ಸುರಪುರ: ಲೋಕಸಭೆ ವಿಧಾನಸಭೆ ಉಪ ಚುನಾವಣೆಗೆ ಮತ ಯಂತ್ರಗಳ ರವಾನೆ

0
9

ಸುರಪುರ: ಲೋಕಸಭಾ ಚುನಾವಣೆ ಹಾಗೂ ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮಸ್ಟರಿಂಗ್ ಕಾರ್ಯ ನಡೆಯುತ್ತಿದ್ದು,ಮತಯಂತ್ರಗಳನ್ನು ರವಾನಿಸಲಾಗುತ್ತಿದೆ ಎಂದು ವಿಧಾನಸಭಾ ಉಪ ಚುನಾವಣೆ ಚುನಾವಣಾಧಿಕಾರಿ ಕಾವ್ಯರಾಣಿ ಕೆ.ವಿ ತಿಳಿಸಿದರು.

ನಗರದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿ ನಡೆಯುತ್ತಿದ್ದ ಮೇ 7 ಲೋಕಸಭಾ ಹಾಗೂ ವಿಧಾನಸಭಾ ಉಪ ಚುನವಾಣೆಗೆ ಮತಯಂತ್ರಗಳ ರವಾನಿಸುವ ಮಸ್ಟರಿಂಗ್ ಕಾರ್ಯದಲ್ಲಿ ಪಾಲ್ಗೊಂಡು ಸುದ್ದಿಗಾರರಿಗೆ ವಿವರಣೆ ನೀಡಿ,ಸುರಪುರ ವಿಧಾನಸಭಾ ಕ್ಷೇತ್ರದಾದ್ಯಂತ 317 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು,ಎಲ್ಲಾ ಮತದಾನ ಕೇಂದ್ರಗಳಿಗೆ ಮತಯಂತ್ರ,ವಿವಿಪ್ಯಾಟ್ ಯಂತ್ರಗಳ ರವಾನಿಸಲಾಗುತ್ತಿದೆ,ಪ್ರತಿ ಮತದಾನ ಕೇಂದ್ರದಲ್ಲಿ ಪಿ.ಆರ್.ಓ,ಎ.ಪಿ.ಆರ್.ಓ ಸೇರಿ 5 ಜನ ಸಿಬ್ಬಂದಿಗಳಿರಲಿದ್ದಾರೆ.ಸೂಕ್ಷ್ಮ ಮತಗಟ್ಟೆಗಳು 78 ಕೇಂದ್ರಗಳಿದ್ದು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.ಎಲ್ಲಾ 317 ಮತದಾನ ಕೇಂದ್ರಗಳಲ್ಲಿ 1785 ಸಿಬ್ಬಂದಿಗಳಿರಲಿದ್ದು,ಎಲ್ಲಾ ಮತ ಕೇಂದ್ರಗಳಿಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.ಮತದಾನ ಕೇಂದ್ರಗಳಲ್ಲಿ ಕುಡಿಯುವ ನೀರು,ವಿದ್ಯುತ್,ಶೌಚಾಲಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

86 ರೂಟ್‍ಗಳನ್ನು ಮಾಡಲಾಗಿದ್ದು,86 ವಾಹನಗಳ ವ್ಯವಸ್ಥೆ ಮಾಡಲಾಗಿದೆ.ಅಲ್ಲದೆ ಭದ್ರತೆಗಾಗಿ 1 ಡಿವೈಎಸ್ಪಿ,4 ಪಿ.ಐ,22 ಪಿ.ಎಸ್.ಐ,327 ಹೆಚ್.ಸಿ,153 ಹೋಂ ಗಾರ್ಡ್,1 ಕೆ.ಎಸ್.ಆರ್.ಪಿ ತುಕಡಿ,2 ಪ್ಯಾರಾ ಮಿಲಿಟರಿ ತುಕಡಿ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೊಟೆಪ್ಪಗೊಳ ಭೇಟಿ ನೀಡಿ ವೀಕ್ಷಿಸಿದರು.ಇಡೀ ಶ್ರೀ ಪ್ರಭು ಕಾಲೇಜ್ ಮೈದಾನದೆಲ್ಲೆಡೆ ಚುನಾವಣಾ ಕರ್ತವ್ಯದ ಸಿಬ್ಬಂದಿಗಳೆ ಕಂಡು ಬಂದರು.ಆಯಾ ಸೆಕ್ಟರ್ ಮೂಲಕ ರೂಟ್‍ಗಳಿಗೆ ಸಿಬ್ಬಂದಿಗಳನ್ನು ಕಳುಹಿಸಲು ಧ್ವನಿವರ್ಧಕದ ಮೂಲಕ ಸಿಬ್ಬಂದಿಗಳಿಗೆ ಮಾಹಿತಿ ನೀಡುವ ಮೂಲಕ ಮತಯಂತ್ರಗಳೊಂದಿಗೆ ಕಳುಹಿಸಿಕೊಡಲಾಯಿತು.

ಈ ಸಂದರ್ಭದಲ್ಲಿ ಪಿ.ಐ ಆನಂದ ವಾಘಮೊಡೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here