ಕಲಬುರಗಿ: ಲೋಕಸಭಾ ಚುನಾವಣೆ ಅಬ್ಬರ ಜೋರಾಗಿ ನಡೆದಿದ್ದು, ಕಲಬುರಗಿಯಲ್ಲಿ ಅಭ್ಯರ್ಥಿ ಓರ್ವರು ಅನೆಯ ಪ್ರತಿಮೆಯ ಮೇಲೆ ಬಂದು ತನ್ನ ಉಮೆದುವಾರಿಕೆ ಸಲ್ಲಿರುವುದು ಕುತೂಹಕಾರಿ ಬೆಳವಣಿಗೆ ಗುರುವಾರ ನಡೆಯಿತು.
ಹುಚ್ಚಪ್ಪ ವಡ್ಡರ್ ಬಿಎಸ್ಪಿ ಅಭ್ಯರ್ಥಿಯಾಗಿ ಅನೆಯ ಪ್ರತಿಮೆಯ ಮೇಲೆ ಬಂದು ನಾಮಪತ್ರ ಸಲ್ಲಿಸಿದರು. ಬಿಜೆಪಿ ರಾಜ್ಯಾಧಕ್ಷ ವಿಜಯೇಂದ್ರ ಹಾಗೂ ಶಾಸಕರು, ಮಾಜಿ ಶಾಸಕರೊಂದಿಗೆ ಕಲಬುರಗಿ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ನಾಮಪತ್ರ ಸಲ್ಲಿಕೆಗೆ ಜಿಲ್ಲಾ ಚುನಾವಣಾ ಅಧಿಕಾರಿ ಕಚೇರಿಗೆ ಆಗಮಿಸಿದ್ದರು. ಅದರೆ ಅವರ ವಾಹನ ಕಚೇರಿ ಆವರಣದಲ್ಲಿ ಬಿಡಲು 144ಕಲಂ ಅಡ್ಡಿಯಾಯಿತು.
ಬಿಎಸ್ಪಿ ಅಭ್ಯರ್ಥಿಯನ್ನು ಆನೆಯ ಸಮೇತ ವಾಹನವನ್ನು ಪೊಲೀಸರು ಒಳಬಿಟ್ಟರುವುದಕ್ಕೆ ಕೆಲ ಕಾಲ ವಾಗ್ವಾದ ನಡೆಯಿತು.