ಡಾ: ವಿಷ್ಣು ಜನ್ಮ ದಿನ ರಾಷ್ಟ್ರೀಯ ಆದರ್ಶ ದಿನವಾಗಿದೆ: ಮಲ್ಲು ವಿಷ್ಣುಸೇನಾ

0
59

ಸುರಪುರ: ಡಾ: ವಿಷ್ಣುಸೇನಾ ಸಮಿತಿಯಿಂದ ಸಾಹಸ ಸಿಂಹ ಡಾ: ವಿಷ್ಣುವರ್ಧನ ಅವರ ೬೯ನೇ ಜನ್ಮ ದಿನವನ್ನು ನಗರದ ತಿಮ್ಮಾಪುರದ ಜಗದ್ಗುರು ಪಂಚಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.

ಡಾ: ವಿಷ್ಣುಸೇನಾ ಸಮಿತಿ ತಾಲ್ಲೂಕು ಅಧ್ಯಕ್ಷ ಮಲ್ಲು ವಿಷ್ಣುಸೇನಾ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಿ ನಗರದ ತಿಮ್ಮಾಪುರ ಮತ್ತು ಸುರಪುರ ತಾಲ್ಲೂಕು ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಲು ಹಣ್ಣು ವಿತರಿಸಲಾಯಿತು.ಅಲ್ಲದೆ ಜಗದ್ಗುರು ಪಂಚಾಚಾರ್ಯ ಶಾಲೆಯ ಮಕ್ಕಳಿಗೆ ನೋಟಬುಕ್,ಪೆನ್ನು ಮತ್ತಿತರೆ ಕಲಿಕಾ ಸಾಮಗ್ರಿಗಳನ್ನು ಹಾಗು ಸಸಿಗಳ ವಿತರಿಸಿದರು.

Contact Your\'s Advertisement; 9902492681

ನಂತರ ಮಲ್ಲು ವಿಷ್ಣುಸೇನಾ ಮಾತನಾಡಿ,ಕರುನಾಡು ಕಂಡ ಹೆಮ್ಮೆಯ ನಟ ಹಾಗು ನಾಡು ನುಡಿ ಸೇವೆಯಲ್ಲಿ ಅವಿರತವಾಗಿ ದುಡಿದ ಡಾ: ವಿಷ್ಣುವರ್ಧನವರ ಜನ್ಮ ದಿನವು ರಾಷ್ಟ್ರೀಯ ಆದರ್ಶ ದಿನವಾಗಿದೆ.ಡಾ: ವಿಷ್ಣುವರ್ಧನವರು ನಮ್ಮಂತಹ ಲಕ್ಷಾಂತರ ಜನರ ಮನದಲ್ಲಿ ದೇವರ ಸ್ಥಾನದಲ್ಲಿದ್ದು ಅವರ ನಡೆದ ಹಾದಿ ಇಂದು ನಮಗೆಲ್ಲ ಆದರ್ಶವಾಗಿದೆ. ಅವರ ಅಭಿಮಾನಿಗಳಾದ ನಾವುಗಳುಕೂಡ ನಿರಂತರವಾಗಿ ಅವರ ಹೆಸರಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ನಾಡು ನುಡಿಯ ಸೇವೆಗೆ ಬಧ್ಧರಾಗಿದ್ದೇವೆ.ಇಂದು ನಾಡಿನ ಕೋಟ್ಯಾಂತರ ಜನ ಅವರ ಅಭಿಮಾನಿಗಳು ಡಾ: ವಿಷ್ಣುಸೇನಾ ಸಮಿತಿಯ ರಾಜ್ಯಾಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸವರ ನೇತೃತ್ವದಲ್ಲಿ ಇಂದು ರಾಜ್ಯಾದ್ಯಂತ ಸಮಾಜಕ್ಕೆ ನೆರವಾಗುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ ದುಡಿದ ಅನೇಕ ಗಣ್ಯರಾದ ಶರಣು ನಾಯಕ ಬೈರಿಮಡ್ಡಿ,ಮಾನಪ್ಪ ನಾಯಕ,ಗೋಪಾಲ ಸತ್ಯಂಪೇಟೆ, ಶಿಕ್ಷಕ ಶರಣಯ್ಯಸ್ವಾಮಿ,ದತ್ತು ತಿಮ್ಮಾಪುರ ಇವರನ್ನು ಸನ್ಮಾನಿಸಲಾಯಿತು. ಇದಕ್ಕು ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಡಾ: ವಿಷ್ಣವರ್ಧನವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.ಈ ಸಂದರ್ಭದಲ್ಲಿ ಶಿವು ವಿಷ್ಣುಸೇನಾ,ಅನ್ವರ ಹುಸೇನಿ,ಅಯ್ಯಪ್ಪ ವಿತ್ತೆಂ,ನಿಂಗಣ್ಣ ಕುಂಬಾರ,ಮಲ್ಲಪ್ಪ ಜಗಳಿ,ವೆಂಕಟೇಶ ಸತ್ಯಂಪೇಟೆ,ಗೋಪಾಲ ಸುರಪುರ,ಮಹಿಬೂಬ ಕೃಷ್ಣಾಪುರ,ಬಬ್ಲು ಡಿ.ಆರ್,ಮಲ್ಕಪ್ಪ ಸತ್ಯಂಪೇಟೆ,ಚಂದ್ರು ಎಲಿಗಾರ,ಪ್ರಕಾಶ ಬಡಿಗೇರ,ಅಂಬರೀಶ ಬಿರಾದಾರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here