ಪ್ರಜ್ವಲ್‌ ರೇವಣ್ಣ ಪರ ಪ್ರಚಾರ: ಜೆಡಿಎಸ್‌-ಬಿಜೆಪಿ ಪಕ್ಷಗಳು ಮಹಿಳೆಯರಿಗೆ ಕ್ಷಮೆ ಕೇಳಲು ಆಗ್ರಹ

0
23

ಕಲಬುರಗಿ : ಹಾಸನದ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ಎಸಗಿದ ಲೈಂಗಿಕ ದೌರ್ಜನ್ಯದ ಪ್ರಕರಣದ ಬಗ್ಗೆ ಗೊತ್ತಿದ್ದರೂ ಆತನಿಗೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡಿದ್ದಲ್ಲದೆ ಪ್ರಧಾನಿ ಮೋದಿ ಸಹಿತ ಪ್ರಚಾರ ನಡೆಸಿದ್ದು, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ದೇಶದ ಮಹಿಳೆಯರ ಕ್ಷಮೆ ಕೇಳಬೇಕು ಎಂದು ರೈತ, ಕಾರ್ಮಿಕ, ಮಹಿಳಾ, ಅಲ್ಪಸಂಖ್ಯಾತ, ವಿದ್ಯಾರ್ಥಿ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.

ನಗರದ ಜಗತ್ತ ವೃತ್ತದಲ್ಲಿ ಎದ್ದೇಳು ಕರ್ನಾಟಕ ನೇತೃತ್ವದಲ್ಲಿ ವಿವಿಧ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿ, ಹೆಣ್ಣುಮಕ್ಕಳ ಮೇಲಿನ ಭೀಭತ್ಸವಾದ ದೌರ್ಜನ್ಯದ ಘಟನೆಗಳು ನಡೆದು ನಮ್ಮನ್ನು ಸಂಕಟದ ಕೂಪಕ್ಕೆ ತಳ್ಳಿವೆ. ಹುಬ್ಬಳ್ಳಿಯಲ್ಲಿ ನಡೆದ ನೇಹಾ ಪ್ರಕರಣದಲ್ಲಿ, ಆಕೆಯ ಆಯ್ಕೆಯನ್ನು ಗೌರವಿಸದ ಯುವಕನೊಬ್ಬ ಅತ್ಯಂತ ಅಮಾನುಷವಾಗಿ ಆಕೆಯನ್ನು ತಿವಿದು ಕೊಂದ. ಅದರೆ ಪ್ರಜ್ವಲ್ ರೇವಣ್ಣ ಎಂಬ ಕರ್ನಾಟಕದ ಅತ್ಯಂತ ಬಲಾಢ್ಯ ರಾಜಕಾರಣದ ಕುಟುಂಬದ ಮೂರನೇ ತಲೆಮಾರಿನ ವ್ಯಕ್ತಿ ನೂರಾರು ಹೆಣ್ಣುಮಕ್ಕಳ ಮೇಲೆ ಲೈಂಗಿಕ ಹಿಂಸಾಕಾಂಡವೊಂದನ್ನು ನಡೆಸಿದ ಸಂಗತಿ ಬೆಳಕಿಗೆ ಬಂದಿದೆ.

Contact Your\'s Advertisement; 9902492681

ಈ ಪ್ರಕರಣವನ್ನು ತನಿಖೆ ಮಾಡಲು ಎಸ್ಐಟಿ ರಚಿಸಿದಂತಹ ಗಂಭೀರತೆಯಿದ್ದಾಗಲೂ, ಸಾಕ್ಷಿಯೊಬ್ಬರನ್ನು ಅಪಹರಿಸಿದ್ದು ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಉದ್ಭವವಾಗುತ್ತಿದೆ. ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ಮುಳುಗಿರುವ ಪಕ್ಷಗಳ ಸಂಕುಚಿತತೆಯಿಂದ ಹೆಣ್ಣುಮಕ್ಕಳ ಬದುಕನ್ನು ಕಸಿಯಲಾಗುತ್ತಿದೆ. ಹುಬ್ಬಳ್ಳಿಯ ನೇಹಾ ಹಿರೇಮಠ ಪ್ರಕರಣದಲ್ಲೇ ನೋಡುವುದಾದರೆ, ಕೊಲೆಗಾರ ಅಲ್ಪಸಂಖ್ಯಾತ ಸಮುದಾಯದವನೆಂದು ತಿಳಿದಾಕ್ಷಣ ಈ ಘಟನೆಯನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸುವ ದುರಾಲೋಚನೆಯನ್ನು ಕೇಂದ್ರದಲ್ಲಿ ಆಳುತ್ತಿರುವ ಬಿಜೆಪಿ ಪಕ್ಷ ಮಾಡಿತು.

