ಮರ ಬೆಳೆಸಿ ಪರಿಸರ ಉಳಿಸಿ ಜಾಗೃತಿ:ಬೆಂಗಳೂರಿಂದ ಕೇದಾರನಾಥಕ್ಕೆ ಸೈಕಲ್ ಜಾಥಾ

0
3

ಸುರಪುರ: ದೇಶದಲ್ಲಿ ದಿನೆ ದಿನೆ ಹೆಚ್ಚುತ್ತಿರುವ ತಾಪಮಾನ ಹಾಗೂ ಪರಿಸರ ನಾಶಾವಾಗುತ್ತಿದ್ದು ಇದರಿಂದ ಮಾನವ ಜನಾಂಗದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ,ಅದಕ್ಕಾಗಿ ಎಲ್ಲರು ಮರ ಬೆಳೆಸಿ ಪರಿಸರ ಉಳಿಸುವಂತೆ ಜನಜಾಗೃತಿ ಮೂಡಿಸುತ್ತ ಗೆಳಯರಿಬ್ಬರು ರಾಜಧಾನಿ ಬೆಂಗಳೂರಿ ನಿಂದ ಕೇದಾರನಾಥಕ್ಕೆ ಸೈಕಲ್ ಜಾಥಾ ಆರಂಭಿಸಿದ್ದಾರೆ.

ಪ್ರವೀಣ ಮತ್ತು ಜಗದೀಶ ಎನ್ನುವ ಇಬ್ಬರು ಗೆಳೆಯರು ಸೈಕಲ್ ಜಾಥಾ ನಡೆಸಿದ್ದು,ಬುಧವಾರ ಸುರಪುರ ನಗರಕ್ಕೆ ಭೇಟಿ ನೀಡಿ ಜನರಿಗೆ ತಮ್ಮ ಜಾಥಾದ ಉದ್ದೇಶ ತಿಳಿಸಿ,ಇಂದು ಜನರು ಉತ್ತಮವಾದ ಗಾಳಿ ಸಿಗದೆ ಸಾವನ್ನಪ್ಪುತ್ತಿದ್ದಾರೆ.ಕೃಷಿಗೆ ಸರಿಯಾದ ಮಳೆ ಬಾರದೆ ಜನರು ಗುಳೆ ಹೋಗುವಂತಾಗಿದೆ,ಮತ್ತೊಂದೆಡೆ ಆಹಾರ ಪದಾರ್ಥಗಳ ಬೆಲೆ ದಿನೆ ದಿನೆ ಹೆಚ್ಚುತ್ತಿದೆ,ಕೃಷಿ ಚಟುವಟಿಕೆಗೆ ನೀರಿನ ಕೊರತೆಯಿಂದ ಬೆಳೆಗಳು ಬೆಳೆಯಲಾಗದೆ ರೈತರು ಪರದಾಡುವಂತಾಗಿದೆ.ಇದೆಲ್ಲಕ್ಕೂ ಕಾರಣ ಮರಗಳ ನಾಶ,ಪರಿಸರ ನಾಶ ಪಡಿಸುತ್ತಿರುವುದಾಗಿದೆ.ಅದಕ್ಕಾಗಿ ನಾವಿಬ್ಬರು ಬೆಂಗಳೂರಿ ನಿಂದ ಕೇದಾರನಾಥದ ವರೆಗೆ ಸೈಕಲ್ ಜಾಥಾ ಮಾಡುತ್ತಾ,ಎಲ್ಲೆಡೆಯು ಮರ ಬೆಳೆಸುವಂತೆ ಹಾಗು ಪರಿಸರ ಕಾಪಾಡುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದಾಗಿ ತಿಳಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಜಾಥಾ ಹೊರಟ ಇಬ್ಬರಿಗೂ ನಗರದ ಅನೇಕ ಯುವಕರು ಗೌರವಿಸಿ ಜಾಥಾಕ್ಕೆ ಶುಭಹಾರೈಸಿದರು.ಈ ಸಂದರ್ಭದಲ್ಲಿ ಪ್ರಶಾಂತ್,ದೇವು ಪಾಟೀಲ್,ಪ್ರಕಾಶ್,ಶಶಿ,ಭೀಮು,ಅರುಣಕುಮಾರ್,ರಾಕೇಶ್,ಚನ್ನು,ಸುನೀಲ್ ಚನಕ್ಕಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here