ಮೋದಿ ಭಾಷಣದಿಂದ ಬಡವರ‌ ಹೊಟ್ಟೆ ತುಂಬುವುದಿಲ್ಲ: ಸಚಿವ ಶರಣ‌ಪ್ರಕಾಶ ಪಾಟೀಲ್

0
15

ಕಲಬುರಗಿ: ಮೋದಿ ಅವರ ಉದ್ರಿ ಭಾಷಣದಿಂದ ಯಾವ ಬಡವರ ಹೊಟ್ಟೆ ತುಂಬುವುದಿಲ್ಲ. ಆದರೆ, ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ‌ ಸಫಲತೆಗೆ ಸಹಕಾರಿಯಾಗಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ ಪಾಟೀಲ ಹೇಳಿದರು.

ಕಲಬುರಗಿ ಉತ್ತರ ಕ್ಷೇತ್ರದ ಇತ್ತೇಹಾದ್ ಚೌಕ್ ಮತ್ತು ದಕ್ಷಿಣ ಮತಕ್ಷೇತ್ರದ ಬ್ರಹ್ಮ ಪುರ ಬಡಾವಣೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ‌ ಅವರ ಪರ ಮತಯಾಚಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಕಾಂಗ್ರೆಸ್ ಪಕ್ಷ‌ ಬಡವರ ಪರ ಇರುವ ಪಕ್ಷ. ‌ಬಿಜೆಪಿ‌ ಶ್ರೀಮಂತರ ಪಕ್ಷ ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಇದರಿಂದ ಬಡವರ ಬದುಕು ದುಸ್ತರವಾಗಿದೆ‌. ಬೆಲೆ‌ಇಳಿಕೆಯ ಅಧಿಕಾರ ಕೇಂದ್ರ ಸರ್ಕಾರದ ಕೈಯಲ್ಲಿದೆ. ಬಡವರ ಕಾಳಜಿ ಗೊತ್ತಿಲ್ಲದ ಬಿಜೆಪಿ‌ ಸರ್ಕಾರ ಈ‌ ಬಗ್ಗೆ ಕ್ರಮ ಕೈಗೊಂಡಿಲ್ಲ. ಆದರೆ ನಮ್ಮ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಎಲ್ಲ ವರ್ಗದ ಜನರಿಗೆ ತಲುಪಿವೆ‌. ಈ ಮೂಲಕ ಬಡವರ ಸಂಕಷ್ಟಕ್ಕೆ ನಾವು ನೆರವಾಗಿದ್ದೇವೆ. ಹಾಗಾಗಿ ನೀವೆಲ್ಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತಚಲಾಯಿಸಿ ಆರಿಸಿ ಕಳಿಸುವ ಮೂಲಕ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಕು ಎಂದು ಮನವಿ‌ ಮಾಡಿದರು.

ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ ಕಲಬುರಗಿ ಹಾಗೂ ದೇಶದ ಅಭಿವೃದ್ದಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿ ತಮ್ಮನ್ನು ಆರಿಸಿ ಕಳಿಸಿದರೆ ದಿಲ್ಲಿಯಲ್ಲಿ ಜನರ ಧ್ವನಿ ಯಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಬಿಜೆಪಿ ಸರ್ಕಾರ‌ ಇದ್ದಾಗ ಬಡವರು ಮಧ್ಯಮ ವರ್ಗದವರು ಸಂಸಾರಿಕ ಜೀವನ‌ ನಡೆಸಲು ಕಷ್ಟ ಪಡುತ್ತಿದ್ದರು. ಆದರೆ, ಈಗ ನಮ್ಮ ಸರ್ಕಾರ ಬಂದ ಮೇಲೆ ಗ್ಯಾರಂಟಿ ಯೋಜನೆಗಳ ಲಾಭ ಪಡೆದು ನೆಮ್ಮದಿಯಿಂದ‌ ಇದ್ದಾರೆ. ಆದರೆ ಬಿಜೆಪಿಯವರು ಈ ಎಲ್ಲ‌ಯೋಜನೆಗಳನ್ನು ನಿಲ್ಲಿಸುತ್ತಾರಂತೆ. ನಾವು ಯಾರ ಅಪ್ಪನ ಮನೆಯ ದುಡ್ಡು ಖರ್ಚು ಮಾಡುತ್ತಿಲ್ಲ. ನಿಮ್ಮ ತೆರಿಗೆ ಹಣವನ್ನು ಮತ್ತೆ ನಿಮಗೆ ವಾಪಸ್ ನೀಡುತ್ತಿದ್ದೇವೆ ಎಂದರು.

ಜನರು ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿದ್ದಾರೆ. ಆದರೆ, ಸ್ವಪ್ನ‌ಲೋಕದಲ್ಲಿರುವ ಉಮೇಶ ಜಾಧವ್ ಹಾಗೂ ಬಿಜೆಪಿ ನಾಯಕರು ದೇಶದಲ್ಲಿ ಅಚ್ಚೇ ದಿನ್ ಇದೆ ಅಂತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡ ಸಚಿವರು ಕಾಂಗ್ರೆಸ್ ಅಧಿಕಾರಕ್ಕೆ‌ ಬಂದರೆ ಸಾರ್ವಜನಿಕರ ದುಡ್ಡು ಆಸ್ತಿ ತೆಗೆದುಕೊಂಡು ಮುಸಲ್ಮಾನರಿಗೆ ಕೊಡುತ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಅವರ ಮಾತನ್ನು ನಂಬದೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಶಾಸಕ‌ ಅಲ್ಲಮಪ್ರಭು ಪಾಟೀಲ ಮಾತನಾಡಿ ಬಿಜೆಪಿಯವರು ಅಧಿಕಾರಕ್ಕೆ‌ ಬಂದರೆ ಸಂವಿಧಾನ ಬದಲಾಯಿಸುವುದಾಗಿ ಹೇಳಿದ್ದಾರೆ. ಡಾ ಬಾಬಾಸಾಹೇಬರು ನಮಗೆಲ್ಲ ನೀಡಿದ ಹೆಮ್ಮೆಯ ಸಂವಿಧಾನ ಇದರಿಂದ ಅಪಾಯದಲ್ಲಿದೆ. ನೀವೆಲ್ಲ ಕಾಂಗ್ರೆಸ್ ಗೆ ಮತ ಹಾಕುವ ಮೂಲಕ ಸಂವಿಧಾನ ರಕ್ಷಣೆಗೆ ಕೈಜೋಡಿಸಿ ಎಂದು ಮನವಿ ಮಾಡಿದರು.

ವೇದಿಕೆಯ ಮೇಲೆ ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ತಾರಫೈಲ್, ಚಂದ್ರಿಕಾ ಪರಮೇಶ್ವರ, ಶ್ಯಾಮ್ ನಾಟೀಕಾರ್, ರಾಜಗೋಪಾಲರೆಡ್ಡಿ, ಡಾ ಕಿರಣ್ ದೇಶಮುಖ್, ಪ್ರವೀಣ್ ಹರವಾಳ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here