ಶಾಂತಿ ಸೌಹಾರ್ದತೆಯಿಂದ ಯುಗಾದಿ ರಂಜಾನ್ ಹಬ್ಬ ಆಚರಿಸಿ

0
17

ಸುರಪುರ: ಯುಗಾದಿ ಹಾಗೂ ರಂಜಾನ್ ಹಬ್ಬ ಎರಡು ಕೂಡ ಕೆಲವೇ ದಿನಗಳ ಅಂತರದಲ್ಲಿ ಬಂದಿದ್ದು ಎರಡೂ ಹಬ್ಬವನ್ನು ಎಲ್ಲರು ಪರಸ್ಪರ ಸೌಹಾರ್ದತೆಯಿಂದ ಆಚರಿಸುವಂತೆ ಪಿಎಸ್‍ಐ ಶರಣಪ್ಪ ಹವಲ್ದಾರ್ ತಿಳಿಸಿದರು.

ನಗರದ ಪೊಲೀಸ್ ಠಾಣೆಯ ಡಿವೈಎಸ್ಪಿ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾದ ಯುಗಾದಿ ಹಾಗೂ ರಂಜಾನ್ ಹಬ್ಬ ಆಚರಣೆ ಅಂಗವಾಗಿ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ನಮ್ಮ ಸುರಪುರ ನೆಲವು ಶಾಂತಿ ಸೌಹಾರ್ಧತೆಗೆ ಹೆಸರುವಾಸಿಯಾದ ಭೂಮಿಯಾಗಿದೆ,ಇಲ್ಲಿ ಇತಿಹಾಸ ಕಾಲದಿಂದಲೂ ಸರ್ವಧರ್ಮಿಯರು ಎಲ್ಲಾ ಹಬ್ಬವನ್ನು ಪರಸ್ಪರ ಬೆರೆತು ಆಚರಿಸುವ ಮೂಲಕ ಸೌಹಾರ್ಧತೆಯ ಸಂದೇಶವನ್ನು ನೀಡುತ್ತಾ ಬರುತ್ತಿದ್ದು,ಅದರಂತೆ ಈಗ ಬಂದಿರುವ ಮಂಗಳವಾರ ಯುಗಾದಿ ಹಬ್ಬ ಹಾಗೂ ಮುಸ್ಲೀಂ ಬಾಂಧವರು ಏಪ್ರಿಲ್ 11 ರಂದು ರಂಜಾನ್ ಹಬ್ಬವನ್ನು ಚುನಾವಣೆ ನೀತಿ ಸಂಹಿತೆಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಎಲ್ಲರು ಸೇರಿ ಆಚರಿಸುವಂತೆ ತಿಳಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಪಿ.ಎಸ್.ಐ ಚಂದ್ರಾಮಪ್ಪ,ಮುಖಂಡರಾದ ಅಬ್ದುಲ್ ಅಲೀಂ ಗೋಗಿ,ಸಚಿನಕುಮಾರ ನಾಯಕ,ಶಿವಲಿಂಗ ಹಸನಾಪುರ,ಉಸ್ತಾದ್ ವಜಾಹತ್ ಹುಸೇನ್ ಮಾತನಾಡಿದರು.ಮುಖಂಡರಾದ ಮಲ್ಲು ಬಿಲ್ಲವ್,ದಾನಪ್ಪ ಕಡಿಮನಿ,ಖಾಜಾ ಅಜ್ಮೀರ್,ನಾಗಪ್ಪ ಕಟ್ಟಿಮನಿ,ಗಫೂರ ಖುರೇಶಿ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.

ಪೊಲೀಸ್ ಸಿಬ್ಬಂದಿಗಳಾದ ಶಿವಮÁಜ ಹೆಚ್.ಸಿ,ಮಹೇಶ ಹೆಚ್.ಸಿ ನಿಂಗಯ್ಯ ಪಿ.ಸಿ ಭಾಗವಹಿಸಿದ್ದರು,ಪೊಲೀಸ್ ಪೇದೆ ದಯಾನಂದ ಜಮಾದಾರ್ ಸಭೆಯ ಕುರಿತು ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here