ಡಾ. ಉಮೇಶ್ ಜಾಧವ್ ನಾಮಪತ್ರ ಸಲ್ಲಿಕೆ: ರೋಡ್ ಶೋ ಮೂಲಕ ಶಕ್ತಿ ಪ್ರದರ್ಶನ

0
65

ಕಲಬುರಗಿ : ಲೋಕಸಭಾ ಮೀಸಲು ಕ್ಷೇತ್ರದ ಕಲ್ಬುರ್ಗಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಡಾ. ಉಮೇಶ್ ಜಾಧವ್ ಬೃಹತ್ ಜನಸಾಗರದೊಂದಿಗೆ ಮೆರವಣಿಗೆಯಲ್ಲಿ ಸಾಗಿ ಗುರುವಾರ ನಾಮಪತ್ರ ಸಲ್ಲಿಕೆ ಮಾಡಿದರು.

ನಗರೇಶ್ವರ ಶಾಲಾ ಆವರಣದಿಂದ ಬೃಹತ್ ಮೆರವಣಿಗೆ ಪ್ರಾರಂಭಗೊಂಡಿತು. ಇಡೀ ಕಲ್ಬುರ್ಗಿ ನಗರ ಕೇಸರಿ ಟೋಪಿ, ಬಿಜೆಪಿ ಧ್ವಜ, ಶ್ರೀರಾಮ ಧ್ವಜಗಳಿಂದ ಕೇಸರಿಮಯವಾಗಿತ್ತು. ಮೆರವಣಿಗೆ ಯುದ್ದಕ್ಕೂ ಮೋದಿಯವರಿಗೆ ಜಯಕಾರ, ಜೈ ಶ್ರೀ ರಾಮ್, ಭೋಲೊ ಭಾರತ್ ಮಾತಾ ಕಿ ಜೈ, ಪೋಷಣೆಗಳು ಮೊಳಗುತ್ತಿತ್ತು.

Contact Your\'s Advertisement; 9902492681

ಅಬ್ ಕಿ ಬಾರ್ ಚಾರ್ ಸೌ ಪಾರ್ ಘೋಷಣೆ ಯೊಂದಿಗೆ ಅಸಂಖ್ಯ ಸಂಖ್ಯೆಯಲ್ಲಿ ಸೇರಿದ ಜನಸ್ತೋಮದ ಜಯ ಘೋಷ ಮುಗಿಲು ಮುಟ್ಟಿತ್ತು. ಸುಮಾರು ಮೂರು ಗಂಟೆಗಳ ಕಾಲ ನಡೆದ ಭವ್ಯ ಮೆರವಣಿಗೆಯು ನಗರೇಶ್ವರ ಶಾಲಾ ಆವರಣದಿಂದ ಹೊರಟು ಸುಭಾಷ್ ಚೌಕ್, ಪೊಲೀಸ್ ಚೌಕ್, ಜಗತ್ ವೃತ್ತ ಕೆಬಿನ್ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಸಾಗರೋಪಾದಿಯಲ್ಲಿ ಅಭಿಮಾನಿಗಳು ಕಾರ್ಯಕರ್ತರು ಹರಿದು ಬಂದರು. ದಾರಿಯುದ್ದಕ್ಕೂ ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಅಲ್ಲಲ್ಲಿ ಪಾನೀಯ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.

ಮೆರವಣಿಯುದ್ದಕ್ಕೂ ಅತ್ಯಾಕರ್ಷಕವಾದ ತೆರೆದ ವಾಹನದಲ್ಲಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಸೇರಿದಂತೆ ಗಣ್ಯ ನಾಯಕರು ಸಾಗುತ್ತಿದ್ದ ವೇಳೆ ಪುಷ್ಪವೃಷ್ಟಿಯನ್ನು ಮಾಡಿ ಶುಭಕೋರಿದರು. ಮೆರವಣಿಗೆ ಮುಂಭಾಗದಲ್ಲಿ ಲಂಬಾಣಿ ಮಹಿಳೆಯರು ಕಲಶ ಹೊತ್ತು ಅತ್ಯಾಕರ್ಷಕವಾದ ಲಂಬಾಣಿ ನೃತ್ಯ ಮಾಡುತ್ತಾ ಮುಂದೆ ಸಾಗಿದರೆ ಡೊಳ್ಳು ಮೇಳ,ಬಾಜಾ ಭಜಂತ್ರಿ, ಹಲಿಗೆ ಮೇಳದ ಕಲಾವಿದರು ಭಾಗವಹಿಸಿದ ಸಾಂಸ್ಕೃತಿಕ ಮೆರವಣಿಗೆ ಶೋಭಾಯಮನವಾಗಿತ್ತು.

