ಸುರಪುರ: ನಗರದಲ್ಲಿರುವ ಕಲಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕ್ ತಾಲೂಕು ಶಾಖೆ ಒಂದೇ ಇರುವುದರಿಂದ ರೈತರಿಗೆ ಸಮಸ್ಯೆಯಾಗುತ್ತಿದೆ ಆದ್ದರಿಂದ ಶಾಖೆಗಳನ್ನು ಹೆಚ್ಚಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಹಣಮಂತ್ರಾಯ ಮಡಿವಾಳ ಮಾತನಾಡಿ,ಇಡೀ ಸುರಪುರ ಮತ್ತು ಹುಣಸಗಿ ಎರಡೂ ತಾಲೂಕಿಗೆ ಒಂದೇ ಶಾಖೆ ಇರುವ ಕಾರಣ ರೈತರಿಗೆ ಸಮಸ್ಯೆಯಾಗುತ್ತಿದೆ,ಆದ್ದರಿಂದ ಕೂಡಲೇ ಕೆಂಭಾವಿ ಮತ್ತು ಹುಣಸಗಿಯಲ್ಲಿ ಇನ್ನೂ ಒಂದೊಂದು ಶಾಖೆ ಆರಂಭಿಸಿದರೆ ಸಮಸ್ಯೆ ಆಗುವುದಿಲ್ಲ,ಆದ್ದರಿಂದ ಕೂಡಲೇ ಡಿಸಿಸಿ ಬ್ಯಾಂಕ್ ಅಧಿಕಾರಿಗಳಿಗೆ ಮತ್ತು ಆಡಳಿತ ಮಂಡಳಿಗೆ ಒತ್ತಾಯ ಮಾಡುತ್ತಿದ್ದು ಇನ್ನೂ ಒಂದು ವಾರದಲ್ಲಿ ಇನ್ನು ಎರಡು ಶಾಖೆಗಳನ್ನು ಆರಂಭಿಸಬೇಕು ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಡಿಸಿಸಿ ಬ್ಯಾಂಕ್‍ಲ್ಲಿ ಸರಕಾರದ ಪರಿಹಾರದ ಹಣವನ್ನು ತೆಗೆದುಕೊಳ್ಳಲು ಬಂದಿದ್ದ ಸುರಪುರ ತಾಲೂಕಿನ ಹದನೂರ ಗ್ರಾಮದ ರೈತ ಬಸವಂತಪ್ಪ ಎನ್ನುವವರು ಜನಸಂದಣಿಯಿಂದ ಉಸಿರಾಟದ ತೊಂದರೆಯಾಗಿ ಮೂರ್ಛೆ ಬಂದು ಬಿದ್ದಿರುವ ಘಟನೆ ನಡೆದಿದೆ. ನಂತರ ಬ್ಯಾಂಕ್ ಸಿಬ್ಬಂದಿ ತಕ್ಷಣಕ್ಕೆ ಆಂಬುಲೆನ್ಸ್‍ಗೆ ಕರೆ ಮಾಡಿ ತರಿಸಿಕೊಂಡು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುವ ಘಟನೆ ನಡೆದಿದೆ.