ಬಕ್ರೀದ್ ಹಬ್ಬದ ತ್ಯಾಗ ಬಲಿದಾನದ ಅರ್ಥ ಎಲ್ಲರು ತಿಳಿಯಬೇಕು

0
13

ಸುರಪುರ: ಬಕ್ರೀದ್ ಹಬ್ಬ ಎನ್ನುವುದು ಜಗತ್ತಿಗೆ ಪ್ರವಾದಿಗಳ ತ್ಯಾಗ ಬಲಿದಾನವನ್ನು ತಿಳಿಸುವ ಹಬ್ಬವಾಗಿದ್ದು,ಎಲ್ಲರು ತ್ಯಾಗ ಬಲಿದಾನವನ್ನು ಅರಿತುಕೊಂಡು ನಮ್ಮಲ್ಲಿ ಪ್ರವಾದಿಗಳು ನೀಡಿದ ಸಂದೇಶವನ್ನು ಅಳವಡಿಸಿಕೊಳ್ಳಬೇಕು ಎಂದು ಮೌಲಾನಾ ಸೈಯದ್ ಖಲೀಲ್ ಉರ್ ರಹೆಮಾನ್ ತಿಳಿಸಿದರು.

ಬಕ್ರೀದ್ ಹಬ್ಬದ ಅಂಗವಾಗಿ ನಗರದ ಝಂಡದಕೇರಾ ಬಳಿಯಲ್ಲಿನ ಈದ್ಗಾದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ ನೆರವೇರಿಸಿ ಪ್ರವಚನ ನೀಡಿ,ಈದಿನದ ಹಬ್ಬದ ಪ್ರಾರ್ಥನೆಯ ಸಂದರ್ಭದಲ್ಲಿ ನಾವೆಲ್ಲರು ಜಗತ್ತಿಗೆ ಒಳಿತಾಗಲಿ,ಎಲ್ಲರಲ್ಲಿ ಪರಸ್ಪರ ಶಾಂತಿ ಸೌಹಾರ್ಧತೆ ಬರಲಿ ಹಾಗೂ ಮಳೆ ಬೆಳೆ ಚೆನ್ನಾಗಿ ಬರಲಿ ಎಂದು ಅಲ್ಲಾಹು ನಲ್ಲಿ ಪ್ರಾರ್ಥಿಸೋಣ ಎಂದರು.

Contact Your\'s Advertisement; 9902492681

ಇದಕ್ಕು ಮುನ್ನ ಸುರಪುರ ನಗರ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳ ಸಾವಿರಾರು ಜನರು ಈದ್ಗಾಕ್ಕೆ ಆಗಮಿಸಿ ಎಲ್ಲರು ಹೊಸ ಬಟ್ಟೆಯನ್ನು ಧರಿಸಿ ಆಗಮಿಸಿ ಮೊದಲಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ನಂತರ ಪರಸ್ಪರ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು.ಈ ಸಂದರ್ಭದಲ್ಲಿ ಅನೇಕ ಮುಖಂಡರು ಹಾಗೂ ಸಾವಿರಾರು ಜನರು ಭಾಗವಹಿಸಿದ್ದರು.

ರಂಗಂಪೇಟೆ ಈದ್ಗಾ ಮೈದಾನ: ನಗರದ ರಂಗಂಪೇಟೆಯ ಹಸನಾಪುರ ಬಳಿಯಲ್ಲಿನ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ರಂಗಂಪೇಟೆ,ತಿಮ್ಮಾಪುರ,ದೇವಿಕೇರಾ ಸೇರಿದಂತೆ ವಿವಿಧ ಕಡೆಗಳಿಂದ ಸಾವಿರಾರು ಜನ ಮುಸ್ಲಿಂ ಬಾಂಧವರು ಆಗಮಿಸಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸುವ ಮೂಲಕ ಬಕ್ರೀದ್ ಹಬ್ಬ ಆಚರಿಸಿದರು.

ಇದೇ ಸಂದರ್ಭದಲ್ಲಿ ಮೌಲಾನಾ ಅಲ್ಲವುದ್ದಿನ್ ಅವರು ಬಕ್ರೀದ್ ಹಬ್ಬದ ಕುರಿತು ಪ್ರವಚನ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here