ಈ ಪ್ರಕರಣದ ಆಳಕ್ಕಿಳಿದು, ಇದರಲ್ಲಿ ನ್ಯಾಯ ದೊರೆಯಬೇಕಾದರೆ ಆಗಬೇಕಾದದ್ದೇನು ಹಾಗೂ ಮುಂದೆ ಇಂತಹವು ನಿಯಂತ್ರಣವಾಗಬೇಕಾದರೆ ಸರ್ಕಾರ ಇಡಬೇಕಾದ ಹೆಜ್ಜೆಗಳೇನು ಎಂಬುದನ್ನು ಯೋಚಿಸಿ ಅಂತಹ ಆಗ್ರಹಗಳನ್ನು ಮುಂದಿಡುವ ಒಂದು ಜವಾಬ್ದಾರಿಯು ವಿರೋಧ ಪಕ್ಷ ಯಾವ ಪ್ರಯತ್ನವನ್ನೂ ಮಾಡದೇ ಅದರ ರಾಜಕೀಯ ಲಾಭ-ನಷ್ಟಗಳನ್ನು ಲೆಕ್ಕಹಾಕಲಾರಂಭಿಸಿದ್ದಾರೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

ಅದೇ ರೀತಿ, ಪ್ರಜ್ವಲ್ ಪ್ರಕರಣವು ಹೊರಬಂದಿದ್ದು ಒಳ್ಳೆಯದೇ ಆದರೂ, ಹೊರಬಂದ ರೀತಿ ಮಾತ್ರ ಭೀಕರವಾದುದು. ಬಲಿಪಶು ಮಹಿಳೆಯರ ಗುರುತೂ ಸಿಗುವಂತೆ ಇದ್ದ ವಿಡಿಯೋಗಳಿದ್ದ ಪೆನ್ ಡ್ರೈವ್ ಗಳು ಸಾರ್ವಜನಿಕರಿಗೆ ಸಿಕ್ಕುವಂತೆ ಮಾಡಿದ್ದು ಖಂಡನಾರ್ಹ ಎಂದು ಪ್ರತಿಭಟನಾಕಾರರು ಅಕ್ರೋಶ ವ್ಯಕ್ತಪಡಿಸಿದರು.

ಇಂದಿನ ಸಂದರ್ಭದಲ್ಲಿ, ಕರ್ನಾಟಕದಲ್ಲಿ ಹೆಣ್ಣುಮಕ್ಕಳನ್ನೂ ಒಳಗೊಂಡಂತೆ ಶೋಷಿತ-ದಮನಿತ ಜನಸಮುದಾಯಗಳಿಗಾಗಿ ಮತ್ತು ಸಾಮಾನ್ಯ ಪ್ರಜೆಗಳ ಹಕ್ಕುಗಳಿಗಾಗಿ ಸತತವಾಗಿ ಶ್ರಮಿಸುತ್ತಾ ಬಂದಿರುವ ನಾವುಗಳು, ಮಹಿಳೆಯರ ಮೇಲಿನ ದೌರ್ಜನ್ಯಗಳಂತಹ ಸೂಕ್ಷ್ಮ ವಿಷಯಗಳನ್ನು ರಾಜಕೀಯದ ಪಗಡೆಯಾಟದ ದಾಳಗಳಾಗಿಸುವ ಸಂಸ್ಕೃತಿಯನ್ನು ಕಟುವಾಗಿ ಖಂಡಿಸುತ್ತೇವೆ ಎಂದರು.

ರಾಜ್ಯ ಸರ್ಕಾರವು ಈ ಉನ್ನತ ಮಟ್ಟದ ತನಿಖೆಗೆ ಒಳಪಡಿಸುತ್ತಿರುವುದು ಸ್ವಾಗತಾರ್ಹವಾದುದು. ಅದೇ ಸಮಯದಲ್ಲಿ, ಸಮಾಜವನ್ನು ಇಂತಹ ವಿಷಯಗಳಲ್ಲಿ ಎಚ್ಚರಿಸಿ, ಮಹಿಳೆಯರ ಆಯ್ಕೆಗಳನ್ನು ಮತ್ತು ಹಕ್ಕುಗಳನ್ನು ಗೌರವಿಸುವ ಅರಿವನ್ನು ಮೂಡಿಸುವ ಕೆಲಸದಲ್ಲಿ, ಘಟನೆಗಳು ನಡೆಯುವ ಮೊದಲೇ ತಡೆಯಲು ಸಾಧ್ಯವಾಗುವಂತಹ ಸರ್ಕಾರದ ಸಂಸ್ಥೆಗಳನ್ನು ರೂಪಿಸುವಲ್ಲಿ, ಘಟನೆ ನಡೆದ ನಂತರದ ಮತ್ತು ನಡೆಯುವುದನ್ನೇ ತಡೆಯಲು ಬೇಕಿರುವ ನಿಯಂತ್ರಣದ-ಎರಡೂ ಹಂತಗಳಲ್ಲಿ ಕೆಲಸಗಳು ವೇಗವಾಗಿ ಸಾಗುವಂತಹ ನಿಟ್ಟಿನಲ್ಲಿ ಈ ಕೂಡಲೇ ಕಾರ್ಯಪ್ರವೃತ್ತವಾಗಬೇಕು, ಇದಕ್ಕಾಗಿ ಮಹಿಳೆಯರ ಹಕ್ಕುಗಳ ವಿಷಯದಲ್ಲಿ ಸೂಕ್ಷ್ಮ ಸಂವೇದನೆಯುಳ್ಳ ಪರಿಣತರ ಹಾಗೂ ಕಾನೂನು ಮತ್ತು ವಿಷಯ ತಜ್ಞರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ಕೂಡಲೇ ರಚಿಸಬೇಕೆಂದು ಒತ್ತಾಯಿಸಿದರು.

