ನೇಹಾ ಹಿರೇಮಠಳಂತಹ ಮಕ್ಕಳ ರಕ್ಷಣೆಗಾಗಿ ಬಿಜೆಪಿಯನ್ನು ಬೆಂಬಲಿಸಿ: ಡಾ. ಉಮೇಶ್ ಜಾಧವ್

0
35

ಸೇಡಂ: ಅಮಾಯಕ ಹೆಣ್ಣು ಮಗಳು ನೇಹಾಳನ್ನು ಬರ್ಬರವಾಗಿ ಹತ್ಯೆಗೈದು ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದ ಘಟನೆಯು ಮರುಕಳಿಸದೆ ಇರಲು ಮತ್ತು ಸುರಕ್ಷಿತ ಬದುಕು ಸಾಗಿಸಲು ಬಿಜೆಪಿಯನ್ನು ರಾಜ್ಯದ ಜನತೆ ಬೆಂಬಲಿಸಬೇಕು ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಕರೆ ನೀಡಿದ್ದಾರೆ.

ಸೇಡಂನಲ್ಲಿ ಮಂಗಳವಾರ ನಡೆದ ಮಹಿಳಾ ಸಮಾವೇಶವನ್ನೂದ್ದೇಶಿಸಿ ಮಾತನಾಡಿ ನೇಹಾ ಹತ್ಯೆಯ ಮರಣೋತ್ತರ ಪರೀಕ್ಷೆ ಕೈ ಸೇರಿದ್ದು ಆಕೆಯನ್ನು 14 ಬಾರಿ ಚಾಕುವಿನಿಂದ ಅಮಾನುಷವಾಗಿ ತಿವಿದು ಕೇವಲ 58 ಸೆಕೆಂಡುಗಳಲ್ಲಿ ಹತ್ಯೆ ಮಾಡಲಾಗಿದೆ ಎಂದು ವರದಿ ನೀಡಲಾಗಿದೆ. ನೇಹಾಳ ತಾಯಿಯ ಮನೆ ಕೇವಲ
20 -30 ಮೀಟರ್ ಅಂತರದಲ್ಲಿತ್ತು.

Contact Your\'s Advertisement; 9902492681

ಈ ಬರ್ಬರ ಸಾವು ನಾಡಿನ ಜನತೆಯನ್ನು ತಲ್ಲಣ ಗೊಳಿಸಿದೆ. ಮಾತ್ರವಲ್ಲ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದ ಹೀನ ಕೃತ್ಯವಾಗಿದೆ. ಇಂತಹ ಹೇಯ ಕೃತ್ಯಗಳು ನಡೆಯದೆ ಇರಲು ಮತ್ತು ಹೆಣ್ಣು ಮಕ್ಕಳು ಸುರಕ್ಷಿತ ಬದುಕು ಸಾಗಿಸಲು ಬಿಜೆಪಿ ಆಡಳಿತವೇ ದೇಶಕ್ಕೆ ಬೇಕಾಗಿದೆ. ಕಾಂಗ್ರೆಸ್ ಆಡಳಿತವು ಈ ಹತ್ಯೆಯನ್ನು ಕ್ಷುಲ್ಲಕವಾಗಿ ಪರಿಗಣಿಸಿ ವೈಯಕ್ತಿಕ ವಿಚಾರವೆಂದು ಏಕಾಏಕಿ ಹೇಳಿಕೆ ನೀಡಿ ಸಮಾಜದ ಕೆಂಗಣ್ಣಿಗೆ ಗುರಿಯಾಗಿತ್ತು.

