ಚಿತ್ರಕೃತಿಗಳು ಸಮಾಜವನ್ನು ಜೀವಂತವಾಗಿರಿಸುತ್ತವೆ

0
10

ಕಲಬುರಗಿ: ಕಲಾವಿದರ ಕುಂಚದಿಂದ ಮೂಡಿರುವ ಚಿತ್ರಕಲೆಗಳು ಸಮಾಜದ ವಿಭಿನ್ನ ಸಂಗತಿಗಳನ್ನು ವಿವರಿಸುವುದಷ್ಟೇ ಅಲ್ಲದೇ ವಿಭಿನ್ನ ಭಾವಲೋಕಕ್ಕೆ ಸೆಳೆಯುತ್ತವೆ. ಕಲಾ ಪೋಷಕರ ಪ್ರೋತ್ಸಾಹದಿಂದ ದೃಶ್ಯಕಲಾ ಕ್ಷೇತ್ರ ಸಾಕಷ್ಟು ಬೆಳೆದಿದೆ. ಕಲಾವಿದರ ಕಲ್ಪನೆಯ ಚಿತ್ರಕೃತಿಗಳು ಸಮಾಜವನ್ನು ಸದಾ ಜಾಗೃತ ಮತ್ತು ಜೀವಂತವಾಗಿರಿಸುತ್ತವೆ ಎಂಬುದಕ್ಕೆ ಚಿತ್ರಗಳಲ್ಲಿನ ಭಾವನೆಗಳ ಅನನ್ಯತೆ ಕಾರಣ ಎಂದು ಹಿರಿಯ ಚಿತ್ರ ಕಲಾವಿದ ಬಸವರಾಜ ರೇ. ಉಪ್ಪ್ಪಿನ ಅಭಿಪ್ರಾಯಪಟ್ಟರು.

ಕಲಬುರಗಿಯ ದೃಶ್ಯ ಬೆಳಕು ಸಾಂಸ್ಕøತಿಕ ಸಂಸ್ಥೆ ಹಾಗೂ ವಿ ಬಿ ಬಿರಾದಾರ್ ಕಲಾ ಪ್ರತಿಷ್ಠಾನ ಇವುಗಳ ಸಂಯುಕ್ತಾಶ್ರಯದಲ್ಲಿ ಮಾನಕರ ಬಡಾವಣೆಯ ಬಿಸಿಲು ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದ ಲಿಯೊನಾರ್ಡೊ ಡಾ. ವಿಂಚಿ ಜನ್ಮದಿನದ ಅಂಗವಾಗಿ ವಿಶ್ವ ದೃಶ್ಯಕಲಾ ದಿನಾಚರಣೆ ಹಾಗೂ ಹಿರಿಯ ಕಲಾವಿದರಾದ ವಿ.ಬಿ. ಬಿರಾದಾರ್ ಅವರ ನಿಸರ್ಗ ಚಿತ್ರಗಳ ಪ್ರದರ್ಶನ ಮತ್ತು ಬಸವರಾಜ ಎಲ್. ಜಾನೆ ಅವರಿಂದ ಕಲಾ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ಭಾಗದ ಸೃಜನಶೀಲ ಕಲಾವಿದರು ಅತ್ಯುತ್ತಮ ಚಿತ್ರಗಳನ್ನು ಬಿಡಿಸುವುದರ ಮೂಲಕ ರಾಷ್ಟ್ರ ಮಟ್ಟದ ಕಲಾವಿದರಾಗಿ ಹೆಸರುಗಳಿಸಿರುವುದು ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಮ್ಮೆಯ ವಿಷಯ. ಮೊದಲು ಚಿತ್ರಕಲಾ ಅಧ್ಯಯನ ಮಾಡಲು ಯುವಕರಿಗೆ ಅವಕಾಶಗಳಿರಲಿಲ್ಲ. ಆದರೆ ಪ್ರಸ್ತುತ ದಿನಗಳಲ್ಲಿ ದೃಶ್ಯಕಲಾ ಬೇಡಿಕೆಯಿರುವ ಕ್ಷೇತ್ರವಾಗಿದೆ. ದೃಶ್ಯ ಕಲಾ ಅಧ್ಯಯನ ಮತ್ತು ಕೌಶಲ್ಯ ಕಲಿಕೆಗೆ ಸಂಸ್ಥೆಗಳಿವೆ. ಹಿರಿಯ ಕಲಾವಿದರ ಪ್ರೋತ್ಸಾಹ ಸಿಗುತ್ತಿದೆ. ಯುವಕರು ಕಲೆಯನ್ನು ತಪಸ್ಸಿನಂತೆ ಪ್ರಾಯೋಗಿಕತೆಗೆ ಒತ್ತು ನೀಡಿ ಕಲೆ ಕರಗತ ಮಾಡಿಕೊಂಡರೆ ವಿಶ್ವಮಟ್ಟದ ಕಲಾವಿದರಾಗಿ ಬೆಳೆಯಬಹುದು ಎಂಬುದಕ್ಕೆ ಪ್ರಖ್ಯಾತ ಲಿಯೊನಾರ್ಡೊ ಡಾ. ವಿಂಚಿಯ ಚಿತ್ರಕಲೆಯ ಸ್ಪೂರ್ತಿ ಮತ್ತು ಪ್ರೇರಣೆಯಾಗಿದ್ದಾರೆ ಎಂದರು.

