ಪೆನ್ ಡ್ರೈವ್ ಪ್ರಕರಣದಲ್ಲಿ ನೂರಾರು ಮಹಿಳೆಯರಿಗೆ ಅನ್ಯಾಯವಾಗಿದೆ: ಗೃಹ ಸಚಿವ ಪರಮೇಶ್ವರ

0
15

ಕಲಬುರಗಿ: ಪ್ರಜ್ವಲ್ ರೆವಣ್ಣ ಪೆನ್ ಡ್ರೈವ್ ಪ್ರಕರಣ ಬಹಳ ಗಂಭೀರವಾಗಿರುವ ಪ್ರಕರಣ. ನೂರಾರು ಮಹಿಳೆಯರಿಗೆ ಅನ್ಯಾಯವಾಗಿದೆ ಎಂದು ಗೃಹ ಸಚಿವ ಪರಮೇಶ್ವರ ಹೇಳಿದರು.

ಗುರುವಾರ ಇಲ್ಲಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು ಇಂತಹ ಸೂಕ್ಷ್ಮ ವಿಚಾರದಲ್ಲಿ ಸ್ವಪ್ರೇರಿತ ದೂರು ದಾಖಲಿಸಿಕೊಳ್ಳಲು ಕಷ್ಟ. ನೊಂದ‌ಮಹಿಳೆ ಬಂದು ದೂರು ಕೊಡಬೇಕು ಎಂದರು.

Contact Your\'s Advertisement; 9902492681

ಪ್ರಜ್ವಲ್ ರೇವಣ್ಣ ಹೊರಗೆ ಹೋಗಿದ್ದು ಸತ್ಯ, ಡಿಪ್ಲೊಮೆಟಿಕ್ ಪಾಸ್ ಕೊಟ್ಟಿದೆ ಕೆಂದ್ರ ಸರ್ಕಾರ. ಹೀಗಾಗಿ ರಾತ್ರೋ ರಾತ್ರಿ ಹೋಗಿದ್ದಾರೆ. IPC 41A ಜಾರಿ‌ಮಾಡಲಾಗಿದೆ. ನೋಟಿಸ್ ಜಾರಿ ಮಾಡಿದ ಬಳಿಕ ಕೂಡಲೇ ಬಂದು ಹಾಜರಾಗಬೇಕು.ಒಂದು ವೇಳೆ ಹಾಜರಾಗದಿದ್ದರೆ ಅವರನ್ನು ಬಂಧಿಸಬೇಕಾಗುತ್ತೆ ಎಂದರು.

ರೆವಣ್ಣ ಅವರು ಇವತ್ತು ಅಧಿಕಾರಿಗಳ ಮುಂದೆ ಹಾಜರಾಗುತ್ತೆನೆ ಎಂದು ಹೇಳಿದ್ದಾರಂತೆ. ಲೋಕ್ ಔಟ್ ನೋಡಿಸ್ ನೀಡಲಾಗಿದೆ. ಪ್ರಜ್ವಲ್ ರೆವಣ್ಣ ಅವರ ವಕೀಲರ ಮೂಲಕ 6 ದಿನ ಕಾಲಾವಕಾಶ ಕೇಳಿದ್ದಾರೆ. ನಿನ್ನೆ ಮತ್ತೆ ಮತ್ತೊಬ್ಬ ಮಹಿಳೆ ಒಂದು ದೂರು ದಾಖಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಶರಣಪ್ರಕಾಶ್ ಪಾಟೀಲ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here