ಆರೋಗ್ಯ ಸರಿಯಾಗಿದ್ದರೆ ಎಲ್ಲವೂ ಸರಿಯಾಗಿರುತ್ತದೆ: ಡಿಸಿ ಡಾ.ಸುಶೀಲಾ.ಬಿ

0
72
oppo_2

ಸುರಪುರ: ಪ್ರತಿಯೊಬ್ಬರು ಆರೋಗ್ಯ ಸುರಕ್ಷತೆಗೆ ಮೊದಲ ಆಧ್ಯತೆ ನೀಡಬೇಕು ಆರೋಗ್ಯ ಮೇಳದಲ್ಲಿ ಭಾಗವಸಿದ ಎಲ್ಲರು ಮೇಳದ ಸದುಪಯೋಗ ಪಡೆದುಕೊಳ್ಳಿ ಆರೋಗ್ಯ ಸರಿಯಾಗಿದ್ದರೆ ಎಲ್ಲವೂ ಸರಿಯಾಗಿರಲಿದೆ ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ ತಿಳಿಸಿದರು.

ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾತ, ಜಿಲ್ಲಾ ಹಾಗೂ ತಾಲೂಕು ಕುಟುಂಬ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ಆರೋಗ್ಯ ಮೇಳ ಮತ್ತು ರಕ್ತಧಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿ ಆರೋಗ್ಯ ರಕ್ಷಣೆ ಮೂಲ ಶುಚಿತ್ವ, ಸ್ವಚ್ಛತೆ ಕಾಪಾಡಿ ಕೊಂಡರೆ ಆರೋಗ್ಯ ತನ್ನಿಂದ ತಾನೆ ಸುರಕ್ಷಿತವಾಗಿರುತ್ತದೆ ಎಂದು ಸಲಹೆ ನೀಡಿದರು.

Contact Your\'s Advertisement; 9902492681

ಗ್ರಾಮೀಣ ಪ್ರದೇಶಗಳಲ್ಲಿಯೇ ಆರೋಗ್ಯ ಮೇಳ ಆಯೋಜಿಸುವುದು ಯಾತಕ್ಕೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಆರೋಗ್ಯ ಇಲಾಖೆಯಲ್ಲಿ ಹಲವಾರು ಯೋಜನೆಗಳಿವೆ, ಮೇಳದ ಮೂಲಕ ಜನರಲ್ಲಿ ಅವುಗಳ ಜಾಗೃತಿ ಮೂಡಿಸುವುದು ಮೇಳದ ಮುಖ್ಯ ಉದ್ದೇಶವಾಗಿದೆ ಎಂದರು
ಮಳೆಗಾಲ ಆರಂಭಗೊಂಡಿದೆ ಸಾಂಕ್ರಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುತ್ತದೆ ಆದ್ದ ರಿಂದ ಮನೆಯಲ್ಲಿ ಮೊದಲು ಶುಚಿತ್ವ ಕಾಪಾಡಿಕೊಳ್ಳಬೇಕು. ನೀರನ್ನು ಕಾಯಿಸಿ, ಶೋಷಿ ಕುಡಿ ಯಬೇಕು. ಮನೆಯಲ್ಲಿ ಶೌಚಾಲಯವನ್ನು ಬಳಸಬೇಕು ಪೌಷ್ಠಿಕ ಆಹಾರ ಸೇವನೆ ಮಾಡ ಬೇಕು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಪ್ರಭುಲಿಂಗ ಮಾನಕರ ಮಾತನಾಡಿ ಆರೋಗ್ಯ ಇಲಾಖೆಯಲ್ಲಿನ ಯೋಜನೆಗಳ ಬಗ್ಗೆ ಬಹುತೇಕರಿಗೆ ಗೊತ್ತೆ ಇರುವುದಿಲ್ಲ. ಕ್ಷಯ ರೋಗ, ಹೆರಿಗೆ, ಕಣ್ಣು ತಪಾಸಣೆ, ಶಸ್ತ್ರಕ್ರಿಯೆ, ವಾಸಕ್ಟಮಿ, ಟ್ಯೂಬೆಕ್ಟಮಿ ಸೇರಿದಂತೆ ಅನೇಕ ರೋಗಗಳ ನಿಯಂತ್ರಣಕ್ಕೆ ವಿಶೇಷ ಯೋಜನೆಗಳಿವೆ. ಇವೆಲ್ಲವುಗಳ ಬಗ್ಗೆ ಅರಿವು ಮೂಡಿಸು ವುದು ಮೇಳದ ಉದ್ದೇಶವಾಗಿದೆ ಎಂದರು.

ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ| ಸಂಜಯಕುಮಾರ ರಾಯಚೂರಕರ ಮಾತ ನಾಡಿ, ಕ್ಷಯ ರೋಗ ಮಹಾಮಾರಿ ಕಾಯಿಲೆಯಾಗಿದೆ ಇದರ ನಿಯಂತ್ರಣಕ್ಕೆ ಇಲಾಖೆ ವಿಶೇಷ ಆದ್ಯತೆ ನೀಡುತ್ತಿದೆ. ಮೇಳದಲ್ಲಿ ಎಲ್ಲಾ ರೋಗಗಳ ತಪಾಸಣೆ ಮಾಡಿ ಔಷದೋಪಚಾರ ನೀಡ ಲಾಗುತ್ತಿದೆ ಜನರು ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ| ಎಂ.ಎಸ್. ಪಾಟೀಲ ಮಾತನಾಡಿದರು. ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ| ಸಾಜೀದ್, ತಾಲೂಕು ಆರೋಗ್ಯಾಧಿ ಕಾರಿ ಡಾ| ಆರ್.ವಿ. ನಾಯಕ, ಗ್ರಾಮ ಪಂಚಾಯತ ಅಧ್ಯಕ್ಷ ಗಂಗಮ್ಮ, ಲಿಂಗಯ್ಯಸ್ವಾಮಿ, ಡಾ| ಹರ್ಷವರ್ಧನ ರುಫುಗಾರ ನೇತ್ರತಜ್ಞ ಶಮೀಮ್ ತಿಮ್ಮಾಪೂರಿ ವೇದಿಕೆಯಲ್ಲಿದ್ದರು. ಶಹಾಪು ರದ ಮಹತ್ಮಾ ಜ್ಯೋತಿಭಾಪುಲೆ ಕಲಾ ತಂಡದಿಂದ ಆರೋಗ್ಯ ಅರಿವು ಜಾಥಾ ಗೀತೆಗಳ ಪ್ರರ್ದ ಶನ ನಡೆಯಿತು.

ಇದೇ ವೇಳೆ ಹೆಚ್ಚುಬಾರಿ ರಕ್ಷಧಾನ ಮಾಡಿದ ನಾಲ್ವರನ್ನು ಸನ್ಮಾನಿಸಲಾಯಿತು ಅಂಧತ್ವ ನಿವಾ ರಣಾ ಇಲಾಖೆಯಿಂದ ಕಣ್ಣಿನ ದೋಷ ಇದ್ದವರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು. ಆರೋಗ್ಯ ಇಲಾಖೆಯ ಮಲ್ಲಣ್ಣ ಗೋನಾಲ ಸ್ವಾಗತಿಸಿದರು.ಶಿಕ್ಷಕ ಮಹಾಂತೇಶ ದೇವರಗೋನಾ ನಿರೂಪಿಸಿದರು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ತುಳಿಸಿರಾಮ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here