ಕಲಬುರಗಿ: ಕಾನೂನುಬದ್ಧವಾಗಿ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಇರುವ ಬಂಜಾರ, ಭೋವಿ, ಕೊರಮ ಮತ್ತು ಕೊರಚ ಸಮುದಾಯಗಳನ್ನು ಅಪಮಾನ ಮಾಡುತ್ತಿರುವ ವ್ಯಕ್ತಿಯ ವಿರುದ್ಧ ನ್ಯಾಯಾಲಯದಲ್ಲಿ ಮತ್ತು ಹೊರಗೆ ಸೂಕ್ತ ಉತ್ತರ ನೀಡಲು ಅಖಿಲ ಕರ್ನಾಟಕ ಬಂಜಾರಾ, ಭೋವಿ, ಕೊರಚ, ಕೊರಮ, ಸಮುದಾಯಗಳ ಕ್ಷೇಮಾಭಿವೃದ್ಧಿ ಸಂಘ ನಿರ್ಧರಿಸಿದೆ ಎಂದು ಸಂಘದ ತಿಪ್ಪಣ್ಣ ಒಡೆಯರಾಜ ತಿಳಿಸಿದರು.
ಬಂಜಾರ, ಭೋವಿ, ಕೊರಮ ಮತ್ತು ಕೊರಚ ಸಮುದಾಯಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಕೈ ಬಿಡಬೇಕು ಎಂದು ರಾಯಚೂರಿನ ವ್ಯಕ್ತಿಯೊಬ್ಬರು ಬೆಂಗಳೂರು ಹೈಕೋರ್ಟಿನಲ್ಲಿ ವಿಚಾರಣೆಗೆ ಬಂದಿದ್ದು, ಕೋರ್ಟ್ ರಾಜ್ಯ ಸರ್ಕಾರ ಮತ್ತು ಎನ್ ಸಿ ಎಸ್ ಸಿ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
ಸಂವಿಧಾನಬದ್ಧವಾಗಿ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ನಮ್ಮ ಸಮುದಾಯಗಳನ್ನು ಅವಹೇಳನ ಮಾಡುತ್ತಿರುವ ಕ್ರಮ ಖಂಡನೀಯ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸದರಿ ವ್ಯಕ್ತಿಯ ಪತ್ರಕ್ಕೆ ಸೂಕ್ತ ಉತ್ತರ ನೀಡುವಂತೆ ಸಿಎಂ ಯಡಿಯೂರಪ್ಪ ಹಾಗೂ ಬಿಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ತದನಂತರ ಬೊಮ್ಮಾಯಿ ಸರ್ಕಾರ ಎನ್ ಸಿಎಸ್ ಸಿಗೆ ಉತ್ತರ ಕೂಡ ಬರೆದಿತ್ತು ಎಂದು ವಿವರಿಸಿದರು.
ಈಗಿನ ಸಿಎಂ ಸಿದ್ದರಾಮಯ್ಯನವರು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಈ ಸಮುದಾಯಗಳನ್ನು ಕರ್ನಾಟಕ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಮುಂದುವರಿಸಬೇಕು ಎಂದು ನಿರ್ಣಯ ಮಾಡಿ ಕೇಂದ್ರ ಸರ್ಕಾರಕ್ಕೆ ಪತ್ರ ಕಳಿಸಿತ್ತು ಎಂದು ತಿಳಿಸಿದರು.
ಈ ಕುರಿತು ಶೀಘ್ರದಲ್ಲೇ ಸಮುದಾಯದ ಚಿಂತಕರು, ಕಾನೂನು ತಜ್ಞರ ಸಭೆಯನ್ನು ಕರೆದು ಮುಂದಿನ ಕಾರ್ಯತಂತ್ರ ರೂಪಿಸಲಾಗುವುದು ಎಂದು ಹೇಳಿದರು.
ಶಾಮರಾವ ಪವಾರ, ಚಂದು ಜಾಧವ, ಲಕ್ಷ್ಮಣ ರಾಠೋಡ, ಸಾಯಬಣ್ಣ ಭಜಂತ್ರಿ ಇತರರಿದ್ದರು.