ರಂಗಂಪೇಟ : ಅಂಬಾ ಭವಾನಿ ದೇವಸ್ಥಾನ ವರ್ಧ ಜಯಂತಿ ಮಹೋತ್ಸವ

0
10

ಸುರಪುರ: ನಗರದ ರಂಗಂಪೇಟ-ತಿಮ್ಮಾಪುರನ ಭಾವಸಾರ ಕ್ಷತ್ರಿಯ ಸಮಾಜದ ಶ್ರೀ ಅಂಬಾ ಭವಾನಿ ಮಂದಿರದ 54ನೇ ವರ್ಷದ ವರ್ಧ ಜಯಂತಿ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶುಕ್ರವಾರ(ಅಕ್ಷಯ ತೃತೀಯಾದಂದು) ಭಕ್ತಿ-ಶ್ರದ್ಧೆಗಳಿಂದ ವಿಜೃಂಭಣೆಯಿಂದ ಆಚರಿಸಲಾಯಿತು.

ಗುರುವಾರದಂದು ಅಹೋರಾತ್ರಿ ಭಜನಾ ಕಾರ್ಯಕ್ರಮ ಜರುಗಿತು, ಕರ್ನಾಟಕ ರಾಜ್ಯ ಸತ್ಸಂಗ ಭಜನಾ ಪ್ರಮುಖ ಶರಣಪ್ಪ ಕಮ್ಮಾರ ಹಾಗೂ ಆಕಾಶವಾಣಿ ಕಲಾವಿದ ಶಿವಶರಣಯ್ಯ ಬಳ್ಳುಂಡಗಿಮಠ ಅಧ್ಯಕ್ಷತೆಯಲ್ಲಿ ಅಹೋರಾತ್ರಿ ಭಜನೆ ಕಾರ್ಯಕ್ರಮ ಜರುಗಿತು ಸಂಗೀತ ಕಲಾವಿದರಾದ ಮಹಾಂತೇಶ ಶಹಾಪುರಕರ, ನೂರಂದಯ್ಯಸ್ವಾಮಿ ಸ್ಥಾವರಮಠ, ದೀಪಿಕಾ,ಮುದ್ದಪ್ಪ ಅಪ್ಪಾಗೋಳ,ಗುರುನಾಥರೆಡ್ಡಿ ಶೀಲವಂತ, ಶ್ರೀನಿವಾಸ ಧಾಯಪುಲೆ, ಶರಣಬಸವ ಕೊಂಗಂಡಿ, ಸೂಗಮ್ಮ ಕೊಂಗಂಡಿ,ಜ್ಞಾನೇಶ್ವರ ಪಾಣಿಭಾತೆ, ಗೋಪಾಲ ಗುಳೇದ,ಶ್ರೀನಿವಾಸ ಹಳಿಜೋಳ, ಮೋಹನಕಾಂತ ರಂಗದಳ, ಜಗದೀಶ ಮಾನು, ಸುರೇಶ ಅಂಬೂರೆ, ನಾಗೇಶ ಅಂಬೂರೆ, ಜಗದೀಶ ಪತ್ತಾರ, ಮುರುಳಿ ಅಂಬೂರೆ,ಅಂಬಣ್ಣ, ಭೀಮಣ್ಣ ಪತಂಗೆ ಮುಂತಾದವರು ಪಾಲ್ಗೊಂಡಿದ್ದರು.

Contact Your\'s Advertisement; 9902492681

ಶುಕ್ರವಾರ ಅಕ್ಷಯ ತೃತೀಯಾದಂದು ಬೆಳಿಗ್ಗೆ ದೇವತಾ ಪೂಜಾ, ಅಭಿಷೇಕ, ಕುಂಕುಮಾರ್ಚನೆ, ನಂತರ ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆ ರಂಗಂಪೇಟೆಯ ಹನುಮಾನ ಮಂದಿರದಿಂದ ಪ್ರಮುಖ ಬೀದಿಗಳಲ್ಲಿ ನಡೆಯಿತು, ಸುಷ್ಮಾ ಮಹೇಂದ್ರಕರ,ಅಮೃತಾ ಮಹೇಂದ್ರಕರ, ಶೈಲಾ ಮಹೇಂದ್ರಕರ, ಸವಿತಾ ಮಹೇಂದ್ರಕರ,ಕವಿತಾ ಪತಂಗೆ, ರೇಣುಕಾ ಮಹೇಂದ್ರಕರ,ಜ್ಯೋತಿ ಪುಲ್ಸೆ,ಸುಲೋಚನಾ ಪತಂಗೆ, ಜ್ಯೋತಿ ಪತಂಗೆ, ಶೋಭಾ ಧಾಯಪುಲೆ, ಸುಧಾ ಧಾಯಪುಲೆ,ಮೀನಾಕ್ಷಿ ಅಂಬೂರೆ,ಸುಧಾ ಕರಣೆ, ಸಾವಿತ್ರಿ ಅಂಬೂರೆ,ಅನಿತಾ ಅಂಬೂರೆ ಕುಂಭ ಮೇಳದಲ್ಲಿ ಭಾಗವಹಿಸಿದ್ದರು.

ನಂತರ ಹೋಮ ಹವನ,ಪೂಜಾ ಪುಷ್ಪವೃಷ್ಟಿ ಹಾಗು ಅನ್ನ ಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು, ದೇವಸ್ಥಾನದ ಅರ್ಚಕರಾದ ಭೀಮಣ್ಣ ಪತಂಗೆ, ಭಾವಸಾರ ಕ್ಷತ್ರಿಯ ಸಮಾಜದ ಪ್ರಮುಖರಾದ ಭೂಮದೇವ ಮಹೇಂದ್ರಕರ, ಓಂ ಪ್ರಕಾಶ ಮಹೇಂದ್ರಕರ, ರಮೇಶ ಮಹೇಂದ್ರಕರ, ರಮೇಶ ಮಹೇಂದ್ರಕರ, ದತ್ತು ಪುಲ್ಸೆ, ಮನೋಹರ ಅಂಬೂರೆ, ಮಲ್ಲಿಕಾರ್ಜುನ ಮಹೇಂದ್ರಕರ,ಮಯೂರ ಮಹೇಂದ್ರಕರ, ಪ್ರೇಮ ಮಹೇಂದ್ರಕರ,ಅಂಬಾದಾಸ ಅಂಬೂರೆ, ಅಭಿಷೇಕ ಪತಂಗೆ, ಸುಮಿತ ಸುಧಾಕರ ಮಹೇಂದ್ರಕರ,ಮೋಹನ ಲಕ್ಷ್ಮೀಪುರ, ಚಂದ್ರಕಾಂತ ಅಂಬೂರೆ,ಕೃಷ್ಣಾ ಅಂಬೂರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here