ಕೋಟನೂರು ಘಟನೆ : ರಾಜಕೀಯ ಲಾಭಕ್ಕೆ‌ ಬಿಜೆಪಿ ಯತ್ನ- ಸಚಿವ ಶರಣಪ್ರಕಾಶ ಪಾಟೀಲ್ ಆರೋಪ

0
112

ಕಲಬುರಗಿ: ಕೋಟನೂರು ಘಟನೆಯನ್ನು ಕಾಂಗ್ರೆಸ್ ಖಂಡಿಸಿದೆ. ಸಂತ್ರಸ್ತರನ್ನು ನಾವು ಭೇಟಿ ಮಾಡಿ ಮಾತನಾಡಿಸಿ ಅವರಿಗೆ ಅಗತ್ಯವಿರುವ ಭದ್ರತೆ ನೀಡುತ್ತೇವೆ ಎಂದು ಹೇಳಿದ್ದೇವೆ. ಕುಟುಂಬದವರ ಬೇಡಿಕೆಯಂತೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಆದರೂ ಕೂಡಾ ಬಿಜೆಪಿ ಈ ಪ್ರಕರಣವನ್ನು ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ಸಚಿವ ಶರಣಪ್ರಕಾಶ ಪಾಟೀಲ ಆರೋಪಿಸಿದರು .

ಕಲಬುರಗಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಸಂಸದರಾಗಿ ಉಮೇಶ್ ಜಾಧವ್ ಅವರ ಸಾಧನೆ ಶೂನ್ಯವಾಗಿದೆ. ಹಾಗಾಗಿ, ಕೋಟನೂರು ಘಟನೆಯನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಬಿಜೆಪಿ ನಾಯಕರು ಹಾಗೂ ಜಾಧವ್ ಪ್ರಯತ್ನಿಸಿದ್ದಾರೆ. ಘಟನೆಯಲ್ಲಿ ಹಲ್ಲೆಗೊಳಗಾದ ಕುಟುಂಬ ವರ್ಗದವರನ್ನು ಅಪ್ಪುಗೌಡ, ಚಂದು ಪಾಟೀಲ್ ಹಾಗೂ‌ ಜಾಧವ್ ಭೇಟಿ ಮಾಡಿದ್ದಾರೆಯೆ? ಎಂದು ಪಾಟೀಲ್ ಕೇಳಿದರು.

ಕಳೆದ ಐವತ್ತು ವರ್ಷದಿಂದ ಮಲ್ಲಿಕಾರ್ಜುನ‌ ಖರ್ಗೆ ಅವರು ರಾಜಕೀಯದಲ್ಲಿದ್ದಾರೆ. ಜೊತೆಗೆ ಪ್ರಿಯಾಂಕ್ ಹಾಗೂ ರಾಧಾಕೃಷ್ಣ ದೊಡ್ಡಮನಿ ಅವರು ಕೂಡಾ ರಾಜಕೀಯದಲ್ಲಿದ್ದಾರೆ. ಅವರು ಯಾರ ಮೇಲೆಯೂ ಅಟ್ರಾಸಿಟಿ ಕೇಸು ದಾಖಲಿಸಿಲ್ಲ ಹಾಗೂ ಅಂತಹ ಯಾವುದೇ ಪ್ರಯತ್ನಗಳಿಗೆ ಬೇರೆಯರಿಗೆ ಆಸ್ಪದ ಕೂಡ‌ ನೀಡಿಲ್ಲ. ಈಗ‌ ಚುನಾವಣೆ ಬಂದಿದೆ ಎಂದು ಬಿಜೆಪಿ ಪ್ರಕರಣಗಳನ್ನು ರಾಜಕೀಯಕ್ಕೆ‌ ಬಳಸಿಕೊಳ್ಳುತ್ತಿದೆ ಎಂದು‌ ಪುನರುಚ್ಚರಿಸಿದರು.

ಕಾಂಗ್ರೆಸ್ ಪಕ್ಷ ವೀರಶೈವ ಲಿಂಗಾಯತ ಸಮಾಜಕ್ಕೆ ಕೊಡುಗೆ ನೀಡಿದೆ. ಬಿ.ಆರ್.ಪಾಟೀಲ, ಎಂವೈ ಪಾಟೀಲರಿಗೆ ಹಾಗೂ ನನಗೆ ಟಿಕೇಟು‌ ನೀಡಿ ಶಾಸಕರು ಹಾಗೂ ಸಚಿವರನ್ನಾಗಿ ಮಾಡಿದೆ, ಬಿಜೆಪಿಯವರು ಏನು ಮಾಡಿದ್ದಾರೆ? ಅವರ‌ ಅವಧಿಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಲಿಂಗಾಯತರಿಗೆ ಸಚಿವರನ್ನಾಗಿ ಮಾಡಲಿಲ್ಲ ಎಂದರು.

ಖರ್ಗೆ ಕುಟುಂಬ ಬಸವ ತತ್ವಗಳಲ್ಲಿ ಅಪಾರ ನಂಬಿಕೆ ಹೊಂದಿದೆ. ನಮ್ಮ ರಾಜಕೀಯ ಜೀವನದಲ್ಲಿ ಅಟ್ರಾಸಿಟಿ‌ ಕೇಸು ದಾಖಲಿಸಲು ಯಾರಿಗೂ ಪ್ರಚೋದನೆ ನೀಡಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ವಚನ‌ ಸಂಗ್ರಹಾಲಯ ಸ್ಥಾಪನೆ ಮಾಡುವ ಗುರಿ ಹೊಂದಿದ್ದು ಬಸವಣ್ಣ ಹಾಗೂ ಇತರೆ ಶರಣರ ಬಗ್ಗೆ ಅಧ್ಯಯನ ಮಾಡಲು ಇದರಿಂದ ಅನುಕೂಲವಾಗಲಿದೆ ಈಗಾಗಲೇ ಯೋಜನೆಗೆ ರೂ 5 ಕೋಟಿ ಅನುದಾನ ನಿಗದಿಪಡಿಸಲಾಗಿದೆ ಎಂದರು.

ಕಲಬುರಗಿ ನಗರದಲ್ಲಿ ಶಾಂತಿ ಭಂಗ ಮಾಡಲು ಬಿಡುವುದಿಲ್ಲ. ಬಿಜೆಪಿ ಯವರು ಟೂಲ್ ಕಿಟ್ ಮಾಡಿಕೊಂಡಿದ್ದಾರೆ. ಬಿಹಾರ, ಯುಪಿಗಳಲ್ಲಿ ಇರುವಂತೆ ಕಲಬುರಗಿಯಲ್ಲಿಯೂ ಕೂಡಾ ಟೂಲ್ ಕಿಟ್ ಮಾಡಿದ್ದಾರೆ ಎಂದು ಖರ್ಗೆ ಆರೋಪ ಮಾಡಿದರು.

ವೇದಿಕೆಯ ಮೇಲೆ ಸಿಎಂ ಸಲಹೆಗಾರ ಬಿ.ಆರ್.ಪಾಟೀಲ, ಕೆಕೆಆರ್ ಡಿ‌ಬಿ ಅಧ್ಯಕ್ಷ ಅಜಯ್ ಸಿಂಗ್, ಶಾಸಕರಾದ ಎಂ ವೈ ಪಾಟೀಲ, ಅಲ್ಲಮಪ್ರಭು ಪಾಟೀಲ, ಶರಣು ಮೋದಿ, ಡಾ ಕಿರಣ್ ದೇಶಮುಖ್ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here