ಸ್ವೀಪ್‌ ಫುಟಬಾಲ್‌ ಲೀಗ್ ಗೆ ತೆರೆ: ಕೆ.ಡಿ.ಎಫ್. ತಂಡ,ರನ್ನರ್ ಆಫ್ ಪ್ರಶಸ್ತಿಗೆ ತೃಪ್ತಿಪಟ್ಟ ಐವಾನ್-ಎ-ಶಾಹಿ ತಂಡ

0
8

ಮೇ‌ 7 ರಂದು ಕಡ್ಡಾಯ ಮತದಾನಕ್ಕೆ ಕರೆ

ಕಲಬುರಗಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಲು ಕಲಬುರಗಿ ಜಿಲ್ಲಾ ಸ್ವೀಪ್ ಸಮಿತಿ ಪ್ರಾಯಜೋಕತ್ವದಲ್ಲಿ ಕಲಬುರಗಿ ನಗರದ ವೀರೇಂದ್ರ ಪಾಟೀಲ ಬಡಾವಣೆಯ ಫುಟಬಾಲ್ ಅಂಕಣದಲ್ಲಿ ನಡೆದ “ಸ್ವೀಪ್ ಫುಟಬಾಲ್ ಲೀಗ್” ಗೆ ತೆರೆ ಬಿದ್ದಿದ್ದು, ಗುರುವಾರ ಸಂಜೆ‌ ನಡೆದ ಲೀಗ್ ಪೈನಲ್ ಪಂದ್ಯದಲ್ಲಿ ಕೆ.ಡಿ.ಎಫ್. ತಂಡ ಟ್ರೋಫಿ ಗೆದ್ದು ಸಂಭ್ರಮಿಸಿತು.

ಲೀಗ್ ನ ಫೈನಲ್‌ ಪಂದ್ಯ ಕೆ.ಡಿ.ಎಫ್ ಮತ್ತು ಐವಾನ್-ಎ-ಶಾಹಿ ತಂಡಗಳ ನಡುವೆ ನಡೆದು ಅಂತಿಮವಾಗಿ ಕೆ.ಡಿ.ಎಫ್ ತಂಡ ಗೆಲುವಿನ‌ ನಗೆ ಬೀರಿತು. ಐವಾನ್-ಎ-ಶಾಹಿ ತಂಡ ರನ್ನರ್ ಆಫ್‌ ಪ್ರಶಸ್ತಿಗೆ ತೃಪ್ತಿಪಡಬೇಕಾಯಿತು. ಗೆದ್ದ ತಂಡಕ್ಕೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮತ್ತು ನಗರ ಪೊಲೀಸ್ ಆಯುಕ್ತ ಆರ್.ಚೇತನಕುಮಾರ, ರನ್ನರ್ ಆಫ್ ತಂಡಕ್ಕೆ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್‌ ಮೀನಾ ಮತ್ತು ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ ಶಂಕರ ಅವರು ಪ್ರಶಸ್ತಿ ವಿತರಿಸಿ ಶುಭ ಕೋರಿದರು.

Contact Your\'s Advertisement; 9902492681

ಸಮಾರೋಪ‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಚುನಾವಣಾಧಿಕಾರಿ ‌ಬಿ.ಫೌಹಿಯಾ ತರನ್ನುಮ್ ಮಾತನಾಡಿ, ಮತದಾನದ ಪ್ರಮಾಣ ಹೆಚ್ಚಿಸಲು ಸ್ವೀಪ್ ಸಮಿತಿ ವಿಭಿನ್ನ ಕಾರ್ಯಕ್ರಮ ಆಯೋಜಿಸುತ್ತಿದ್ದು, ಅದರಲ್ಲಿ ಈ ಪುಟ್ಬಾಲ್ ಲೀಗ್ ಸಹ ಸೇರಿದೆ. ನಮ್ಮೆಲ್ಲರ ಉದ್ದೇಶ ಒಂದೇ, ಅದುವೇ ನೀವೆಲ್ಲರು. ಬರುವ ಮೇ 7 ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕು. ಅಲ್ಲದೆ‌ ನಿಮ್ಮ ಬಂಧು-ಬಳಗ, ಗೆಳೆಯರನ್ನು ಮತದಾನ ಮಾಡುವಂತೆ ತಿಳಿಹೇಳಬೇಕು ಎಂದು ಕ್ರೀಡಾಳುಗಳನ್ನು ಉದ್ದೇಶಿಸಿ‌ ಮಾತನಾಡಿದರು.

