ಬಸವಣ್ಣನವರ ತತ್ವ ಸಿದ್ದಾಂತ ಪಾಲನೆಯಿಂದ ಬದುಕು ಸಾರ್ಥಕ

0
10

ಚಿತ್ತಾಪುರ: ಅಸಂಖ್ಯಾತ ಬಸವ ಅಭಿಮಾನಿಗಳು ಎತ್ತುಗಳ ಮೆರವಣಿಗೆ ಮಾಡುವ ಮೂಲಕ ಅದ್ದೂರಿಯಾಗಿ ಬಸವ ಜಯಂತಿಯನ್ನು ಆಚರಣೆ ಆಚರಿಸಲಾಯಿತು.

ತಾಲೂಕಿನ ಕರದಳ್ಳಿ ಗ್ರಾಮದಲ್ಲಿ 12ನೇ ಶತಮಾನದ ಕಾಯಕಯೋಗಿ, ಜಗಜ್ಯೋತಿ ಬಸವೇಶ್ವರರ 891ನೇ ಜಯಂತೋತ್ಸವ ಅಂಗವಾಗಿ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಬಸವ ಜಯಂತೋತ್ಸವ ಸಮಿತಿಯಿಂದ ಮತ್ತು ಗ್ರಾಮದ ಮುಖಂಡರಿಂದ ಪೂಜೆ ಸಲ್ಲಿಸಿ ಮತ್ತು ಎತ್ತುಗಳಿಗೆ ಪೂಜೆ ಸಲ್ಲಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಸಡಗರ ಸಂಭ್ರಮದಿಂದ ಜಯಂತೋತ್ಸವ ಆಚರಣೆ ಮಾಡಿದರು.

Contact Your\'s Advertisement; 9902492681

ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಮಿತಿಯ ಮುಖಂಡ ಅಯ್ಯಣ್ಣಗೌಡ ಬಿ ಪಾಟೀಲ್ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಸವಣ್ಣನವರ ಜಯಂತಿಯನ್ನು ಸರ್ವ ಜನಾಂಗದವರು ಒಟ್ಟಿಗೆ ಸೇರಿ ಆಚರಣೆ ಮಾಡುತ್ತಿರುವುದು ಗ್ರಾಮದ ಹಿರಿಮೆ ಹೆಚ್ಚಿಸಿದಂತಾಗಿದ್ದು ಸಮಾಜದ ಎಲ್ಲಾ ಯುವಕರು 12ನೇ ಶತಮಾನದಲ್ಲಿ ತಮ್ಮ ವಚನಗಳ ಮೂಲಕ ಸಾಮಾಜಿಕ ಕಳಕಳಿ ಹುಟ್ಟಿಸಿದ ಬಸವಣ್ಣನವರ ತತ್ವ ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು,ಅಲ್ಲದೆ ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದಂತೆ ನಾವೇಲ್ಲರೂ ಕಾಯಕಯೋಗಿ ಗಳಾಗಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಶಶಿಧರ ದೇಶಮುಖ್,ಮಾಂತಗೌಡ ಸಂಗನ್ ಪಾಟೀಲ್,ಗುರನಾಥ ಹಿರೆಗೌಡ, ವೀರೇಶ ಭಂಕೂರ್,ಚಂದ್ರರೆಡ್ಡಿ ಬಿ ಕೋಟ್ರಕಿ, ರಾಚಯ್ಯ ಸ್ವಾಮಿ,ಬಸಣ್ಣ ರಾಮತೀರ್ಥ,ಭೀಮು ದಂಡೋತಿ,ನೀಲಕಂಠ ಮಲಕೂಡ್,ಶಂಕ್ರಯ್ಯ ಸ್ವಾಮಿ ಪತ್ರಿ, ಹಣಮಂತ ಗುತ್ತೆದಾರ,ಸಂಗಣ್ಣ ಇಂಗಳಗಿ,ಶರಣಗೌಡ ಅಲ್ಲೂರ,ಮಲ್ಲಪ್ಪ ಕೋಟ್ರಕಿ,ಸಿದ್ದಣ್ಣ ಕೋಟ್ರಕಿ,ರಾಜಣ್ಣ ಕರದಾಳ,ನರಸಣ್ಣ ಬಾನರ್,ಶಂಬುಲಿಂಗ ವಿಶ್ವಕರ್ಮ, ಸದಾಶಿವ,ಚಂದ್ರಾಮಪ್ಪ ಮಾಕಪ್,ರಾಜಣ್ಣ ಕರದಾಳ ಸೇರಿದಂತೆ ಅನೇಕ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here