ಕಲಬುರಗಿ: ನಗರದ ಹೊಸ ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ಕಲ್ಯಾಣ ಕರ್ನಾಟಕ ಲೋಕೋಪಯೋಗಿ ನೌಕರ ಸಂಘ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ರವರ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತ್ಯುತ್ಸವ ನಡೆಯಿತು.
ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಜಗನ್ನಾಥ್ ಹಾಲಿಂಗೆ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಶ್ವಮಾನವ ಸಂದೇಶ ನೀಡಿ ಬದುಕನ್ನು ದೇಶಕ್ಕಾಗಿ ಮುಡಿಪಾಗಿಟ್ಟಿದ್ದು ಅಂಬೇಡ್ಕರ್ ಅವರ ಹೆಗ್ಗಳಿಕೆ ಎಂದರು.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಯಾದ ಅಂಬೇಡ್ಕರ್ ಜ್ಞಾನಾರ್ಜನೆಗೆ ತಮ್ಮನ್ನು ಸಮರ್ಪಿಸಿಕೊಂಡರು. ಸಮಾಜ ಮತ್ತು ದೇಶದ ಹತ್ತಾರು ಸಮಸ್ಯೆಗಳಿಗೆ ಪರಿಹಾರ ಕೊಡುವ ಶ್ರೇಷ್ಠ ಸಂವಿಧಾನ ರಚಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಎಂಜಿನಿಯರಿಂಗ್ ಡಾ.ಸುರೇಶ್ ಶರ್ಮಾ ಮಾತನಾಡಿ, ಕೇವಲ ಅಂಬೇಡ್ಕರ್ ಅವರನ್ನು ನೆನೆದು ನಂತರ ಮರೆಯುವ ಬದಲು ಸಂವಿಧಾನದ ತತ್ವಗಳನ್ನು ಪಾಲಿಸಲು ಎಲ್ಲರೂ ಮುಂದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಮತ್ತು ಸಿಬ್ಬಂದಿ ಸಂಯೋಗದೊಂದಿಗೆ ಅನ್ನಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತು. ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್ ದಶರಥ್ ಸಂಘನ್, ಮಲ್ಲಿಕಾರ್ಜುನ್, ಡಾ.ಸುರೇಶ್ ಶರ್ಮಾ, ಸುಭಾಷ್ ಶಿಕ್ಷಣಕರ್, ಅಭಿಮನ್ಯು ಶೃಂಗೇರಿ, ಸೂರ್ಯಕಾಂತ್, ಮೊಹಮ್ಮದ್ ಇಬ್ರಾಹಿಂ ಶಿವಶರಣಪ್ಪ ಪಟ್ಟಣಶೆಟ್ಟಿ, ಶ್ರೀಮಂತ ಕೋಟೆ, ಶ್ರೀಮಂತ ಬೆನ್ನೂರ್, ಮಲ್ಲಿಕಾರ್ಜುನ್ ಕುಕನೂರ್, ಜಯರಾಜ್, ವಿಜಯಕುಮಾರ್ ಪಟ್ಟಣ, ಭೀಮಣ್ಣ ನಾಯಕ್, ಮಾಂತೇಶ್ ರೋಡಗಿ, ಮಾಂತೇಶ ಪಾಟೀಲ್, ದತ್ತಾತ್ರೇಯ ಬಿಲಗುಂದಿ, ಶರಣರಾಜ್ ರಾಜ್ ಚಪ್ಪರಬಂದಿ, ಉದಯಕುಮಾರ್, ಜಗದೀಶ್, ಚಂದ್ರಶೇಖರ್ ಕಟ್ಟಿಮನಿ, ಮಲ್ಲಿಕಾರ್ಜುನ ಸಂಗೊಳ್ಳಿ, ಉಮಾಕಾಂತ್ ಹಿರೋಳಿಕರ್, ರಾಜಕುಮಾರ್ ಒಂಟಿ, ಗುರುಶಾಂತ ಓಗಿ, ಅಶೋಕ್ ಸಜ್ಜನ್, ಶಶಿನಾಥ್, ನಾಗೇಂದ್ರಪ್ಪ ಮಜರ್ ಇದ್ದರು.