ಸ್ಟ್ರಾಂಗ್‌ ರೂಮ್ ಮತ್ತು ಮತ‌ ಎಣಿಕೆ‌ ಕೇಂದ್ರಕ್ಕೆ ಡಿ.ಸಿ ಭೇಟಿ: ಪೂರ್ವಸಿದ್ಧತೆ ಕಾರ್ಯ ಪರಿಶೀಲನೆ

0
64

ಕಲಬುರಗಿ: ಗುಲಬರ್ಗಾ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು‌ ಮತದಾನ ನಡೆಯಲಿದ್ದು, ಮತದಾನದ‌ ನಂತರ‌ ಮತಯಂತ್ರಗಳು ಇರಿಸಲಾಗುವ ಗುಲಬರ್ಗಾ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಕಟ್ಟಡಗಳ ಸ್ಟ್ರಾಂಗ್ ರೂಂ ಕೇಂದ್ರಕ್ಕೆ ಮಂಗಳವಾರ ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಭೇಟಿ ನೀಡಿ ಸಿದ್ಧತಾ ಕಾರ್ಯ ಪರಿಶೀಲಿಸಿದರು.

ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನಕುಮಾರ ಅವರೊಂದಿಗೆ ಭೇಟಿ‌ ನೀಡಿದ ಚುನಾವಣಾಧಿಕಾರಿಗಳು, ಗುಲಬರ್ಗಾ ಲೋಕಸಭಾ ಕ್ಷೇತ್ರದ 8 ಕ್ಷೇತ್ರಗಳ ಇ.ವಿ.ಎಂ ಮತಯಂತ್ರಗಳು ಇರಿಸಲಾಗುವ ಗುಲಬರ್ಗಾ ವಿ.ವಿ.ಯ ಪರೀಕ್ಷಾಂಗ, ಗಣಿತ, ಕನ್ನಡ ಅಧ್ಯಯನ, ಸಸ್ಯಶಾಸ್ತ್ರ ಹಾಗೂ ಇಂಡೋರ್ ಸ್ಟೇಡಿಯಂ ಕಟ್ಟಡ ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಜೂನ್ 4 ರಂಡು‌ ನಡೆಯುವ‌ ಮತ ಎಣಿಕೆ ಸ್ಥಳ ಸಹ ಪರಿಶೀಲಿಸಿದರು.

Contact Your\'s Advertisement; 9902492681

ಮತದಾನ ನಂತರ ಇ.ವಿ.ಎಂ ಮತಯಂತ್ರಗಳು ಇಲ್ಲಿ ಇಡಲಾಗುತ್ತಿರುವುದರಿಂದ ಗರಿಷ್ಠ ಪೊಲೀಸ್ ಭದ್ರತೆ ಒದಗಿಸಬೇಕು. ಸ್ಟ್ರಾಂಗ್ ರೂಂ ಕಟ್ಟಡಕ್ಕೆ ಸಂಬಂಧಿಸಿದಂತೆ ಭದ್ರತೆ, ಅಗ್ನಿ, ಸಿವಿಲ್, ವಿದ್ಯುತ್ ಗೆ ಸಂಬಂಧಿಸಿದಂತೆ ಪೊಲೀಸ್, ಅಗ್ನಿಶಾಮಕ ಇಲಾಖೆ, ಲೋಕೋಪಯೋಗಿ ಇಲಾಖೆ, ಜೆಸ್ಕಾಂನವರು ಫಿಟನೆಸ್ ಪ್ರಮಾಣ ಪತ್ರ ಒದಗಿಸಬೇಕು. ಸ್ಟ್ರಾಂಗ್ ರೂಂ ಕೇಂದ್ರ ಸುತ್ತ ಬ್ಯಾರಿಕೇಡ್, ಸಿ.ಸಿ.ಟಿ.ವಿ. ಅಳವಡಿಸಬೇಕೆಂದು ಅಧಿಕಾರಿಗಳಿಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ನಿರ್ದೇಶನ ನೀಡಿದರು.

ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಡಿ.ಸಿ.ಪಿ. ಕನಿಕಾ ಸಿಕ್ರಿವಾಲ್, ಲೋಕೋಪಯೋಗಿ ಇಲಾಖೆಯ ಇ.ಇ. ಸುಭಾಷ್, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಎ.ಸಿ.ಪಿ. ರಾಜಣ್ಣ, ಮಹಾನಗರ ಪಾಲಿಕೆಯ ಇ.ಇ. ಶಿವಣಗೌಡ ಪಾಟೀಲ, ಅಗ್ನಿಶಾಮಕ ಅಧಿಕಾರಿಗಳು ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here