ಕಲಬುರಗಿ: ಕರ್ನಾಟಕ ರಾಜ್ಯದಲ್ಲಿ ಸರಕಾರಿ ಅರೆ ಸರಕಾರಿ ಫ್ರೌಡ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ 7ಲಕ್ಷ ,30,000 ವಿಧ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಿದ್ದು, ಆದರೆ ಕರ್ನಾಟಕ ಫ್ರೌಡ ಮಂಡಳಿಯ ಆಯುಕ್ತರು ಮತ್ತು ಶಿಕ್ಷಣ ಸಚಿವರು ನೂತನವಾಗಿ ಜಾರಿ ಮಾಡಿರುವ ಹೊಸ ಶಿಕ್ಷಣ ಪದ್ಧತಿಯನ್ನು ಕೈ ಬಿಡಬೇಕು ಎಂದು ಕರವೇ(ಕಾವಲುಪಡೆ) ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, 7ಲಕ್ಷ 30,000 ಲಕ್ಷ ವಿಧ್ಯಾರ್ಥಿಗಳು ಹೊಸ ಪದ್ಧತಿ ಹತ್ತನೇ ತರಗತಿ ಪರೀಕ್ಷೆ ಬರೆಯುತ್ತಿದ್ದು, ಶಾಲೆಗಳಲ್ಲಿ ಸಿಸಿಟಿವಿ ಕ್ಯಾಮರಾ ನೋಡಿ ಭಯಪಟ್ಟು ಬರೆಯುವುದನ್ನೇ ಬಿಡುತ್ತಿದ್ದಾರೆ.ಏಕೆಂದರೆ ಹತ್ತನೇ ತರಗತಿ ವಿಧ್ಯಾರ್ಥಿಗಳಿಗೆ ಸಿಸಿಟಿವಿ ಕ್ಯಾಮರಾ ಅಂದರೆ ಏನು ಗೊತ್ತಿರುವುದಿಲ್ಲ. ಹೀಗಾಗಿ ಕೆಲ ವಿಧ್ಯಾರ್ಥಿಗಳು ಓದು ಬರಹದ ಮೂಲಕ ಪಾಸಾಗಿರುತ್ತಾರೆ. ಆದರೆ 7 ಲಕ್ಷ 30,000 ವಿಧ್ಯಾರ್ಥಿಗಳಲ್ಲಿ 6,50,000 ವಿಧ್ಯಾರ್ಥಿಗಳು ಮಾತ್ರ ಪಾಸಾಗಿರುತ್ತಾರುತ್ತಾರೆ ಇನ್ನುಳಿದ 80,000 ವಿಧ್ಯಾರ್ಥಿಗಳು ಪೇಲಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೂನ 14ರಿಂದ 22 ರವರೆಗೆ ಮತ್ತೊಮ್ಮೆ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆ ಕಟ್ಟಲು 80,000 ವಿಧ್ಯಾರ್ಥಿಗಳು ಸಿದ್ದರಾಗಿದ್ದು ಮೊದಲನೇ ಬಾರಿ ನಡೆಸಿದ ಪರೀಕ್ಷೆಯನ್ನು ಕೈ ಬಿಟ್ಟು ಕಳೆದ ವರ್ಷಗಳಲ್ಲಿ ಈ ಹಿಂದೆ ನಡೆಸುತ್ತಾ ಬಂದಿರುವಂತಹ ಪರೀಕ್ಷೆ ಪದ್ಧತಿಯನ್ನು ಮುಂದುವರೆಸುವ ಮೂಲಕ ರಾಜ್ಯದ ಮುಖ್ಯಮಂತ್ರಿಗಳು ವಿಧ್ಯಾರ್ಥಿಗಳು ಭವಿಷ್ಯಕ್ಕಾಗಿ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.