ಕಲಬುರಗಿ: ಚಾಂಬಾಳರು ಬಹುಮಖ ವ್ಯಕ್ತಿ. ಅವರ ಬದುಕು ಬರಹ,ನಡೆ ನುಡಿ ಒಂದಾಗಿಸಿಕೊಂಡು ಬರೆವ ಏಕೈಕ ಕವಿ ಸಾಹಿತಿ ಎಂದರೆ ವಿ.ಆರ್.ಚಾಂಬಾಳರೆಂದು ಹಿರಿಯ ಸಾಹಿತಿ ಡಾ.ಕೆ.ಎಸ್.ಬಂಧು ಅಭಿಮತ ವ್ಯಕ್ತ ಪಡಿಸಿದರು
ಕರ್ನಾಟಕ ಬೌದ್ಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿ ಷತ್ತು ಅಶೋಕ ನಗರದ ಅಭಯ ನಿಲಯದಲ್ಲಿ೮೦ರ ಸಂಭ್ರಮದ ನಿಮಿತ್ಯ ವಿಶೇಷ ಉಪನ್ಯಾಸ ಉದ್ಘಾಟಿಸಿ ಮಾತನಾಡಿದ ಅವರು ವಿಶ್ವವಿದ್ಯಾಲಯದ ಪ್ರಾಧ್ಯಾಪ ಕರಂತೆ ಓದದೇ ಇದ್ದರು ಸಹ ಅನುಭವದ ಸಾಹಿತ್ಯ ರಚನೆಕಾರರಾಗಿದ್ದಾರೆ ಎಂದರು.
ಅವರೊಬ್ಬ ಅಪ್ಪಟ ಬುದ್ದ ಅಂಬೇಡ್ಕರ್ ಅನುಯಾಯಿ.ಭೀಮ ಬುದ್ಧರ ಕುರಿತು ಕಾವ್ಯ ರಚನೆ ಮಾಡಿದ್ದು ಪ್ರಬುದ್ಧ ಭಾರತ ಕನಸು ಅವರ ಸಾಹಿತ್ಯ ಅನುಪಮ ರಂಗಕರ್ಮಿ,ಸಾಮಾಜಿಕ,ಹೋರಾಟಗಾರ ಸ್ವಾಭಿಮಾನ ಜೀವಿ.ಅವರು ವಿಶ್ವವಿದ್ಯಾಲಯ ಓದದೇ ದೇಸಿ ನೆಲೆಯ ಕವಿ.ತತ್ತ್ವ ಪದ,ಜನಪದ ಭಾಷೆ,ಆಡು ನುಡಿ ಭಾಷೆಯಲ್ಲಿ ರಚನೆ ಜನಪರ,ದೇಸಿ,ವೈಚಾರಿಕ ಚಿಂತಕ ಸಾಹಿತಿ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯರಾದ ಡಾ.ಜಯದೇವಿ ಗಾಯಕವಾಡ ಅವರು ವಿಶೇಷ ಉಪನ್ಯಾಸ ನೀಡಿದರು
ಕಲ್ಯಾಣ ಕರ್ನಾಟಕ ಪ್ರದೇಶದ ಬೌದ್ಧ ಸಾಹಿತ್ಯ, ಸ್ಮಾರಕಗಳು ಇಲ್ಲಿವೆ ಅವು ಬೆಳಕಿಗೆ ಬರಬೇಕಾಗಿವೆ ಎಂದು ಇತಿಹಾಸ ಪ್ರಾಧ್ಯಾಪಕ ಡಾ.ಗಾಂಧೀಜಿ ಮೋಳಕೇರಿ ನುಡಿದರು.
ಸಾಹಿತಿ ವಿ.ಆರ್.ಚಾಂಬಾಳ ಅವರು ನಮ್ಮ ಜೀವನ ಸಾರ್ಥಜವಾಗಬೇಕಾದರೆ ಬುದ್ದಾಯನಮ ಮತ್ತು ನಮೋ ಭೀಮ ಹೆಸರು ತಗೆದುಕೊಂಡು ಸಂಸ್ಕಾರ ಪಡೆಯಬೇಕು.ಮೂಢನಂಬಿಕೆ ತೊರೆದು ಮಾನವೀ ಯತೆಯಿಂದ ಬಾಳಬೇಕೆಂದರು ಶ್ರೀಮತಿ ಸುವರ್ಣ ಬಾಯಿ ಚಾಂಬಾಳ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ರಾಜ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸುರೇಶ ಕಾನೇಕರ ಬುದ್ದಿಸಂ ಬೆಳೆಸಲು ತಾಯಂದಿರು ಕಾರಣ.ಅಂಬೇಡ್ಕರ್ ರಿಗೆ ರಮಾಯಿ ಪ್ರೇರಣೆ ಆದಂತೆ
ಬಾಬಾಸಾಹೇಬರ ಮಾತು ತತ್ವ ಕಲಿಯಲಿಲ್ಲ ಈಗಲಾ ದರು ಅರಿತುಕೊಳ್ಳಬೇಕು ಎಂದರು.ಪೂಜ್ಯ ಮಿಲಿಂದ ಗುರೂಜಿ ಬುದ್ಧ ವಿಹಾರ ಉಮ್ಮಾಪುರದ ಭಂತೇಜಿ ತ್ರಿಸರಣ,ಪಂಚಶೀಲ ಬೋಧಿಸಿ ಆಶೀರ್ವಚನ ನೀಡಿದರು.
ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ.ಗವಿಸಿದ್ಧಪ್ಪ ಪಾ ಟೀಲ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಆಡಿದರು.ಕೋಶಾ ಧ್ಯಕ್ಷ ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು. ಡಾ. ಅವಿನಾಶ ದೇವನೂರ ವಂದಿಸಿದರು.
ಡಾ.ಪೃಥ್ವಿರಾಜ, ಸಿದ್ದಾರ್ಥ ಚಿಮ್ಮಿದ್ಲಾಯಿ, ಹರ್ಷವರ್ಧನ,ಸರ್ವೇಶ್ವರಿ,ಪಂಚ ಶೀಲ,ಸತ್ಯಶೀಲ,ವಿನಯಶೀಲ,ಸಂತೋಷ ನಾಡಗೇರಿ, ವಿದ್ಯಾಸಾಗರ ಜರ.ಎಸ್.ಪ್ರಶಾಂತ ನಾಡಗಿರಿ,ಶುಭೋ ದ ಜೋಗನ್,ಬುದ್ಧಪ್ರಕಾಶ, ಭೀಮ ಪ್ರಕಾಶ, ಸೃಜನ್ ಜೋಗನಗ,ಅಭಯ ಶೀಲಾ,ಲಕ್ಷಿಕಾಮತ ಪುತ್ರ ಪಾಟೀಲ, ಪ್ರೇಮಾಂಜಲಿ,ಪ್ರತಿಮಾ ಇತರರು ಉಪಸ್ಥಿತಿ ಇದ್ದರು.