ಈಶಾನ್ಯ ಪದವಿಧರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು : ಅಭಿವೃದ್ದಿಗೆ ಬದ್ಧ ಎಂದ ಸಚಿವ ಪ್ರಿಯಾಂಕ್ ಖರ್ಗೆ

0
20

ಕಲಬುರಗಿ: ಕರ್ನಾಟಕ‌ ವಿಧಾನ ಪರಿಷತ್ತಿಗೆ ಈಶಾನ್ಯ ಕರ್ನಾಟಕ ಪದವಿಧರ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ ಅವರು ಗೆಲುವು ಸಾಧಿಸಿರುವುದಕ್ಕೆ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹರ್ಷ ವ್ಯಕ್ತಪಡಿಸಿ ಮತದಾರರಿಗೆ ಧನ್ಯವಾದ ಸಮರ್ಪಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು, ಕಲ್ಯಾಣ ಕರ್ನಾಟಕ ಭಾಗದ ಜನರು ನಮ್ಮ ಪಕ್ಷದ ಮೇಲೆ‌ ಇಟ್ಟಿರುವ ನಂಬಿಕೆಯ ಪ್ರತೀಕವಾಗಿ ಇತ್ತೀಚಿಗೆ ಈ ಭಾಗದ ಐದು ಲೋಕಸಭಾ ಕ್ಷೇತ್ರದಲ್ಲಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದೆ. ಈಗ ಈಶಾನ್ಯ ಪದವಿಧರರ ಕ್ಷೇತ್ರದಿಂದ ವಿಧಾನಪರಿಷತ್ ಗೆ ನಡೆದ‌ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಚಂದ್ರಶೇಖರ್ ಪಾಟೀಲ್ ಗೆ ಆಶೀರ್ವಾದ ಮಾಡುವ ಮೂಲಕ ಮತದಾರರು ನಮ್ಮ ಪಕ್ಷಕ್ಕೆ ಬಲ ತುಂಬಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಒಟ್ಟಾರೆ ಮತದಾರರಿಗೆ ಹೃದಯತುಂಬಿದ ಧನ್ಯವಾದ ಸಮರ್ಪಿಸುತ್ತೇನೆ.

Contact Your\'s Advertisement; 9902492681

” ನೀವು ನಿಮ್ಮ ಅಮೂಲ್ಯವಾದ ಮತಗಳ ಮೂಲಕ ನಮಗೆ ನೀಡಿದ ಬೆಂಬಲದಿಂದಾಗಿ ಸಂವಿಧಾನಬದ್ಧ ಶಕ್ತಿ ಬಂದಿದೆ. ಈ‌ ಭಾಗದ ಅಭಿವೃದ್ದಿಗೆ ನಮ್ಮ ಪಕ್ಷದಿಂದ ಆಯ್ಕೆಯಾದ ಶಾಸಕರು, ವಿಧಾನಪರಿಷತ್ ಸದಸ್ಯರು,‌ ಲೋಕಸಭಾ ಸದಸ್ಯರು, ಹಾಗೂ ರಾಜ್ಯ ಸರ್ಕಾರದ ಭಾಗವಾಗಿರುವ ಸಚಿವರು ಸದಾ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನಿಮ್ಮ ಬೆಂಬಲ ಇನ್ನೂ ಮುಂದೆಯೂ ಇರಲಿ ” ಎಂದು ಪ್ರಿಯಾಂಕ್ ಖರ್ಗೆ ಮತದಾರರಿಗೆ ಧನ್ಯವಾದ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here