ಭಾವುಕರಾಗಿ ಧನ್ಯವಾದ ಅರ್ಪಿಸಿದ ಕಲಬುರಗಿ ನೂತನ ಸಂಸದ

0
69

ಕಲಬುರಗಿ: ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು ಟಿಕೇಟು ನೀಡಿತ್ತು. ಹಾಗಾಗಿ, ನಾನು ಪಕ್ಷಕ್ಕೆ ಚಿರಋಣಿಯಾಗಿದ್ದೇನೆ ಎಂದು ನೂತನವಾಗಿ ಆಯ್ಕೆಯಾದ ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಗದ್ಗದಿತರಾಗಿ ನುಡಿದರು.

ಗೆಲುವಿನ ನಂತರ ಕಲಬುರಗಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನ ಮೇಲೆ ನಂಬಿಕೆ ಇರಿಸಿ ಅಭ್ಯರ್ಥಿಯನ್ನಾಗಿ ಮಾಡಿದ ಪಕ್ಷದ ಹಿರಿಯ ನಾಯಕರಿಗೆ ಹಾಗೂ ನನ್ನ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ನಾನು ಚಿರ ಋಣಿಯಾಗಿರುತ್ತೇನೆ ಎಂದು ಭಾವುಕರಾಗಿ ಧನ್ಯವಾದ ಅರ್ಪಿಸಿದರು.

Contact Your\'s Advertisement; 9902492681

” ಈ ಸಂದರ್ಭದಲ್ಲಿ ನನಗೆ ಮಾತನಾಡಲು ಆಗುತ್ತಿಲ್ಲ. ಮತ್ತೆ ನಿಮ್ಮೊಂದಿಗೆ ಮಾತನಾಡುತ್ತೇನೆ ” ಎಂದು ಹೇಳಿದ ರಾಧಾಕೃಷ್ಣ ಅವರು ಮತ್ತೊಮ್ಮೆ ನಾಯಕರಿಗೆ, ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಮತ್ತು ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಮತದಾರರಿಗೆ ಧನ್ಯವಾದ ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಇದು ಕೇವಲ ರಾಧಾಕೃಷ್ಣ ಅವರ ಗೆಲುವಲ್ಲ ಇದು ಪಕ್ಷದ‌ ಎಲ್ಲರ ಗೆಲುವಾಗಿದೆ ಎಂದರು.

ರಾಧಾಕೃಷ್ಣ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ ಕ್ಷಣದಿಂದ ಕೇಂದ್ರ ಸರ್ಕಾರದಿಂದ ನಮ್ಮ ಮೇಲೆ ಎಲದಲ ರೀತಿಯ ಒತ್ತಡವಿತ್ತು ಎಂದ ಸಚಿವರು ಎಲ್ಲ ಸಾವಾಲುಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ತುಂಬಿದ ನಿಮಗೆಲ್ಲ ನಾವು ಎಷ್ಟು ಧನ್ಯವಾದಗಳು ಹೇಳಿದರೂ ಸಾಲದು ಎಂದರು.

ಮತದಾರರ ಆಶೀರ್ವಾದದಿಂದ ಈಗ ರಾಧಾಕೃಷ್ಣ ಅವರು ಸಂಸದರಾಗಿದ್ದಾರೆ. ಈಗಾಗಲೇ ಖರ್ಗೆ ಸಾಹೇಬರು ರಾಜ್ಯಸಭೆಯಲ್ಲಿ‌ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಇಲ್ಲಿ ರಾಜ್ಯದಲ್ಲಿ ನಾನೂ ಸೇರಿದಂತೆ ಇತರೆ ಸಚಿವರು, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಮತ್ತು ಕಲ್ಯಾಣ ಕರ್ನಾಟಕದಿಂದ ಈಗ ಆಯ್ಕೆಯಾಗಿರುವ ಸಂಸದರು ಈ ಭಾಗದ ಅಭಿವೃದ್ದಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್, ಕೆಕೆಆರ್ ಡಿಬಿ ಅಧ್ಯಕ್ಷ ಅಜಯ್ ಸಿಂಗ್ ಮಾತನಾಡಿ ಮತದಾರರಿಗೆ, ಪಕ್ಷದ ಕಾರ್ಯಕರ್ತರಿಗೆ, ಮುಖಂಡರಿಗೆ ಹಿರಿಯ ನಾಯಕರಿಗೆ ಧನ್ಯವಾದ ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here