ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಇನ್ಮುಂದೆ KKRDB

0
152
ಕಲಬುರಗಿ: ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಇನ್ಮುಂದೆ ಕೆಕೆಆರ್‌ಡಿಬಿ (KKRDB) ಆಗಲಿದೆ. ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳಲ್ಲಿ ನಾಳೆ ಕಲ್ಯಾಣ ಕರ್ನಾಟಕ ಉತ್ಸವ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಹೈದರಾಬಾದ್ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಎಂದು ಮರು ನಾಮಕರಣಗೊಂಡಿದೆ.
ಮಂಡಳಿಯ ಕೇಂದ್ರ ಕಚೇರಿ ‘ಅಭಿವೃದ್ಧಿ ಭವನ’ ಕಟ್ಟಡದ ಮೇಲಿನ ಹೆಸರು ಕೂಡಾ ಬದಲಾವಣೆಗೊಂಡಿದೆ. ಕಲಬುರಗಿ ನಗರದ ಐವಾನ್ ಎ ಶಾಹಿ ಅತಿಥಿ ಗೃಹದ ಬಳಿ ಇರುವ ಅಭಿವೃದ್ಧಿ ಭವನ ಕಟ್ಟಡದ ಹೆಸರು ಬದಲಾವಣೆಗೊಂಡಿದೆ. ಈವರೆಗೂ ಮೂರು ಬಾರಿ ಕೇಂದ್ರ ಕಚೇರಿಯ ಹೆಸರು ಬದಲಾವಣೆ ಮಾಡಲಾಗಿತ್ತು.
ಮೊದಲು ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ(HKDB) ಅಂತಾ ಇತ್ತು. ಹೈದರಾಬಾದ್ ಕರ್ನಾಟಕ ಭಾಗಕ್ಕೆ 371(J) ವಿಶೇಷ ಸ್ಥಾನಮಾನ ಸಿಕ್ಕ ನಂತರ, HKRDB ಅಂತಾ ಮರು ನಾಮಕರಣ ಮಾಡಲಾಗಿತ್ತು.
ಇತ್ತೀಚೆಗಷ್ಟೇ ಬಿಎಸ್‌ವೈ ನೇತೃತ್ವದ ಸರ್ಕಾರ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಕಲ್ಯಾಣ ಕರ್ನಾಟಕ ಅಂತಾ ಮರುನಾಮಕರಣ ಮಾಡಿತ್ತು.
ಈಗ ಮೂರನೇ ಬಾರಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ(KKRDB) ಅಂತಾ ಬದಲಾವಣೆ ಮಾಡಲಾಗಿದೆ. ಮಂಡಳಿಯ ವೆಬ್‌ಸೈಟ್‌ನಲ್ಲಿಯೂ ಕೆಕೆಆರ್‌ಡಿಬಿ ಅಂತಾ ಅಪ್ಡೇಟ್‌ ಮಾಡಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here