7 ರಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ; ಜಿಲ್ಲಾ ಪಂಚಾಯತ್ ಸಿ.ಇ.ಓ. ಭಂವರ್ ಸಿಂಗ್ ಮೀನಾ ಕರೆ

0
15

ಕಲಬುರಗಿ: ೨೦೨೪ರ ಲೋಕಸಭಾ ಚುನಾವಣೆ ಮೇ. ೭ ರಂದು ಜರುಗಲಿದ್ದು, ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಭಂವರ್ ಸಿಂಗ್ ಮೀನಾ ಕರೆ ನೀಡಿದರು.

ಗುರುವಾರದಂದು ಕೇಂದ್ರ ಬಸ್ ನಿಲ್ದಾಣದಲ್ಲಿ ಭಾರತ ಚುನಾವಣೆ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಸ್ವೀಪ್ ಸಮಿತಿ ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಹಯೋಗದೊಂದಿಗೆ ಲೋಕಸಭಾ ಚುನಾವಣೆ ೨೦೨೪ ರ ಹಿನ್ನಲೆಯಲ್ಲಿ ಸಸಿಗೆ ನೀರೆರೆಯುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು

Contact Your\'s Advertisement; 9902492681

ಬಸ್‌ಗಳಿಗೆ ಪೋಸ್ಟರ ಅಂಟಿಸಿ ಸಾರ್ವಜನಿಕರಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಮತದಾರರಿಗೆ ಯಾವುದೇ ತೊಂದರೆ ಆಗದೇ ಹಾಗೆ ಆಪ್‌ಗಳ ಮುಖಾಂತರ ತಾವು ಎಲ್ಲಿ ಮತದಾನ ಮಾಡಬೇಕೆಂದು ಅರಿವು ಮೂಡಿಸಲು ಹಲವಾರು ಯೋಜನೆಗಳು ಹಾಕಿಕೊಂಡಿದ್ದೇವೆ ಎಂದರು.

ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದೇವೆ ಮತದಾನ ಪ್ರಜಾಪ್ರಭುತ್ವದ ಹಬ್ಬ ನಾವೆಲ್ಲರೂ ಸೇರಿಕೊಂಡು ಹಬ್ಬದ ರೀತಿಯಲ್ಲಿ ಮತದಾನ ಮಾಡಬೇಕೆಂದರು.

ಮತದಾನ ಪ್ರಮಾಣ ಹೆಚ್ಚಿಸಲು ಸತತವಾಗಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಳ್ಳವುದರ ಮೂಲಕ ಜನರಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಮಗದ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ಪ್ರತಿಜ್ಞೆ ವಿಧಿ ಭೋಧಿಸಿ ಮಾತನಾಡಿ, ಸ್ವೀಪ್ ಸಮಿತಿ ಹಾಗೂ ಜಿಲ್ಲಾಡಳಿತ ವತಿಯಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನ ಮಾಡುವುದು ಪ್ರಜಾಪ್ರಭುತ್ವದ ಹಬ್ಬವಾಗಿದೆ ನಾವೆಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಮತದಾನ ಮಾಡಬೇಕೆಂದರು.

ನಮ್ಮಲ್ಲಿ ಅನೇಕ ಸಿಬ್ಬಂದಿ ವರ್ಗದವರು ಬೇರೆ ಊರುಗಳಲ್ಲಿ ಅವರ ಗುರುತಿನ ಚೀಟಿ ಇದೆ. ಪೋಸ್ಟಲ್ ಬ್ಯಾಲೇಟ್ ಮುಖಾಂತರ ಮತದಾನ ಮಾಡುತ್ತಿದ್ದಾರೆ ಮತದಾನದ ಜಾಗೃತಿ ನೀವು ಇನ್ನೂಬ್ಬರಿಗೆ ತಿಳಿಯಪಡಿಸಬೇಕೆಂದರು.

ಮಹಾನಗರ ಪಾಲಿಕೆ ಆಯುಕ್ತರಾದ ಭುವನೇಶ ದೇವಿದಾಸ ಪಾಟೀಲ ಪ್ರತಿಯೊಬ್ಬರು ಜವಾಬ್ದಾರಿಯಿಂದ ಮತ ಚಲಾಯಿಸಬೇಕು ಇದು ಐದು ವರ್ಷಗಳಿಗೆ ಒಂದು ಸಲ ಮತದಾನ ಇರುತ್ತದೆ ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಈಗಾಗಲೇ ಮತದಾನ ಬಗ್ಗೆ ಹಲವಾರು ಜಾಗೃತಿ ಮೂಡಿಸಲಾಗಿದೆ. ಯಾವುದೇ ಭಯ ಪಡದೆ ನಿರ್ಭಯವಾಗಿ ಮತದಾನ ಮಾಡಬೇಕೆಂದರು.

ಜಿಲ್ಲಾ ಚುನಾವಣಾಧಿಕಾರಿ ಬಿ. ಫೌಜಿಯಾ ತರನ್ನುಮ ಅವರು ಮತದಾನ ಜಾಗೃತಿ ಮೂಡಿಸಲು ಬಲೂನುಗಳನ್ನು ಹಾರಿಬಿಟ್ಟರು ಮತ್ತು ಬಸ್‌ಗಳಿಗೆ ಮತದಾನ ಸ್ಟೀಕರ್ ಅಂಟಿಸಿದರು.

ಇದೇ ಸಂದರ್ಭದಲ್ಲಿ ಕೆನರಾ ಬ್ಯಾಂಕ್‌ನಿಂದ ಉಚಿತವಾಗಿ ನೀಡಿರುವ ನೀರಿನ ಫಿಲ್ಟರ್‌ಗಳಿಗೆ ಜಿಲ್ಲಾ ಚುನಾವಣಾಧಿಕಾರಿ ರಿಬ್ಬನ ಕತ್ತರಿಸುವುದರ ಮೂಲಕ ಉದ್ಫಾಟಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಹಾಗೂ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಅಬ್ದುಲ್ ಅಜೀಮ್, ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ಧಪ್ಪ ಗಂಗಾಧರ, ನಾರಾಯಣಪ್ಪ ಕುರಬರ್, ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷ ಹಾಗೂ ಅಧಿಕಾರಿಗಳು ಸಾರ್ವಜನಿಕರು ಅಪರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here