ಕಲಬುರಗಿ: ಗುಲಬರ್ಗಾ ಲೋಕಸಭೆ ಚುನಾವಣೆಗೆ ಮೇ 7 ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮುಡಿಸಲು ವಿವಿಧ ಚಟುವಟಿಕೆ ಹಮ್ಮಿಕೊಂಡಿರುವ ಜಿಲ್ಲಾ ಸ್ವೀಪ್ ಸಮಿತಿಯು ಶುಕ್ರವಾರ ಜಿಲ್ಲೆಯ ಚಿಮಚೋಳಿ ತಾಲೂಕಿನ ಚಂದ್ರಂಪಳ್ಲಿ ಜಲಾಶಯದಲ್ಲಿ ದೋಣಿವಿಹಾರ ಮಾಡುವ ಮೂಲಕ ವಿನೂತನವಾಗಿ ಮತದಾರರ ಜಾಗೃತಿ ಮುಡಿಸಲು ಪ್ರಯತ್ನಿಸಿತು.
ಜಿಲ್ಲಾ ಪಂಚಾಯತ್ ಸಿ.ಇ.ಓ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಭಂವರ್ ಸಿಂಗ್ ಮೀನಾ ಮತ್ತು ಕಲಬುರಗಿ ವೃತ್ತದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮೀಡಿಯಾ ಮಾನಿಟರ್ ಉಸ್ತುವಾರಿ ಅಧಿಕಾರಿ ಸುಮಿತಕುಮಾರ ಪಾಟೀಲ್ ನೇತೃತ್ವದ ಅಧಿಕಾರಿಗಳ ತಂಡವು ಲೈಫ್ ಜಾಕೆಟ್ ಹಾಕಿಕೊಂಡು ಕೈಯಲ್ಲಿ ಭಿತ್ತಿಪತ್ರ ಹಿಡಿದು ಬರತಕ್ಕಂತಹ ಲೊಕಸಭೆ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿಹೇಳಿದರು.
ಇದಕ್ಕು ಮುನ್ನ ಕುಂಚಾವರಂ ಗ್ರಾಮ ಪಂಚಾಯತಿ ವ್ಯಾಪ್ತಿಯ ನರೇಗಾ ಕಾಮಗಾರಿ ಸ್ಥಳಕ್ಕೂ ಭೇಟಿ ನೀಡಿದ ಸ್ವೀಪ್ ತಂಡ ಕೂಲಿ ಕಾರ್ಮಿಕರಿಗೆ ಮತದಾನ ಕುರಿತು ಜಾಗೃತಿ ಮೂಡಿಸಿತು.
ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಂಕರ ರಾಠೋಡ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹ್ಮದ್ ಮುನೀರ್, ಸಹಾಯಕ ನಿರ್ದೇಶಕ(ಗ್ರಾಉ) ಶಿವಶಂಕ್ರಯ್ಯ, ತಾಲ್ಲೂಕು ಯೋಜನಾಧಿಕಾರಿ ಮಲ್ಲಿಕಾರ್ಜುನ ಕಟ್ಟಿಮನಿ, ಪಿ.ಡಿ.ಓ ದಶರಥ ಪಾತ್ರೆ ಇದ್ದರು.