ಸುರಪುರ: ನಗರದ ಶ್ರೀಕೃಷ್ಣದ್ವೈಪಾಯನ ತೀರ್ಥರ ಮಠದಲ್ಲಿ ಶ್ರೀಕೃಷ್ಣದ್ವೈಪಾಯನ ತೀರ್ಥರ ಅಭಿವೃದ್ಧಿ ಟ್ರಸ್ಟ್ ಹಾಗೂ ಶ್ರೀಕೃಷ್ಣದ್ವೈಪಾಯನ ತೀರ್ಥರ ಯುವಸೇನೆ ವತಿಯಿಂದ ರವಿವಾರದಮದು ಯೋಗೀಶ್ವರ ಶ್ರೀ ಯಾಜ್ಞವಲ್ಕ್ಯರ ಗುರುವೇರಣ್ಯರ ಜಯಂತ್ಯೋತ್ಸವವನ್ನು ಶ್ರದ್ಧಾ-ಭಕ್ತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು.
ಬೆಳಿಗ್ಗೆ ಸುಪ್ರಭಾತ ಅಷ್ಟೋತ್ತರ ಪಾರಾಯಣ, ವಿಠಲಕೃಷ್ಣದೇವರ ಪೂಜಾ ಹಾಗೂ ಯೋಗೀಶ್ವರ ಯಾಜ್ಞವಲ್ಕ್ಯರ ಹಾಗೂ ಶ್ರೀ ಕೃಷ್ಣದ್ವೈಪಾಯನತೀರ್ಥರ ಮೂಲ ವೃಂದಾವನಕ್ಕೆ ಪಂಚಾಮೃತ ಅಭಿಷೇಕ,ಹಸ್ತೋದಕ, ಮಹಾ ಮಂಗಳಾರುತಿ ನಡೆದವು ನಂತರ ವೇಣುಗೋಪಾಲಸ್ವಾಮಿ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಹಾಗೂ ಸುಮಂಗಲಿಯರಿಂದ ಶ್ರೀ ಯಾಜ್ಞವಲ್ಕ್ಯ ಗುರುಗಳ ನಾಮಕರಣೋತ್ಸವ(ತೊಟ್ಟಿಲು) ಮುಂತಾದ ಕಾರ್ಯಕ್ರಮಗಳು ಜರುಗಿದವು.
ವಿಷ್ಣುಪ್ರಕಾಶ ಜೋಷಿ ನಾಗರಾಳ ಮಾತನಾಡಿ ಯಾಜ್ಞವಲ್ಕ್ಯರು ವ್ಯಾಸಮಹರ್ಷಿಗಳ ಶಿಷ್ಯರಾದ ಪೈಲ, ವೈಶಂಪಾಯನ, ಜೈಮಿನಿ,ಸುಮಂತು,ಪ್ರಭೃತಿ ಯಷಿವರ್ಯರ ಸಮಕಾಲೀನರಾಗಿದ್ದರು ತಮ್ಮ ಸೋದರಮಾವ ವೈಶಂಪಾಯನ ಋಷಿಗಳಲ್ಲಿ ಅಧ್ಯಯನ ಮಾಡಿದರು ಯಜ್ಞಕಾಂಡದಲ್ಲಿ ನಿಷ್ಠಾತರಾಗಿದ್ದ ಅವರು ಚತುರ್ವೇದ ಪಂಡಿತರಾಗಿದ್ದರು ಸೂರ್ಯೋಪಾಸನೆಯನ್ನು ಮಾಡಿ ಭೂಮಿಗೆ ಶುಕ್ಲ ಯಜುರ್ವೇದವನ್ನು ಭೂಮಿಗೆ ತಂದು ಕೊಟ್ಟ ಮಹಾನುಭವರು ಆಗಿದ್ದಾರೆ ಎಂದು ಹೇಳಿದರು.
ಅಧ್ಯಾತ್ಮ ವಿದ್ಯಾ ಪ್ರಾಪ್ತಿಗಾಗಿ ಯೋಗಶಾಸ್ತ್ರವನ್ನು ರಚಿಸಿದ ಯಾಜ್ಞವಲ್ಕ್ಯರು ಯೋಗಸಿದ್ಧಿ ಎಂದರೆ ಪರಮಾತ್ಮನ ಸಾಕ್ಷಾತ್ಕಾರವನ್ನು ಹೊಂದಿದವರು ಆಗಿದ್ದುದರಿಂದ ಇವರನ್ನು ಯೋಗೀಶ್ವರ ಎಂಬ ಪದವಿ ಪ್ರಾಪ್ತವಾಯಿತು ಎಂದು ತಿಳಿಸಿದರು.
ಸಮಸ್ತ ವೈದಿಕ ಧರ್ಮಾನುಯಾಯಿಗಳಿಗೆ ಆದರ್ಶಪುರುಷರಾಗಿರುವ ಯಾಜ್ಞವಲ್ಕ್ಯ ಮಹರ್ಷಿಗಳ ತತ್ವ ಸಿದ್ದಾಂತಗಳನ್ನು ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಂಡು ಜೀವನ ಪಾವನಗೊಳಿಸಿಕೊಳ್ಳೋಣ ಎಂದು ಹೆಳಿದರು.
ಅರ್ಚಕರಾದ ರಾಧಾಕೃಷ್ಣ ಜೋಷಿ, ಟ್ರಸ್ಟನ ಅಧ್ಯಕ್ಷ ಗುರುರಾಜ ಕುಲಕರ್ಣಿ ಚಾಮನಾಳ, ಗುರುರಾಜರಾವ ಕುಲಕರ್ಣಿ ನಗನೂರು, ಡಾ.ಗಿರೀಶ ಕುಲಕರ್ಣಿ ಕೆಂಭಾವಿ, ಕೊಪ್ರೇಶರಾವ ಹಳಿಜೋಳ, ಅಪ್ಪಣ್ಣ ಕುಲಕರ್ಣಿ, ಕಲ್ಯಾಣರಾವ ಕೋಠಿಖಾನಿ, ವಿಜಯಕುಮಾರ ಕೂಡಲಗಿ, ವಿನಯ ಬೋನಾಳ ರಮೇಶ ಕುಲಕರ್ಣಿ,ಪಾಂಡುರಂಗ ಮುನಮುಟಗಿ,ಸಂಜೀವ ಕುಲಕರ್ಣಿ,ವಿಲಾಸ ಕುಲಕರ್ಣಿ ಹಾಗೂ ಮಹಿಳಾ ಭಜನಾ ಮಂಡಳಿಯ ಸದಸ್ಯರು ಇದ್ದರು.
ಶಾಸಕರಿಗೆ ಸನ್ಮಾನ : ಯಾಜ್ಞವಲ್ಕ್ಯರ ಜಯಂತಿ ಕಾರ್ಯಕ್ರಮಕ್ಕೆ ಮಠಕ್ಕೆ ಆಗಮಿಸಿದ ಸುರಪುರ ಕ್ಷೇತ್ರದ ನೂತನ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರನ್ನು ಟ್ರಸ್ಟ್‍ನ ವತಿಯಿಂದ ಸನ್ಮಾನಿಸಲಾಯಿತು.
ಉಚಿತ ಉಪನಯನ : ಈ ಸಂದರ್ಭದಲ್ಲಿ ಟ್ರಸ್ಟ್‍ನ ವತಿಯಿಂದ ಉಚಿತ ಉಪನಯನ ಕಾರ್ಯಕ್ರಮ ನೆರವೇರಿಸಲಾಯಿತು ಇಬ್ಬರು ವಟುಗಳ ಉಪನಯನ ನಡೆಯಿತು.