ಸುರಪುರ: ಇಂದು ಅನೇಕ ರೋಗಗಳು ಹರಡಲು ಮುಖ್ಯ ಕಾರಣ ಸ್ವಚ್ಛತೆಯ ಕೊರತೆ.ಕೊಳಚೆ ನೀರಲ್ಲಿ ಹುಟ್ಟಿಕೊಳ್ಳುವ ಸೊಳ್ಳೆಗಳಿಂದ ಅನೇಕ ರೋಗಗಳು ಹರಡುತ್ತವೆ.ಇಂತಹ ರೋಗಗಳನ್ನು ತಡೆಯಲು ಸ್ವಚ್ಛತೆಯೊಂದೆ ಪರಿಹಾರವಾಗಿದೆ ಎಂದು ತಾಲ್ಲೂಕು ಪಂಚಾಯತಿ ಸಹಾಯಕ ನಿರ್ದೇಶಕ ವಿಶ್ವನಾಥ ಮಾತನಾಡಿದರು.
ನಗರದ ಹಸನಾಪು ಪೆಟ್ರೋಲ್ ಪಂಪ್ ಬಳಿಯ ಕಡೆಚೂರ ಮಂಗಲ ಕಾರ್ಯಾಲಯದಲ್ಲಿ ನವ್ಯ ದಿಶಾ ಹಾಗು ಗ್ರಾಮೀಣ ಕೂಟ ಸಂಸ್ಥೆಗಳಿಂದ ಹಮ್ಮಿಕೊಂಡಿದ್ದ ನೀರು ನೈರ್ಮಲ್ಯ ಮತ್ತು ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಎಲ್ಲರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿದರೆ ಉತ್ತಮ ಪರಿಸರ ನಿರ್ಮಾಣ ಸಾಧ್ಯ ಎಂದರು. ಆರೋಗ್ಯ ನಿರೀಕ್ಷಕ ಜಯರಾಮ್ ಪವಾರ್ ಮಾತನಾಡಿ,ನೀರು ಮತ್ತು ನೈರ್ಮಲ್ಯ ಇವರೆಡು ಇಂದಿನ ದೊಡ್ಡ ಸಮಸ್ಯೆಗಳಾಗಿವೆ.ಇವೆರಡರ ಜಾಗೃತಿ ಪಡೆದು ಸರಿಯಾಗಿ ಪಾಲಿಸಿದರೆ ರೋಗ ರುಜಿನಗಳ ತಡೆಯುವ ಜೊತೆಗೆ ಸ್ವಚ್ಛಂದ ಸಮಾಜ ನಿರ್ಮಾಣ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಮೀಣ ಕೂಟದ ಹನುಮಂತ್ರಾಯ ಪಾಟೀಲ ಮಾತನಾಡಿ,ಮಹಿಳೆಯರು ಮತ್ತು ಮಕ್ಕಳು ಹಾಗು ವಯೋವೃಧ್ಧರಲ್ಲಿ ಕಾನೀಸಿಕೊಳ್ಳುವ ಅತಿ ಹೆಚ್ಚಿನ ರೋಗಗಳಿಗೆ ಸ್ವಚ್ಛತೆಯಿಲ್ಲದ್ದೆ ಮೊದಲ ಕಾರಣವಾಗಿರಲಿದೆ.ಜೊತೆಗೆ ಇಂದು ನಾವು ಸೇವಿಸುವ ನೀರುಕೂಡ ಸ್ವಚ್ಛವಾಗಿಲ್ಲ.ಇದರಿಂದ ಅನೇಕ ರೋಗಗಳು ಬರುತ್ತವೆ.ಆದ್ದರಿಂದ ಕಾಯಿಸಿ ಆರಿಸಿದ ನೀರನ್ನು ಕುಡಿಯಿರಿ ಅಥವಾ ನೀರು ಶುಧ್ಧಿಕರಣಿ ಗೊಳಿಸಿದ ನೀರು ಸೇವಿಸುವುದು ಉತ್ತಮವಾಗಿದೆ ಎಂದರು.ಇನ್ನು ಗ್ರಾಮೀಣ ಕೂಟವು ತಮೆಗೆ ಕಿರು ಸಾಲದ ರೂಪದಲ್ಲಿ ಧನ ಸಹಾಯ ಮಾಡುತ್ತಿದೆ.ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ.ಶೈಕ್ಷಣಿಕ ಸಾಲವೆಂದು ಪಡೆದಿದ್ದು ಅದಕ್ಕೆ ಬಳಸಿ ಇದರಿಂದ ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಸ್ವಚ್ಛತೆಯ ಕುರಿತು ಕೈ ತೊಳೆಯುವ,ಮನೆ ಅಂಗಳಗಳನ್ನು ಸ್ವಚ್ಛವಾಟ್ಟು ಕೊಳ್ಳುವ ಕುರಿತು ಪ್ರಾಯೋಗಿಕವಾಗಿ ತೋರಿಸುವ ಮೂಲಕ ಅರಿವು ಮೂಡಿಸಲಾಯಿತು.ಅಲ್ಲೆದ ಶುಧ್ಧ ಮತ್ತು ಮಿತವಾಗಿ ನೀರನ್ನು ಬಳಸುವ ಹಾಗು ನೈರ್ಮಲ್ಯವನ್ನು ಕಾಪಾಡುವ ಕುರಿತು ಎಲ್ಲರಿಂದ ಪ್ರಮಾಣ ವಚನ ಬೋಧಿಸಲಾಯಿತು.
ಇದೇ ಸಂದರ್ಭದಲ್ಲಿ ನಗರಸಭೆ ಆರೋಗ್ಯ ನಿರೀಕ್ಷಕ ಶಿವಪುತ್ರಪ್ಪ,ಗ್ರಾಮೀಣ ಕೂಟದ ಪ್ರಕಾಶ ಹೆಚ್.ತುಳಜಾರಾಮ್ ಸಿಂಗ್ ಹಾಗು ಕಾರ್ಯಕ್ರಮದ ಕುರಿತು ಅನೇಕ ಜನ ಮಹಿಳೆಯರು ಮಾತನಾಡಿದರು. ಗ್ರಾಮೀಣ ಕೂಟದ ದೇವಿಂದ್ರಪ್ಪ ಸಿಂಗ್,ಸುನೀಲ್,ಆದಪ್ಪ,ಬಾಲಕೃಷ್ಣ,ಆನಂದ,ಸಂತೋಷ,ಹುಚ್ಚಪ್ಪ,ಅಮೀತ್ ಸೇರಿದಂತೆ ಅನೇಕರಿದ್ದರು.