ಪ್ರಜ್ವಲ್‌ ರೇವಣ್ಣನನ್ನು ತಕ್ಷಣ ಬಂಧಿಸಿ: ಒಚಿss ಡಿಚಿಠಿe ಆರೋಪಿ ಪ್ರಜ್ವಲ್ ರೇವಣ್ಣನನ್ನು ಕೂಡಲೇ ಬಂಧಿಸಲು ಎಲ್ಲಾ ಕ್ರಮ ತೆಗೆದುಕೊಳ್ಳಬೇಕು; ತನಿಖೆ ಹಾಗೂ ಕಾನೂನುಕ್ರಮದಲ್ಲಿ ಎಲ್ಲೂ ಲೋಪವೆಸಗದೇ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.
• ಬಲಿಪಶುಗಳ ಘನತೆ, ಗೌಪ್ಯತೆ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ; ಇನ್ನಷ್ಟು ವಿಡಿಯೋ ಪ್ರಸಾರವಾಗದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಬಲಿಪಶು ಮಹಿಳೆಯರ ಗುರುತು ಸಿಗುವಂತೆ ವಿಡಿಯೋ ಪ್ರಸಾರ ಮಾಡಿದವರ ಮೇಲೂ ಕ್ರಿಮಿನಲ್ ಕ್ರಮ ಆಗಬೇಕು.
• ಒಚಿss ಡಿಚಿಠಿe ಬಗ್ಗೆ ಮೊದಲೇ ಮಾಹಿತಿಯಿದ್ದರೂ ಅಭ್ಯರ್ಥಿಯನ್ನಾಗಿಸಿ, ಆತನ ಪರ ಪ್ರಚಾರ ಮಾಡಿದ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಕರ್ನಾಟಕದ ಜನರ, ದೇಶದ ಮಹಿಳೆಯರ ಬಳಿ ಕ್ಷಮೆ ಯಾಚಿಸಬೇಕು.
• ಮಹಿಳೆಯರ ಸುರಕ್ಷತೆ ಖಾತ್ರಿಯಾಗುವುದು ಸಮಾನತೆಯಿಂದ, ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವುದರಿಂದ. ಸಮಗ್ರ ಕ್ರಮಗಳಿಗೆ ಸರ್ಕಾರ ಮುಂದಾಗಬೇಕು. ತಜ್ಞರ, ಮಹಿಳಾ ಸಂಘಟನೆಗಳ ಪಾಲುದಾರಿಕೆಯೊಂದಿಗೆ ಇದು ನಡೆಯಬೇಕು.
• ಇತ್ತೀಚೆಗೆ ಕರ್ನಾಟಕದಲ್ಲಿ ನಡೆದಿರುವ ಮಹಿಳೆಯರ ಮೇಲಿನ ಎಲ್ಲಾ ದೌರ್ಜನ್ಯದ ಪ್ರಕರಣಗಳ ನಿಷ್ಪಕ್ಷಪಾತ ತನಿಖೆ ಮತ್ತು ಶಿಕ್ಷೆಯನ್ನು ಖಾತ್ರಿಪಡಿಸಲು, ಹಾಗೆಯೇ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ನಿಯಂತ್ರಿಸುವ ಮಾರ್ಗಸೂಚಿ ಕ್ರಮಗಳಿಗಾಗಿ ಉನ್ನತ ಮಟ್ಟದ ಸಮಿತಿಯೊಂದನ್ನು ಸರ್ಕಾರ ಕೂಡಲೇ ರಚಿಸಬೇಕೆಂದು ಆಗ್ರಹಿಸಿದರು.

ಈ ಪ್ರತಿಭಟನೆಯಲ್ಲಿ ಎದ್ದೇಳು ಕರ್ನಾಟಕ ಜಿಲ್ಲಾ ಸಂಚಾಲಕರಾದ ರಾಜೇಂದ್ರ ರಾಜವಾಳ, ಅಬ್ದುಲ್ ಖಾದರ್, ಸತೀಶ ಬಟರ್ಕಿ, ಮರಿಯಪ್ಪ ಹಳ್ಳಿ, ತಾರಾ ರಾವ್, ಲಕ್ಷ್ಮಣ್ ಮಂಡಲಗೆರ, ಶ್ರವಣ ಕುಮಾರ, ದೇವೇಂದ್ರಪ್ಪ ಕರದಳ್ಳಿ, ರೇಣುಕಾ ಸರಡಗಿ, ಕಾಡುಹುಲಿ, ಮೈಲಾರಿ ದೊಡ್ಮನಿ, ಭುವನ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here