ಸುರಪುರ: ಮುಂಬರುವ ಜೂನ್ 3 ರಂದು ನಡೆಯುವ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಎಲ್ಲರು ಶ್ರಮಿಸುವಂತೆ ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಎನ್.ಮಹೇಶ ತಿಳಿಸಿದರು.
ನಗರದ ಬಿಜೆಪಿ ಕಾರ್ಯಾಲಯದ ಆವರಣದಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಅಂಗವಾಗಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರಕಾರ ಕಾಂಗ್ರೆಸ್ ಸರಕಾರ ಅಭಿವೃಧ್ಧಿ ಮರೆತಿದೆ,ಕೇವಲ ಗ್ಯಾರಂಟಿ ಹೆಸರಲ್ಲಿ ಭಾಷಣ ಮಾಡುತ್ತಾರೆ,ಆದರೆ ಅಭಿವೃಧ್ಧಿ ಕಾರ್ಯಗಳನ್ನು ಮರೆತಿದ್ದಾರೆ,ಅಲ್ಲದೆ ಈಗ ಈಶಾನ್ಯ ಪದವೀಧರ ಕ್ಷೇತ್ರದ ಅಭ್ಯಾರ್ಥಿಯಾಗಿರುವ ಅಮರನಾಥ್ ಪಾಟೀಲ್ ಒಬ್ಬ ಸುಶಿಕ್ಷಿತ ಅಭ್ಯಾರ್ಥಿಯಾಗಿದ್ದು ಈ ಭಾಗದ ಪದವೀಧರರ ಕಲ್ಯಾಣಕ್ಕೆ ಕೆಲಸ ಮಾಡಲಿದ್ದಾರೆ,ಇದನ್ನು ಎಲ್ಲ ಪದವೀಧರರಿಗೆ ತಿಳಿಸುವ ಮೂಲಕ ಅಭ್ಯಾರ್ಥಿಯ ಗೆಲುವಿಗಾಗಿ ತಾವೆಲ್ಲರು ಕೆಲಸ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಕಲಬುರ್ಗಿ ವಿಭಾಗೀಯ ಸಂಘಟನಾ ಪ್ರಧಾನ ಸಂಚಾಲಕ ಅರುಣ ಬಿನ್ನಾಡೆ ಕೂಡ ಮಾತನಾಡಿದರು.
ಸಭೆಯಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ),ಹೆಚ್.ಸಿ.ಪಾಟೀಲ್,ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಗುರು ಕಾಮಾ,ಮೇಲಪ್ಪ ಗುಳಗಿ,ಸುರಪುರ ಮಂಡಲ ಅಧ್ಯಕ್ಷ ವೇಣುಮಾಧವ ನಾಯಕ,ಹುಣಸಗಿ ಮಂಡಲ ಅಧ್ಯಕ್ಷ ಸಂಗಣ್ಣ ವೈಲಿ,ಮುಖಂಡರಾದ ಮಾನಪ್ಪ ಸಾಹುಕಾರ ಆಲ್ದಾಳ ಸೇರಿದಂತೆ ಅನೇಕರಿದ್ದರು.