಕು. ಹಸಿರು ಮನೆ ಪರಿಣಾಮವನ್ನು ಕಡಿಮೆ ಮಾಡುವುದು, ಎಲ್ಲೆಡೆ ಗಿಡ-ಮರಗಳನ್ನು ಬೆಳೆಸಿ ಪರಿಸರದ ಸಮತೋಲನವನ್ನು ಕಾಪಾಡಬೇಕೆಂದು ಅಭಿಪ್ರಾಯಪಟ್ಟರು.

ಶಾಲೆಯ ಮುಖ್ಯ ಶಿಕ್ಷಕ ಶಿವಾನಂದ ಪಾಟೀಲ ಮಾತನಾಡಿ, ಒಜೋನ್ ಪದರಿನ ಮಹತ್ವವನ್ನು ಎಲ್ಲರಿಗೂ ತಿಳಿಯಬೇಕೆಂಬ ಉದ್ದೇಶದಿಂದ ದಿನಾಚರಣೆ ಮಾಡಲಾಗುತ್ತದೆ. ಇದು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ, ಯಾವಾಗಲೂ ನಮ್ಮಲ್ಲಿ ಓಜೋನ್ ರಕ್ಷಣೆಯ ಅರಿವು ಇರಬೇಕು. ಓಜೋನನ್ನು ರಕ್ಷಿಸಿ ಮುಂದಿನ ಪೀಳಿಗೆಯನ್ನು ಜೀವಿಸಲು ಅವಕಾಶ ಮಾಡಿಕೊಡುವುದು ಅವಶ್ಯಕವಾಗಿದೆಯೆಂದು ನುಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕರುಗಳಾದ ಸಿದ್ದಣ್ಣ ಪಾಟೀಲ, ಚಂದಕಲಾ ಉಕಲಿ, ಚಂದ್ರಶೇಖರ ಪಾಟೀಲ, ಪ್ರಭಾಕರ ಪಾಟೀಲ, ಬಸವರಾಜ ಇಂಗಳೇಶ್ವರ, ಭೀಮು ಚವ್ಹಾಣ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ ಚಂಡ್ರಕಿಮಠ, ಶಿವರಾಯ ನಾಯಕ, ಸಿಬ್ಬಂದಿಗಳಾದ ಚನ್ನಮಲ್ಲಯ್ಯ ಹಿರೇಮಠ, ತಿಪ್ಪಣ್ಣ ಜಾಧವ, ಶರಣಬಸಪ್ಪ ಕೋಳಕೂರ, ಪ್ರಮುಖರಾದ ಅಮರ ಬಂಗರಗಿ, ಸಿದ್ದಾರೂಡ ಬಿರಾದಾರ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here