ಸ್ವೀಪ್ ‌ಸಮಿತಿ ಮತದಾನ ಪ್ರಮಾಣ ಹೆಚ್ಚಿಸಲು ಈ ರೀತಿಯ ಅನೇಕ ಕ್ರಿಯಾಶೀಲ ಚಟುವಟಿಕೆ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದ ಅವರು ಲೀಗ್ ಯಶಸ್ವಿಯಾಗಿ ಸಂಘಟಿಸಿದಕ್ಕೆ ಸಂಘಟಕರನ್ನು ಸಹ ಡಿ.ಸಿ. ಅಭಿನಂದಿಸಿದರು.

ಕಲಬುರಗಿ‌ ನಗರ ಪೊಲೀಸ್ ಆಯುಕ್ತ ಚೇತನ್ ಆರ್. ಮಾತನಾಡಿ ಮೇ 7 ರಂದು ಕಡ್ಡಾಯವಾಗಿ‌ ಮತ ಚಲಾಯಿಸುವ ಮೂಲಕ ದೇಶದ ಅತೀ ದೊಡ್ಡ ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗಿಯಾಗಬೇಕು ಮತ್ತು ಮತ ಚಲಾವಣೆಯ ಪ್ರಮಾಣ ಹೆಚ್ಚಿಸಬೇಕೆಂದು ಕರೆ‌ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕಲಬುರಗಿ ಫುಟ್‌ಬಾಲ್ ಸಂಸ್ಥೆ ಇವರ ಸಹಯೋಗದೊಂದಿಗೆ ಕಳೆದ ಏಪ್ರಿಲ್ 22 ರಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ‌ ಭಂವರ್ ಸಿಂಗ್ ಮೀನಾ ಅವರು ಲೀಗ್ ಗೆ ಚಾಲನೆ ನೀಡಿದರು. ಪ್ರವೇಶ ಉಚಿತವಾದ ಕಾರಣ ಸುಮಾರು 8 ತಂಡಗಳು ಭಾಗವಹಿಸಿ ಪ್ರಶಸ್ತಿಗೆ‌ ಸೆಣಸಾಡಿದವು.

ಸಮಾರೋಪ‌ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮತ್ತು ಸ್ವೀಪ್ ನೋಡಲ್ ಅಧಿಕಾರಿ ಅಬ್ದುಲ್ ಅಜೀಮ್, ಶಾಲಾ‌ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ, ಯುವ ಸಬಲೀಕರಣ‌ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಅಮೃತ್ ಎನ್. ಅಷ್ಟಗಿ, ಜಿಲ್ಲಾ ಫುಟ್ಬಾಲ್‌ ಸಂಸ್ಥೆ ಕಾರ್ಯದರ್ಶಿ ರವಿಕುಮಾರ, ಹಾಕಿ ಕೋಚ್‌ ಸಂಜಯ್‌ ಬಾಣದ, ಬಾಸ್ಕೆಟ್ ಬಾಲ್‌ ಕೋಚ್ ಪ್ರವೀಣ‌ ಪುಣೆ ಸೇರಿದಂತೆ ಪುಟ್‌ಬಾಲ್ ಅಸೋಸಿಯೇಷನ್ ಪದಾಧಿಕಾರಿಗಳು, ಜಿಲ್ಲಾ‌ ಪಂಚಾಯತ್ ಸಿಬ್ಬಂದಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here