ಕಲಬುರಗಿ: ತುಮಕೂರಿನ ಡೊಡ್ಡಗುಣಿ ಹತ್ತಿರ ಮಾರ್ಚ್ 31 ರಂದು ರುಕ್ಸಾನಾ ಮತ್ತು ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಕ್ಯಾಂಪಸ್ ನಲ್ಲಿ ನಡೆದ ವಿದ್ಯಾರ್ಥಿನಿ ನೇಹಾಳ ಭೀಕರ ಕೊಲೆ ಅತ್ಯಂತ ಖಂಡನೀಯ, ತಪ್ಪಿತಸ್ಥ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಿ ಇಂತಹ ಕೃತ್ಯಗಳು ಮುಂದೆ ನಡೆಯದಂತೆ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಶಿಕ್ಷೆಯಾಗಬೇಕೆಂದು ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ಶಹೇನಾಜ್ ಅಕ್ತರ್ ಅವರು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು ಈ ಹಿಂದೆ ಒಂದೇ ಕುಟುಂಬದ ದಕ್ಷಿಣ ಕನ್ನಡ ನಾಡಿನಲ್ಲಿ ಒಂದೆ ಕುಟುಂದ ನಾಲ್ವರನ್ನು ಅಮಾನುಷ್ಯವಾಗಿ ಕೊಲೆ ಮಾಡಲಾಗಿತ್ತು. ತುಮಕೂರುನಲ್ಲಿ ರುಕ್ಸಾನ್ ಕೊಲೆ ನಡೆಯಿತು. ಗುರುವಾರ ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ನಡೆದಿದೆ. ಇಂತಹ ಕೃತ್ಯಗಳನ್ನು ಧರ್ಮ ಮತ್ತು ಜಾತಿಗಳ ತಲೆಗೆ ಕಟ್ಟುವ ಕೆಲಸ ಗೋದಿ ಮೀಡಿಯಾಗಳು ಮಾಡುತ್ತಿವೆ, ಇದಕ್ಕೆ ಕುವಿಗುಡಬಾರದೆಂದು ಮನವಿ ಮಾಡಿದ್ದರು.
ಎಲ್ಲಾ ಧರ್ಮಗಳಲ್ಲಿ ಇಂತಹ ಅಪಕೃತ್ಯ ನಡೆಸುವ ವ್ಯಕ್ತಿಗಳು ಇರುತ್ತಾರೆ ಇಂತಹವರಿಂದ ಸಮಾಜವನ್ನು ಕಾಪಾಡಿ ಶಾಂತಿ ವ್ಯವಸ್ಥೆ ಸ್ಥಾಪಿಸುವ ಜವಾಬ್ದಾರಿ ಸರಕಾರಗಳದಾಗಿದ್ದು, ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಶೋಷಣೆ, ಕೊಲೆಗಳು ದಿನೇ ದಿನೇ ಹೆಚ್ಚುತ್ತಿವೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಠಿಣ ಕಾನೂನುಗಳು ರೂಪಿಸಿ ಮಹಿಳೆಯರಿಗೆ ರಕ್ಷಣೆ ನೀಡುವಂತಹ ವ್ಯವಸ್ಥೆ ಸ್ಥಾಪನೆಯಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.
ಗುರುವಾರ ರಂದು ಎಂಸಿಎ ಮೊದಲ ವರ್ಷದಲ್ಲಿ ಓದುತ್ತಿದ್ದ ನೇಹಾ ಹಿರೇಮಠ (24) ಎಂಬ ವಿದ್ಯಾರ್ಥಿನಿಯನ್ನು ಹಡಹಾಗಲೆ ತನ್ನ ಹಳೆಯ ಸಹಪಾಠಿ ಚಾಕುವಿನಿಂದ ಕೊಲೆಮಾಡಿ ಹತ್ಯೆಗೈದಿರುವ ಕೃತ್ಯ ಪ್ರತಿ ದಿನವೂ ದೇಶದಲ್ಲಿ ಒಂದಲ್ಲಾ ಒಂದು ಘಟನೆಗಳು ನಡೆಯುತ್ತಿವೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎಲ್ಲಾ ಶಾಲಾ – ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡುವ ನಿಟ್ಟಿನಲ್ಲಿ ಸರಕಾರಗಳು ಕೆಲಸ ಮಾಡಬೇಕೆಂದು ಆಗ್ರಹಿಸಿದ್ದಾರೆ.