ನಾಡಿನ ಜನತೆ ಒಕ್ಕೊರಳಿನಿಂದ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದಾಗ ತನಿಖೆಗೆ ಮುಂದಾಯಿತು. ಆನಂತರ ವಷ್ಟೇu ಸಿಐಡಿ ತನಿಖೆಗೆ ಒಪ್ಪಿಸಿತು. ಕಾಂಗ್ರೆಸ್ ಸರಕಾರವು ಮಹಿಳೆಯರಿಗೆ ರಕ್ಷಣೆಯನ್ನು ನೀಡುವುದಿಲ್ಲ ಮತ್ತು ತುಷ್ಟೀಕರಣ ನೀತಿಯಿಂದ ತನಿಖೆಗೂ ಹಿಂದೆ ಮುಂದೆ ನೋಡಿತು ಎಂದು ಆಪಾದಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಮಹಿಳೆಯರಿಗೆ ಮೀಸಲಾತಿ ನೀಡಲು ನೂತನ ಪಾರ್ಲಿಮೆಂಟಿನ ಮೊದಲ ಅಧಿವೇಶನದಲ್ಲಿ ನಾರಿ ಶಕ್ತಿ ವಂದನ್ ಮಸೂದೆಯನ್ನು ಅಂಗೀಕರಿಸಿತು, ಶೇಕಡ 33 ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ನೀಡಲು ಮೋದಿಯವರು ಐತಿಹಾಸಿಕ ನಿರ್ಧಾರ ಕೈಗೊಂಡರು.

ಈ ವರ್ಷ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪರೇಡ್ ಮೈದಾನದಲ್ಲಿ ಮಹಿಳೆಯರ ವಿಶೇಷ ಸಾಂಸ್ಕೃತಿಕ ಪ್ರದರ್ಶನಕ್ಕೆ ಅವಕಾಶ ಮಾಡಿ ಕೊಟ್ಟರು. ಬುಡಕಟ್ಟು ಜನಾಂಗದ ಮಹಿಳೆಯನ್ನು ರಾಷ್ಟ್ರದ ಅತ್ಯುನ್ನತ ಸ್ಥಾನ ರಾಷ್ಟ್ರಪತಿ ಹುದ್ದೆಗೆ ನೇಮಿಸಿ ಗೌರವಾನ್ವಿತ ದ್ರೌಪದಿ ಮುರ್ಮು ಆ ಹುದ್ದೆಯನ್ನು ಅಲಂಕರಿಸಿದರು. ನಿರ್ಮಲಾ ಸೀತಾರಾಮನ್ ಅವರಿಗೆ ಬಹಳ ಮಹತ್ವವಾದ ವಿದೇಶಾಂಗ ಮತ್ತು ಹಣಕಾಸು ಖಾತೆಯನ್ನು ನೀಡಿದರು. ಕೇಂದ್ರ ಆರೋಗ್ಯ ಖಾತೆಯನ್ನು ಮಹಿಳೆಯರಿಗೆ ನೀಡಿದರು.

ಇದು ಮೋದಿ ಆಡಳಿತದ ಅಲ್ಲಿ ಮಹಿಳೆಯರಿಗೆ ಸಿಕ್ಕ ಸ್ಥಾನ ಮಾನ ಮತ್ತು ಗೌರವವಾಗಿದೆ. ಚಿಂಚೋಳಿಯಂತಹ ಬಡ ತಾಂಡಾ ಕುಟುಂಬದಲ್ಲಿ ಹುಟ್ಟಿದ ನನಗೆ ಮಹಿಳೆಯರು ನೀರಿಗಾಗಿ ಮುಂಜಾನೆ ಐದು ಗಂಟೆಗೆ ಎದ್ದು ನಾಲ್ಕೈದು ಕಿಲೋಮೀಟರ್ ನಡೆದು ಹೋಗುತ್ತಿದ್ದುದನ್ನು ನೋಡಿದ್ದೇನೆ. ಕಾಂಗ್ರೆಸ್ ಆಡಳಿತದಲ್ಲಿ ಕುಡಿಯುವ ನೀರಿಗೆ ಯಾವುದೇ ಸೌಲಭ್ಯ ನೀಡಿರಲಿಲ್ಲ. ಮೋದಿಯವರ ಅಧಿಕಾರದ ನಂತರ ಜಲಜೀವನ ಮಿಷನ್ ಪ್ರಾರಂಭಿಸಿ ಕುಡಿಯುವ ನೀರು ನೀಡಿದರು.

