ಶರಣಬಸವ ವಿಶ್ವವಿದ್ಯಾಲಯದಲ್ಲಿ “ನ್ಯಾಷನಲ್ ಎಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್” (NATA) ಕೇಂದ್ರ ಉದ್ಘಾಟನೆ.

0
49

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದಲ್ಲಿ ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ (NATA) ಮಂಜೂರಾತಿ ನೀಡಿರುವ “ನ್ಯಾಷನಲ್ ಎಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್” (NATA) ಪರೀಕ್ಷಾ ಕೇಂದ್ರವನ್ನು ರವಿವಾರದಂದು ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ ಉದ್ಘಾಟಿಸಿದರು.

ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳುವ ಕನಸು ಹೊಂದಿರುವ ವಾಸ್ತುಶಿಲ್ಪ ಶಿಕ್ಷಣದ ವಿದ್ಯಾರ್ಥಿಗಳ ತುರ್ತು ಅಗತ್ಯವನ್ನು ಗ್ರಹಿಸಿ, ಶರಣಬಸವ ವಿಶ್ವವಿದ್ಯಾಲಯದಲ್ಲಿ “ನ್ಯಾಷನಲ್ ಎಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್” (ಓಂಖಿಂ) ಪರೀಕ್ಷಾ ಕೇಂದ್ರ ಉದ್ಘಾಟನೆಗೊಂಡಿತು

Contact Your\'s Advertisement; 9902492681

ಈ ಪರೀಕ್ಷಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ನ್ಯಾಷನಲ್ ಎಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್ (ಓಂಖಿಂ) ಪರೀಕ್ಷಾ ಕೇಂದ್ರ ವಿವಿಯಲ್ಲಿ ಸ್ಥಾಪಿಸಲು ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ (ಅoಂ) ಮಂಜೂರಾತಿ ನೀಡಿದ್ದು ಈ ಭಾಗದ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಲಿದೆ ಎಂದರು.

ಇದು ವಿವಿಗೆ ಹಾಗೂ ಆರ್ಕಿಟೆಕ್ಚರ್ ವಿಭಾಗಕ್ಕೆ ಮಹತ್ವದ ಮೈಲಿಗಲ್ಲಾಗಿದ್ದು, ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಈ ಪರೀಕ್ಷಾ ಕೇಂದ್ರ ವಾಸ್ತುಶಿಲ್ಪ ಕ್ಷೇತ್ರದಲ್ಲಿ ಅಭ್ಯಾಸ ಮಾಡಬಯಸುವ ವಿದ್ಯಾರ್ಥಿಗಳಿಗೆ ಅವರ ಸಾಮಥ್ರ್ಯವನ್ನು ಗುರುತಿಸುವಲ್ಲಿ ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಶರಣಬಸವ ವಿಶ್ವವಿದ್ಯಾಲಯದಲ್ಲಿ ಈ ಹೊಸ ಕೇಂದ್ರದ ಸ್ಥಾಪನೆಯು ಈ ಪ್ರದೇಶದಲ್ಲಿ ವಾಸ್ತುಶಿಲ್ಪ ಶಿಕ್ಷಣ ಮತ್ತು ಸಂಶೋಧನೆಯನ್ನು ಉತ್ತೇಜಿಸುವಲ್ಲಿ ಮಹತ್ವದ ದಾಪುಗಾಲು ಹೊಂದಿದೆ. ಮಹತ್ವಾಕಾಂಕ್ಷಿ ವಾಸ್ತುಶಿಲ್ಪಿಗಳನ್ನು ತಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಅಗತ್ಯವಾದ ಕೌಶಲ್ಯ ಮತ್ತು ಜ್ಞಾನದೊಂದಿಗೆ ಸಜ್ಜುಗೊಳಿಸಲು ಇದು ವಿದ್ಯಾರ್ಥಿಗಳ ಆರಂಭಿಕ ಸಾಮಥ್ರ್ಯವನ್ನು ಗುರುತಿಸುವಲ್ಲಿ ಕಾರ್ಯಬದ್ಧವಾಗಿದೆ ಎಂದರು.

ಈ ಉಪಕ್ರಮದೊಂದಿಗೆ ಶರಣಬಸವ ವಿಶ್ವವಿದ್ಯಾಲಯವು ಗುಣಮಟ್ಟದ ಶಿಕ್ಷಣವನ್ನು ಒದಗಿಸುವಲ್ಲಿ ಹಾಗೂ ಭವಿಷ್ಯದ ವಾಸ್ತುಶಿಲ್ಪಿಗಳನ್ನು ರೂಪಿಸುವಲ್ಲಿ ಅದರ ನಿರಂತರ ಪ್ರಯತ್ನಗಳನ್ನು ಹೊಂದಿದೆ ಎಂದು ತಿಳಿಸಿದರು.

ಈ ಓಂಖಿಂ ಪರೀಕ್ಷಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಡಾ. ಸುಜಾತಾ ಮಲ್ಲಾಪುರ, ಗೌತಮ್, ಜಗದೀಶ ಪಾಟೀಲ, ಡಾ. ಶಿವಕುಮಾರ ಕಾಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here