ಕರ್ಲಾಟಕ ಲಲಿತಕಲಾ ಅಕಾಡೆಮಿಯ ನೂತನ ಸದಸ್ಯ ಬಸವರಾಜ್ ಎಲ್ ಜಾನೆ ಮಾತನಾಡಿ ಚಿತ್ರಕಲಾ ಪ್ರಾತ್ಯಕ್ಷಿಕೆ ಸಂದರ್ಭದಲ್ಲಿ ಉತ್ತಮ ಸಂದೇಶಗಳ ಚಿತ್ರಗಳನ್ನು ಬಿಡಿಸಲು ಸಾಧ್ಯ. ಸಮಕಾಲೀನ ಸಂದರ್ಭ ಮತ್ತು ಸನ್ನಿವೇಶಗಳ ಕುರಿತು ಚಿತ್ರಗಳ ನೋಡುಗರಿಗೆ ಮನಸ್ಪರ್ಶಿಸುವಂತಹ ಚಿತ್ರಗಳು ರೂಪಗೊಳ್ಳುತ್ತವೆ. ಹೆಚ್ಚು ಭಾವನಾತ್ಮಕತೆಯನ್ನು ಬೆಳೆಸುತ್ತವೆ. ಇದೊಂದು ವಿಶಿಷ್ಠ ಅನುಭವ ಎನಿಸುತ್ತದೆ. ದೃಶ್ಯ ಕಲೆ ಒಂದು ವಿಭಿನ್ನ ಪ್ರಾಯೋಗಿಕ ವೃತ್ತಿ ಕ್ಷೇತ್ರ ಆಗಿರುವ ಕಾರಣ ಯುವ ಕಲಾವಿದರಿಗೆ ಆಸಕ್ತಿ ಮತ್ತು ಅಭಿರುಚಿ ಮುಖ್ಯವಾಗಲಿದೆ. ಈ ನಿಟ್ಟಿನಲ್ಲಿ ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ವೇದಿಕೆ ಕಲ್ಪಿಸುತ್ತಿರುವ ದೃಶ್ಯ ಬೆಳಕು ಮತ್ತು ವಿ ಬಿ ಬಿರಾದಾರ್ ಕಲಾ ಪ್ರತಿಷ್ಠಾನ ಸಂಸ್ಥೆಗಳ ಕಾರ್ಯ ಶ್ಲಾಘನಿಯ ಎಂದರು.

