ಕಲಬುರಗಿ: ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗುಲಬರ್ಗಾ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ದೀಪನಕರ್ ಸಿನ್ಹಾ ಅವರು ಶುಕ್ರವಾರ ಗುಲಬರ್ಗಾ ಗ್ರಾಮೀಣ ಕ್ಷೇತ್ರದ ಕುಸನೂರ ಮತಗಟ್ಟೆ ಸಂ.200 ಮತ್ತು 201ಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕುಸನೂರ ಮತಗಟ್ಟೆ ಕ್ರಿಟಿಕಲ್ ಆಗಿ ಗುರುತಿಸಿಕೊಂಡಿದ್ದರಿಂದ ಅಲ್ಲಿನ ಮೂಲಸೌಕರ್ಯ ಮತ್ತು ಮತದಾನಕ್ಕೆ ಮತದಾರರಲ್ಲಿ ಅತ್ಮವಿಶ್ವಾಸ ವೃದ್ಧಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಇದಕ್ಕು ಮುನ್ನ ಗುಲಬರ್ಗಾ ಗ್ರಾಮೀಣ ಚುನಾವಣಾಧಿಕಾರಿಗಳ ಕಚೇರಿಗೆ ಮತ್ತು ಕ್ಷೇತ್ರದ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕೇಂದ್ರವಾಗಿರುವ ಕಲಬುರಗಿ ಪಾಲಿಟೆಕ್ನಿಕ್ ಕಾಲೇಜಿಗೂ ಸಹ ಸಾಮಾನ್ಯ ವೀಕ್ಷಕರು ಭೇಟಿ ನೀಡಿದರು.
ಸಹಾಯಕ ಆಯುಕ್ತರು ಹಾಗೂ ಗುಲಬರ್ಗಾ ಗ್ರಾಮೀಣ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ರೂಪಿಂದರ್ ಸಿಂಗ್ ಕೌರ್, ಕಲಬುರಗಿ ತಹಶೀಲ್ದಾರ ಮಧುರಾಜ ಈ ಸಂದರ್ಭದಲ್ಲಿ ಇದ್ದರು.