ಚಿತ್ತಾಪುರ: ತಾಲ್ಲೂಕಿನ ಓರಿಯಂಟ್ ಸಿಮೆಂಟ್ ಕಂಪನಿ ವತಿಯಿಂದ ಇಂದು ಇಟಗಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿವಿಧ ತರಬೇತಿ ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳಿಗೆ ಮತ್ತು ಶಾಲಾ- ಕಾಲೇಜು ಮಕ್ಕಳಿಗೆ ಉಚಿತವಾಗಿ ಅಬ್ಯಾಕಸ್ ತರಬೇತಿ, ಮತ್ತು ಹೊಲಿಗೆ ತರಬೇತಿ, ಕಂಪ್ಯೂಟರ್ ತರಬೇತಿ, ಉಚಿತವಾಗಿ ನೀಡಲು ಈ ಎಲ್ಲಾ ತರಬೇತಿಗಳಿಗೆ ಚಾಲನೆ ನೀಡಿದರು.
ಈ ಕಾರ್ಯಕ್ರಮವನ್ನು ಓರಿಯಂಟ್ ಕಂಪನಿಯ ಎಜಿಎಂ ಶಿವಾನಂದ ಪಾಟೀಲ್ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿರುವ ಹೆಣ್ಣುಮಕ್ಕಳು ಸ್ವಾವಲಂಬಿಯಾಗಿ ಬದುಕಬೇಕಾದರೆ ಇಂತಹ ತರಬೇತಿಗಳನ್ನು ಪಡೆಯುವುದು ಮುಖ್ಯವಾಗಿದೆ ಒಂದು ಹೆಣ್ಣು ಸ್ವಾವಲಂಬಿ ಆದರೆ ತನ್ನ ಕುಟುಂಬ ಮತ್ತು ಗ್ರಾಮ ಆರ್ಥಿಕವಾಗಿ ಬಲಿಷ್ಠರಾಗಲು ಅನುಕೂಲವಾಗುತ್ತದೆ ಅದರಂತೆ ಹೆಣ್ಣುಮಕ್ಕಳು ಪ್ರತಿಯೊಂದು ಹೆಜ್ಜೆ ಇಡಲು ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಂಪನಿ ಅಧಿಕಾರಿಯಾದ ವ್ಹಿ.ರಾಜು, ಅರವಿಂದ್ ಮತ್ತು ಆಕೃತಿ ಫೌಂಡೇಶನ್ ಮಂಜುಳಾ, ಎಸ್ಡಿಎಂಸಿ ಅಧ್ಯಕ್ಷ ಪ್ರಭುದೇವ್ ಡಿಗ್ಗಿ ಹಾಗೂ ದೇವಪ್ಪ ಡಿಗ್ಗಿ ಶಾಲೆ ಮುಖ್ಯಗುರುಗಳಾದ ಶಿವಾಜಿ ದಿವಾಕರ್ ಸೇರಿದಂತೆ ಇತರರು ಇದ್ದರು.