ಕಲಬುರಗಿ: ಶ್ರೀ ರೇವಣ್ಣ ಸಿದ್ದ ಶಿವಶರಣರ 74ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಇಲ್ಲಿನ ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ ಸಂಸ್ಥೆ ಕಚೇರಿಯಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಶ್ರೀ ರೇವಣ್ಣ ಸಿದ್ದ ಶಿವಶರಣರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡ ತೊಗಟವೀರ ಕ್ಷತ್ರಿಯ ಸಮಾಜದ ಅಧ್ಯಕ್ಷರಾದ ಶ್ರೀನಿವಾಸ ಬಲಪೂರ ಮಾತನಾಡಿ ಶತಮಾನದ ಹಿಂದೆಯೇ ಜಾತಿ ತಾರತಮ್ಯ ಹೋಗಲಾಡಿಸಲು ಕಾನೂನಾತ್ಮಕ ಹೋರಾಟ ಮಾಡಿ, ಎಲ್ಲರಿಗೂ ದೀಕ್ಷಾ ಐತನವ ಹಕ್ಕು ನೀಡಿದ ಮಹಾ ಸ್ವಾಮಿಗಳ ಪುಣ್ಯ ದಿನದಂದು ಪೂಜೆ ಸಲ್ಲಿಸುವ ಭಾಗ್ಯ ದೊರೆತಿದೆ ಅದುವೇ ಪುಣ್ಯ ಎಂದು ಸಂಸ್ಥೆಯ ಸಂಸ್ಥಾಪಕ ಶಿವಲಿಂಗಪ್ಪಾ ಅಷ್ಟಗಿ ಹೇಳಿದರು.
ಸ್ಥಳೀಯ ನೇಕಾರ ವಕೀಲರ ಬಳಗದ ವತಿಯಿಂದ 20 ನೇ ಶತಮಾನದಲ್ಲಿ ಜಾತ್ಯತೀತ ಆದ್ಯ ಧರ್ಮ ಗುರು ಗಳಾಗಿ ಸಮಸ್ತ ಮಾನವರಿಗೆ ಒಳಿತನ್ನೇ ಪಾಠ ಮಾಡಿ, ಬ್ರಿಟಿಷ್ ರ ಇಂಗ್ಲೀಷ್ ಕಾಲದಲ್ಲಿ ವಿದೇಶಿಗರು ಕೂಡಾ ತಮ್ಮ ಆದ್ಯ ಗುರುಗಳು ಎಂದು ಮಾನ್ಯತೆ ನೀಡಿ, ಮಾರ್ಗದರ್ಶನ ಪಡೆದು, ಮನಸಾರೆ ಒಪ್ಪಿ, ಸ್ಥಳೀಯ ಆಸ್ಥಾನ ಗುರುಗಳಾಗಿ ಅಭಿಧಾನ ಪಡೆದು ಸರ್ವರನ್ನು ಲಿಂಗ ಧೀಕ್ಷಾ ಪೂಜೆ ಕಲಿಸಿ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ತಮ್ಮ ಘಾಡವಾದ ಛಾಪನ್ನು ಮೂಡಿಸಿದ ಪಟ್ಟಸಾಲಿ ಸಮಾಜವನ್ನು ಉತ್ಕೃಷ್ಟ ಸ್ಥಾನಕ್ಕೆ ತಲುಪಿಸಿ, ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದ ದೇವರಾಗಿ ವಿವಿಧ ನೇಕಾರ ಸಮುದಾಯಕ್ಕೆ ಪರಮ ಗುರುಗಳಾಗಿ ಆಶೀರ್ವಾದ ಮೂಲಕ ಮನೆ ಗುರುಗಳಾಗಿ, ಶಿವಶರಣರ ನಡೆ ದೈವತ್ವದ ಕಡೆ ಎಂಭ ಜ್ಞಾನ ಮಾರ್ಗವನ್ನು ತಿಳಿಸಿದ ಮಹಾಸ್ವಾಮಿಗಳು ಎಂದು ತಿಳಿಸಿದರು,
ಕೊನೆಯಲ್ಲಿ ನ್ಯಾಯವಾದಿ ಜೇನವೆರಿ ವಿನೋದ ಕುಮಾರ 74 ನೇ ಪುಣ್ಯ ಸ್ಮರಣೋತ್ಸವದ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಭಕ್ತರಿಗೆ ವಂದಿಸಿದರು. 1963-64 ರಲ್ಲಿ ಮುದ್ರಣಗೊಂಡ ಅಪರೂಪದ ಕೃತಿಗಳು ಮರು ಮುದ್ರಣ ಗೊಳಿಸಲು ಸಂಸ್ಥೆ ನಿರ್ಧರಿಸಿದೆ, ಕಾರಣ ಭಕ್ತರು ಹೆಚ್ಚಿನ ರೀತಿಯಲ್ಲಿ ಮುಂದೆ ಬಂದು ಧನ ಸಹಾಯ ನೀಡಿದರೆ, ಮರು ಮುದ್ರಣ ಮಾಡಿ ಪ್ರತಿ ಮನೆಗೂ ತಲುಪಿಸಿವ ಹೊಣೆ ನಮ್ಮಸಂಸ್ಥೆದಾಗಿದೆ ಮತ್ತು ಸಕಾರ ಗೊಳಿಸಲು ಶ್ರಮಿಸಲಿದೆ ಎಂದು ತಿಳಿಸಿದರು.