ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಪ್ರಿಯಾಂಕ ಖರ್ಗೆ ವಿರುದ್ಧ ದೂರು

0
69

ಕಲಬುರಗಿ: ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆಯವರ ವಿರುದ್ಧ ಚುನಾವಣಾ ಆಯೋಗ ತಕ್ಷಣ ಕ್ರಮ ಕೈಗೊಳ್ಳುವಂತೆ ಬಲದೇವ್ ರಾಥೋಡ್ ಕಲಬುರಗಿ ಚುನಾವಣಾ ವೀಕ್ಷಕರಿಗೆ ದೂರು ಸಲ್ಲಿಸಿದ್ದಾರೆ.

ಏಪ್ರಿಲ್ 19 ರಂದು ಮಾಜಿ ಸಚಿವರಾದ ರೇವುನಾಯಕ ಬೆಳಮಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಅರವಿಂದ ಚೌಹಾಣ್ ಹಾಗೂ ಸಮುದಾಯದ ಸ್ವಾಮೀಜಿಗಳು ಪತ್ರಿಕಾಗೋಷ್ಠಿ ಯೊಂದನ್ನು ನಡೆಸಿ ಬಂಜಾರ ಸಮುದಾಯದವರಿಗೆ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಅವರು ಕಲ್ಬುರ್ಗಿ ವಿಮಾನ ನಿಲ್ದಾಣದ ಹತ್ತಿರ ಎರಡು ಎಕ್ಕರೆ ಜಮೀನು ಮತ್ತು ಸೇವಾಲಾಲ ಮಂದಿರ ನಿರ್ಮಾಣಕ್ಕೆ ಹಣ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ ಎಂದು ಹೇಳಿಕೆ ನೀಡಿದರು.

Contact Your\'s Advertisement; 9902492681

ಈ ಹೇಳಿಕೆಯು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಇದು ಮುಕ್ತ ಮತ್ತು ಸ್ವತಂತ್ರ ಚುನಾವಣೆ ನಡೆಸಲು ಆಯ್ಕೆಯಾದ ಪ್ರಸಂಗವಾಗಿದೆ ಮತ್ತು ಮತದಾರರಿಗೆ ಆಮಿಷ ಒಡ್ಡಿದ ಕಷ್ಟ ನಿದರ್ಶನವಾಗಿದೆ ಮತದಾರರಿಗೆ ಆಮಿಷವೊಡ್ಡುವುದು ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು ಪ್ರಿಯಾಂಕ ಖರ್ಗೆಯವರು ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಏಳು ದಿನಗಳ ಕಾಲ ಅವರ ಚುನಾವಣಾ ಪ್ರಚಾರ ಕಾರ್ಯಕ್ಕೆ ನಿಷೇಧ ಹೇರಬೇಕು ಎಂದು ಬಲದೇವ ರಾಥೋಡ್ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here