ಹಟ್ಟಿ: ಪಟ್ಟಣದಲ್ಲಿ ಮಾಂಸ ಮಾರಾಟಗಾರರಿಗೆ ಡಾ.ಬಿ. ಆರ್. ಅಂಬೇಡ್ಕರ್ ಜಯಂತಿ ಸೇರಿ ಇನ್ನೂ ಅನೇಕ ಜಯಂತಿಗಳಂದು ಅವೈಜ್ಞಾನಿಕವಾಗಿ ಮಾಂಸ ಮಾರಾಟ ಮತ್ತು ಪ್ರಾಣಿ ವಧೆ ನಿಷೇಧಿಸುವ ಮಾಂಸ ಮಾರಾಟ ಮತ್ತು ಪ್ರಾಣಿ ವಧೆ ನಿಷೇಧಿಸಲಾಗಿದ್ದು, ಇದು ಅಂಬೇಡ್ಕರ್ ಅವರ ತಾತ್ವಿಕತೆಗೆ ವಿರುದ್ಧವಾಗಿದೆ. ಈ ಮೂಲಕ ತಳಸಮುದಾಯದ ಆಹಾರ ಸ್ವಾತಂತ್ರ‍್ಯವನ್ನು ಕಸಿಯಲಾಗುತ್ತಿದೆ. ಇದೊಂದು ಸಂವಿಧಾನ ಬಾಹಿರ ನಿಲುವಾಗಿದೆ. ಆದ್ದರಿಂದ ಈ ಕೂಡಲೇ ಪರಿಷ್ಕರಿಸಿ ಕೆಲ ಜಯಂತಿಗಳನ್ನು ಈ ಪಟ್ಟಿಯಿಂದ ಕೈ ಬೀಡಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಲಿಂಗಸ್ಗೂರು ತಾಲೂಕು ಸಮಿತಿ ಒತ್ತಾಯಿಸಿದೆ.
ಮುಖ್ಯಮಂತ್ರಿ ಅವರಿಗೆ ಬರೆದ ಮನವಿ ಪತ್ರವನ್ನು ಮಂಗಳವಾರದಂದು ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಕರಿಯಪ್ಪ ಕಲ್ಲಪ್ಪ ಗವಡೆ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ರಮೇಶ ವೀರಾಪೂರು ಮಾತನಾಡಿ, ಧರ್ಮದ ಹೆಸರಿನಲ್ಲಿ ಎಲ್ಲ ಜನ್ಮದಿನಗಳನ್ನು ಬ್ರಾಹ್ಮಣೀಕರಣ ಮಾಡಲಾಗುತ್ತಿದ್ದು, ರಾಷ್ಟ್ರ ನಾಯಕರ ದಿನಾಚರಣೆಗಳಂದು ಮಾಂಸ ಮಾರಾಟ ನಿಷೇಧ ಮಾಡಿರುವುದು ಜನ ಸಾಮಾನ್ಯರ ಆಹಾರ ಪದ್ದತಿಯ ಮೇಲೆ ಸವಾರಿ ಮಾಡಿದಂತಾಗುತ್ತದೆ. ಕೆಲಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಹಿಡನ್ ಅಜೆಂಡಾದ ಕಾರ್ಯ ಸಾಧನೆಗೋಸ್ಕರ ಇಂತಹ ಅವೈಜ್ಞಾನಿಕ ಪದ್ದತಿಗಳನ್ನು ಜನರ ಮೇಲೆ ಬಲವಂತವಾಗಿ ಹೇರಲು ಮುಂದಾಗುತ್ತಿದ್ದಾರೆ. ಇದು ಖಂಡನೀಯ.
ಸ್ವಾತಂತ್ರ‍್ಯ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಆಹಾರದ ಹಕ್ಕನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ‍್ಯ ಎಲ್ಲರಿಗೂ ಇದೆ. ಇದನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಈಗಾಗಲೇ ಅಂಬೇಡ್ಕರ್ ಜಯಂತಿಯAದೂ ಕೂಡ ಮಾಂಸ ಮಾರಾಟ ನಿಷೇಧ ಮಾಡಲು ಮುಂದಾಗಿರುವುದು ಸಂವಿಧಾನ ವಿರೋಧಿ ಮತ್ತು ಅಂಬೇಡ್ಕರ್ ಆಶಯಗಳಿಗೆ ವಿರುದ್ದವಾದುದು ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಅಂಬೇಡ್ಕರ್ ಎಲ್ಲೂ ಕೂಡ ಅವರ ಬರಹ ಅಥವಾ ಭಾಷಣಗಳಲ್ಲಿ ಮಾಂಸ ಸೇವಿಬಾರದು ಎಂದು ಉಲ್ಲೇಖಿಸಿಲ್ಲ. ದಲಿತರ ಎಲ್ಲ ಆಚರಣೆಗಳಲ್ಲೂ ಮಾಂಸ ಆಹಾರ ಇರಬೇಕು. ಹೀಗಿದ್ದಾಗ ದಲಿತರ ಆಹಾರ ಪದ್ದತಿಯೂ ಪುರೋಹಿತಶಾಹಿ ವ್ಯವಸ್ಥೆಯಡಿ ತರಲು ಮುಂದಾಗಿರುವುದು ದಬ್ಬಾಳಿಕೆಯ ಪರಮಾವಧಿಯನ್ನು ತೋರಿಸುತ್ತದೆ. ಹೀಗಾಗಿ ಡಾ. ಅಂಬೇಡ್ಕರ್ ಸೇರಿದಂತೆ ಇತರ ಮಹಾನ್ ನಾಯಕರ ಮೇಲೆ ನಿಜವಾದ ಕಾಳಜಿ ಇದ್ದರೆ ಸಂಪೂರ್ಣ ಮದ್ಯಪಾನ ನಿಷೇಧ ಜಾರಿ ಮಾಡಲಿ ಎಂದು ಸಿಪಿಐ (ಎಂ) ತಾಲೂಕು ಸಮಿತಿ ಒತ್ತಾಯಿಸುತ್ತದೆ ಎಂದರು.
ಸರ್ಕಾರ ಈ ಕೂಡಲೇ ಈ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ನಿರ್ಲಕ್ಷ್ಯ ತೋರಿದರೆ ರಾಜ್ಯಾದ್ಯಂತ ಹೋರಾಟ ರೂಪಿಸಲಾಗವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಿಪಿಐ(ಎಂ) ಹಟ್ಟಿ ಶಾಖೆ ಕಾರ್ಯದರ್ಶಿ ಸಂಗಪ್ಪ ಸಗರದ, ಸದಸ್ಯರಾದ ಮಹ್ಮದ್ ಹನೀಫ್, ನಿಂಗಪ್ಪ ಎಂ., ಡಿವೈಎಫ್ಐ ಜಿಲ್ಲಾ ಸಮಿತಿ ಸದಸ್ಯ ಚೆನ್ನಬಸವ ಅಲ್ಲಾಭಕ್ಷ, ವೆಂಕಟೇಶ್, ರಿಯಾಜ್ ಪಾಷಾ, ಫಕೃದ್ದೀನ್, ನಾರಾಯಣ್, ಖಲೀಲ್, ಖಾಜಾ ಹುಸೇನ್ ಮುಟ್ಟಿ, ಖಾಜಾ ಹುಸೇನ್ ಹೆಚ್, ಆರ್, ದೌಲತ, ಬಾಬಾ ಜಾಲಹಳ್ಳಿ, ಬುಡ್ಡ ಸಾಬ್, ಅಸ್ಫಾಖ್ ಸೇರಿದಂತೆ ಅನೇಕರು.