ಕಾಳಗಿ, ಚಿತ್ತಾಪುರ, ಕಲಬುರ್ಗಿ, ಕಲಬುರ್ಗಿ ಗ್ರಾಮೀಣ ಮುಂತಾದ ಕಡೆಗಳಲ್ಲಿ ಈಗ ಮನೆ ಮನೆಗೆ ನೀರಿನ ಸರಬರಾಜು ಸಿಕ್ಕಿದೆ. ಬಯಲು ಮುಕ್ತ ಶೌಚಾಲಯ ಯೋಜನೆ ಜಾರಿ ಮಾಡಿ ಮಹಿಳೆಯರಿಗೆ ಅನುಕೂಲ ಮಾಡಿಕೊಟ್ಟವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು. ಹೀಗೆ ನೂರಾರು ಯೋಜನೆಗಳನ್ನು ಮೋದಿಯವರು ಮಹಿಳೆಯರನ್ನು ಕೇಂದ್ರೀಕರಿಸಿ ಅನುಷ್ಠಾನಕ್ಕೆ ತಂದರು ಹಾಗೂ ಮಹಿಳೆಯರ ಬವಣೆಯನ್ನು ನೀಗಿಸಿದ್ದಾರೆ. ಅದಕ್ಕಾಗಿ ಈ ಚುನಾವಣೆ ಬಹಳ ಮಹತ್ವದ ಚುನಾವಣೆಯಾಗಿದೆ. ಮಹಿಳೆಯರು ಮನಸ್ಸು ಮಾಡಿದರೆ ದೇಶದ ಭವಿಷ್ಯವನ್ನು ಬದಲಾಯಿಸಬಲ್ಲ ಪ್ರಬಲ ಶಕ್ತಿಯನ್ನು ಹೊಂದಿದ್ದಾರೆ.

ಮುಂದಿನ ಪೀಳಿಗೆಗೆ ಸುರಕ್ಷಿತ ಜೀವನ ನಡೆಸುವ ಚುನಾವಣೆಯಾಗಿರುವುದರಿಂದ ಮೇ ಏಳರಂದು ಶೇಕಡ ನೂರರಷ್ಟು ಮತ ಚಲಾಯಿಸಿ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಮಂತ್ರಿಯನ್ನಾಗಿಸಬೇಕು ಮತ್ತು ಎರಡನೇ ಬಾರಿಗೆ ಕಲಬುರ್ಗಿಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ ,ಮಹಿಳಾ ಮುಖಂಡರಾದ ಲಲಿತಾ ಅನಪೂರ್, ಚಂದ್ರಮ್ಮ ಪಾಟೀಲ್, ಭಾಗೀರಥಿ ಗುನ್ನಾಪುರ, ಸಂತೋಷ್ ರಾಣಿ ಪಾಟೀಲ್, ಸುಜ್ಞಾನ ರಾಣಿ ಪತ್ತಾರ್ ಚೆನ್ನಮ್ಮ ಪಾಟೀಲ್, ಜ್ಯೋತಿ ಶಹಬಾದ್ ಕರ್, ಮಂಜುಳಾ, ಶೈಲಜಾ ಹೆಟಾಳ್, ಈರಮ್ಮ ಪಾಟೀಲ್ ಮತ್ತಿತರರಿದ್ದರು.
ಮಾಜಿ ಶಾಸಕರಾದ ರಾಜ ಕುಮಾರ್ ಪಾಟೀಲ್ ತೇಲ್ಕೂರ್, ಅವ್ವಣ್ಣ ಮ್ಯಾಕೇರಿ, ಶರಣು ಶಂಕರ್, ಬಸವರಾಜ ರಾಯಕೋಡ್, ಓಂ ಪ್ರಕಾಶ್ ಪಾಟೀಲ್ ವೀರೇಶ ಹೂಗಾರ್ ತಿರುಪತಿ ಶಹಭಾಕರ್ ಮಲ್ಲಿಕಾರ್ಜುನ ಪಾಟೀಲ್ ಜಗದೇವಪ್ಪ ಸಾಹುಕಾರ್ ಶ್ರೀಮಂತ ವಂಟಿ ನಾಗಪ್ಪ ಕೊಳ್ಳಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here