ಪುಸ್ತಕ ಪ್ರಾಧಿಕಾರದ ನೂತನ ಸದಸ್ಯ ಬಿ. ಎಚ್. ನಿರಗುಡಿ ಮುಖ್ಯ ಅತಿಥಿಯಾಗಿ ಮಾತನಾಡಿ ಸಾಹಿತ್ಯ ಮತ್ತು ಕಲಾ ಕ್ಷೇತ್ರದ ನಡುವೆ ಅವಿನಭಾವ ಸಂಬಂಧವಿದೆ. ಸಮಾಜದ ವಿಭಿನ್ನ ಸಂಸ್ಕøತಿ ಮತ್ತು ಸಮಕಾಲೀನ ಸಂದೇಶಗಳನ್ನು ಹೇಳುತ್ತವೆ. ಸಾಹಿತ್ಯ ಮತ್ತು ಕಲಾ ಕ್ಷೇತ್ರ ಎಲ್ಲರಿಗೂ ಒಗ್ಗುವುದಿಲ್ಲ. ಎರಡು ಕ್ಷೇತ್ರಗಳತ್ತ ಆಸಕ್ತಿ ಬೆಳೆಸಿಕೊಂಡರೆ ಅತ್ಯುತ್ತಮ ಅವಕಾಶಗಳು ಸಿಗಲಿವೆ. ಕಲಬುರಗಿಯಲ್ಲಿ ಸೃಜನಶೀಲ ಕಲಾವಿದರಿದ್ದಾರೆ. ಆದರೆ ಸೂಕ್ತ ಕಲಾ ಗ್ಯಾಲರಿಯೊಂದು ಆರಂಭವಾದರೆ ಯುವ ಕಲಾವಿದರಿಗೆ ಪ್ರೋತ್ಸಾಹ ಮತ್ತು ಉತ್ತೇಜನ ಸಿಗಲಿದೆ ಎಂದರು.

ಹಿರಿಯ ಕಲಾವಿದರು ಹಾಗೂ ನಾಡೋಜ ಡಾ. ಜೆ. ಎಸ್. ಖಂಡೇರಾವ್ ಅಧ್ಯಕ್ಷತೆ ಮಾತನಾಡಿ 14ನೇ ಶತಮಾನದ ಪ್ರತಿಭಾವಂತ ಕಲಾವಿದ ಲಿಯೋನಾರ್ಡೊ ಡಾ. ವಿಂಚಿಯವರ ಜನ್ಮದಿನದ ಅಂಗವಾಗಿ ವಿಶ್ವ ದೃಶ್ಯಕಲಾ ದಿನವನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ಚಿತ್ರ ಕಲಾಕ್ಷೇತ್ರ ಅಭಿವೃದ್ಧಿ ಸಾಧಿಸಲು ಲಿಯೋನಾರ್ಡೊ ಡಾ. ವಿಂಚಿಯವರ ಸ್ಪೂರ್ತಿಯೇ ಕಾರಣ. ಚಿತ್ರ ಕಲೆ, ದೃಶ್ಯ ಕಲೆ, ಪೈಂಟಿಂಗ್ ಕ್ಷೇತ್ರದಲ್ಲಿ ಆಸಕ್ತಿಯಿರುವ ಕಲಾವಿದರು ಸಮಯ ಪ್ರಜ್ಞೆ ಮತ್ತು ಸೃಜನಶೀಲ ಮನಸಿನಿಂದ ಪ್ರಾಯೋಗಿಕತೆಗೆ ಒಗ್ಗಿಕೊಂಡರೆ ಅತ್ಯುತ್ತಮ ಸಾಧಕನಾಗಲು ಸಾಧ್ಯವಿದೆ. ಸಮಾಜಕ್ಕೆ ಉತ್ತಮ ಕೊಡಗೆ ನೀಡಲು ಡಾ. ವಿಂಚಿಯವರ ಜೀವನಚರಿತ್ರೆ ಅಧ್ಯಯನ ಮಾಡಿದರೆ ಪ್ರಯೋಗಶೀಲ ಕಲಾವಿದನಾಗಿ ಬೆಳೆಯಬಹುದು ಎಂದರು.

