ಮೋದಿ ಮತ್ತು ರಾಧಾಕೃಷ್ಣ ದೊಡ್ಡಮನಿಗೆ ಅಭಿನಂದನೆ ಸಲ್ಲಿಸಿದ ಡಾ. ಉಮೇಶ್ ಜಾಧವ್

0
69

ಕಲಬುರಗಿ: ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಮತ ನೀಡಿದ ಆರು ಲಕ್ಷ ಇಪ್ಪತ್ತೈದು ಸಾವಿರ ಮತದಾರರಿಗೆ ಕೃತಜ್ಞನಾಗಿದ್ದೇನೆ ಮತ್ತು ಮತದಾರರ ತೀರ್ಪನ್ನು ಗೌರವಿಸುತ್ತೇನೆ ಹಾಗೂ ಎನ್ ಡಿ ಎ ಸಂಸದೀಯ ನಾಯಕನಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಯ್ಕೆಯಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸುತ್ತೇನೆ ಎಂದು ಡಾ. ಉಮೇಶ್ ಜಾಧವ್ ಹೇಳಿದ್ದಾರೆ.

ಎನ್ ಡಿ ಎ ಸಂಸದೀಯ ನಾಯಕನಾಗಿ ಒಕ್ಕೂಟದ ಸದಸ್ಯರು ಅವಿರೋಧವಾಗಿ ಆಯ್ಕೆ ಮಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ರಾಷ್ಟ್ರದ ಪ್ರಧಾನಿ ಮಾಡಿರುವುದಕ್ಕೆ ಸಂತಸ ಉಂಟಾಗಿದೆ.ಇದುದ ಭಾರತದ ಜನತೆಗೆ ಖುಷಿಯ ಸಂಗತಿಯಾಗಿದ್ದು ವಿಶ್ವದಲ್ಲಿ ಭಾರತ ಮತ್ತೊಮ್ಮೆ ಮಹತ್ವದ ಹೆಜ್ಜೆ ಇರಿಸಲು ಎನ್‌ಡಿಎ ಒಕ್ಕೂಟದ ಸದಸ್ಯರು ತೋರಿದ ಒಗ್ಗಟ್ಟು ಮತ್ತು ಭಾರತದ ಶಕ್ತಿಯನ್ನು ಬಿಂಬಿಸಿದೆ ಎಂದು ಸುದ್ದಿಗಾರರಿಗೆ ಜಾಧವ್ ತಿಳಿಸಿದರು.

Contact Your\'s Advertisement; 9902492681

ಕಲಬುರಗಿ ಲೋಕಸಭಾ ಚುನಾವಣೆಯಲ್ಲಿ ಹಗಲು ರಾತ್ರಿ ದುಡಿದ ಬಿಜೆಪಿ ಕಾರ್ಯಕರ್ತರ ಶ್ರಮ ನಿರರ್ಥಕವಾಗದಂತೆ ಸದಾ ನಿಮ್ಮೊಂದಿಗೆ ಇದ್ದು ಸ್ಪಂದಿಸುವೆ. ಕೇಂದ್ರದಲ್ಲಿ ಎನ್‌ಡಿಎ ಸರಕಾರ ಅಧಿಕಾರದಲ್ಲಿ ಇರುವುದರಿಂದ ಕಲಬುರಗಿ ಸೇರಿದಂತೆ ಕರ್ನಾಟಕದ ಅಭಿವೃದ್ಧಿಗೆ ಹೊಸ ಪರ್ವ ಪ್ರಾರಂಭವಾಗಲಿದೆ. ಅಭಿವೃದ್ಧಿಯ ಕಾರ್ಯದಲ್ಲಿ ಸದಾ ತಮ್ಮೊಂದಿಗಿದ್ದು ಪ್ರಾಮಾಣಿಕ ಸ್ಪಂದನೆ ನೀಡುತ್ತೇನೆ ನೂತನವಾಗಿ ಆಯ್ಕೆ ಹೊಂದಿದ ಲೋಕಸಭಾ ಸದಸ್ಯರಾದ ರಾಧಾಕೃಷ್ಣ ದೊಡ್ಡಮನಿಯವರಿಗೆ ಅಭಿನಂದನೆ ಕೂಡ ಸಲ್ಲಿಸುತ್ತೇನೆ. ಬಿಜೆಪಿ ಪಕ್ಷವು ಜಿಲ್ಲೆಯಲ್ಲಿ ಸಂಘಟನಾತ್ಮಕವಾಗಿ ಬಲಗೊಳ್ಳಲು ಇನ್ನಷ್ಟು ಕ್ರಿಯಾಶೀಲವಾಗಿ ಎಲ್ಲ ಕಾರ್ಯಕರ್ತರು ಶ್ರಮಿಸಬೇಕು ಹಾಗೂ ನನ್ನ ಸ್ಪರ್ಧೆಗೆ ಅವಕಾಶ ನೀಡಿದ ಕೇಂದ್ರ ಮತ್ತು ರಾಜ್ಯ ನಾಯಕರಿಗೆ ಅಭಿನಂದನೆ ವ್ಯಕ್ತಪಡಿಸಿದ್ದಾರೆ.

ಪ್ರಮಾಣವಚನ ಸ್ವೀಕಾರದಲ್ಲಿ ಭಾಗಿ ದೆಹಲಿಗೆ ಪ್ರಯಾಣ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜೂನ್ 9ರಂದು ಭಾನುವಾರ ಮೂರನೇ ಬಾರಿಗೆ ಭಾರತದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಮಾರಂಭದಲ್ಲಿ ಭಾಗಿಯಾಗಲು ಡಾ. ಉಮೇಶ್ ಜಾಧವ್ ಶುಕ್ರವಾರ ದೆಹಲಿಗೆ ಪ್ರಯಾಣ ತೆರಳುತ್ತಿದ್ದು, ಮತ್ತೊಮ್ಮೆ ಅಭಿವೃದ್ಧಿ ಯುಗ ಪ್ರಾರಂಭವಾಗಲಿದೆ. ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಈ ಮಹತ್ವದ ಕ್ಷಣದಲ್ಲಿ ಪಾಲ್ಗೊಳ್ಳಲು ಸಂತಸವಾಗುತ್ತಿದೆ ಎಂದು ಜಾಧವ್ ತಿಳಿಸಿದರು.

ಇವರೊಂದಿಗೆ ಜೆ ಡಿ ಎಸ್ ನ ಜಿಲ್ಲಾ ಅಧ್ಯಕ್ಷರಾದ ಬಾಲರಾಜ್ ಗುತ್ತೇದಾರ ಹಾಗೂ ಜೆಡಿಎಸ್ ಮುಖಂಡರಾದ ನಾಸಿರ್ ಉಸ್ತಾದ್ ಕೂಡ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here