ಡಿಜೆಯಲ್ಲಿ ಬಿಜೆಪಿಯ ಹಾಡಿಗೆ ಯುವಕರು ಕುಣಿದು ಕುಪ್ಪಳಿಸಿದರು. ಸೂರ್ಯನಗರಿಯಲ್ಲಿ ಇಂದು ತಾಪಮಾನ 40 ರಷ್ಟಿದ್ದು ಸುಡು ಬಿಸಿಲನ್ನು ಲೆಕ್ಕಿಸದೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪ್ರಧಾನಿ ಮೋದಿ ಹಾಗೂ ಡಾ. ಉಮೇಶ್ ಜಾಧ ವ್ ಅವರ ಮೇಲಿನ ವಿಶ್ವಾಸದೊಂದಿಗೆ ನಾಮಪತ್ರ ಸಲ್ಲಿಕೆ ಮೆರವಣಿಗೆಯನ್ನು ಐತಿಹಾಸಿಕ ಘಟನೆಯನ್ನಾಗಿ ಮಾಡಿದರು.‌

ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಹಿರಿಯ ಮುಖಂಡರಾದ ಅರವಿಂದ ಲಿಂಬಾವಳಿ , ಮಾಜಿ ಕೇಂದ್ರ ಸಚಿವರು ಹಾಗೂ ಬಿಜಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ,ಜೆಡಿಎಸ್ ಮುಖಂಡರಾದ ಗುರುಮಠಕಲ್ ಶಾಸಕರಾದ ಶರಣಗೌಡ ಕಂದಕೂರ್, ಬಾಲರಾಜ ಗುತ್ತೇದಾರ್, ಬಿಜೆಪಿ ಕಲ್ಬುರ್ಗಿ ಉಸ್ತುವಾರಿ ರಘುನಾಥ ಮಲ್ಕಾಪುರೆ, ಕೃಷ್ಣಾರೆಡ್ಡಿ ನಿತಿನ್ ಗುತ್ತೇದಾರ್, ಶಾಸಕರಾದ ಬಸವರಾಜ ಮತ್ತಿಮೂಡು, ವಿಧಾನಪರಿಷತ್ ಸದಸ್ಯರಾದ ಬಿ.ಜಿ ಪಾಟೀಲ್.ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವರಾಜ್ ಪಾಟೀಲ್ ರದ್ದೇವಾಡಗಿ, ಮಾಜಿ ಶಾಸಕರಾದ ರಾಜಕುಮಾರ್ ಪಾಟೀಲ್ ತೆಲ್ಕೂರ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಮರನಾಥ ಪಾಟೀಲ್, ಯುವ ಮುಖಂಡರಾದ ನಿತಿನ್ ಗುತ್ತೇದಾರ್, ಬಿಜೆಪಿ ನಗರ ಅಧ್ಯಕ್ಷ ಚಂದು ಪಾಟೀಲ್, ಬಿಜೆಪಿ ಮುಖಂಡರಾದ ಅವ್ವಣ್ಣ ಮ್ಯಾಕೇರಿ ಶೋಭಾ ಬಾಣಿ, ಕೃಷ್ಣ ಜಿ. ಕುಲಕರ್ಣಿ ದಯಾಘನ ಧಾರವಾಡಕರ್ ಹಾಗು ವಿವಿಧ ಮಂಡಲಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here