ವಿ.ಬಿ. ಬಿರಾದಾರ್ ಕಲಾ ಪ್ರತಿಷ್ಠಾನದ ಅಧ್ಯಕ್ಷ ವಿಬಿ ಬಿರಾದಾರ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೃಶ್ಯ ಬೆಳಕು ಸಾಂಸ್ಕøತಿಕ ಸಂಸ್ಥೆಯ ಅಧ್ಯಕ್ಷ ಡಾ. ಪಿ. ಪರಶುರಾಮ ಕಾರ್ಯಕ್ರಮ ನಿರ್ವಹಿಸಿದರು. ಮಲ್ಲಿಕಾರ್ಜುನ ಕೋರಳ್ಳಿ ವಂದಿಸಿದರು. ಕೆಚ್. ಎಸ್. ಬಸವಪ್ರಭು, ಸಂಗಯ್ಯ ಹಳ್ಳದಮಠ್, ಮೋಹನ್ ಸೀತನೂರ್, ಡಾ. ಮಾಯ್ಯ ಬಡಿಗೇರ್, ಬಾಬುರಾವ್ ಹೆಚ್. ಅಂಬಾರಾಯ ಚಿನ್ಮಳ್ಳಿ, ಮಂಜುಳ ಜಾನೆ, ಶಾಂತಲಾ ನಿಷ್ಠಿ, ಮೀನಾಕ್ಷಿ ಗುತ್ತೇದಾರ್, ಲಕ್ಷ್ಮಿಕಾಂತ ಮನೂಕರ್, ಸಿದ್ದು ಮರಗೋಳ, ಜಗದೀಶ್ ಕಾಂಬಳೆ, ಡಾ. ಕೆ. ಎಂ. ಕುಮಾರಸ್ವಾಮಿ, ಗೋಪಾಲ್ ಕೆ.ಪಿ. ಉಪಸ್ಥಿತರಿದ್ದರು.

ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಕೇಂದ್ರವಾದ ಕಲಬುರಗಿಯಲ್ಲಿ ಅತ್ಯುತ್ತಮ ಕಲಾವಿದರಿದ್ದಾರೆ. ಅವರ ಸೃಜನಶೀಲ ಕಲಾಕೃತಿಗಳು ದೇಶ ಮತ್ತು ವಿದೇಶಗಳಲ್ಲಿ ಪ್ರದರ್ಶನ ಕಂಡಿವೆ. ಕಲ್ಯಾಣ ಕರ್ನಾಟಕ ಭಾಗದ ಹಿರಿಯ ಕಲಾವಿದರ ಕಲಾಕೃತಿಗಳನ್ನು ಶಾಸ್ವತವಾಗಿ ಪ್ರದರ್ಶನಗೊಳ್ಳಲು ಸುಸಜ್ಜಿತ ಕಲಾ ಗ್ಯಾಲರಿ ಅಗತ್ಯವಿದೆ. ರಾಷ್ಟ್ರ ಮಟ್ಟದ ಕಲಾವಿದರ ಅಪರೂಪದ ಕಲೆಗಳು ಉಳಿಯಬೇಕಿದೆ. ದೃಶ್ಯ ಕಲಾಕ್ಷೇತ್ರವನ್ನು ಯುವ ಜನತೆ ಹೆಚ್ಚು ಆಸಕ್ತಿವಹಿಸುತ್ತಿದ್ದಾರೆ. ಅವುಗಳ ಮೌಲ್ಯ ಮತ್ತು ಮಹತ್ವ ಉಳಿಯಬೇಕಾದರೆ ಪುಸ್ತಕ ಪ್ರಕಟಿಸಬೇಕಿದೆ. ಮಂದಿನ ದಿನಗಳಲ್ಲಿ ಹಿರಿಯ ಕಲಾವಿದರ ಜೀವನ ಸಾಧನೆ ಕುರಿತು ಕನ್ನ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿಸಲು ಪ್ರಯತ್ನಿಸಲಾಗುವುದು. -ನೀರಗುಡಿ, ಸಾಹಿತಿ ಹಾಗೂ ಸಂಘಟಕರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here