ಶಹಾಬಾದ: ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಸೋಮವಾರ ತಾಲೂಕಾದ್ಯಂತ ಸ್ನೇಹ, ಸೌಹಾರ್ದತೆ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು.
ಈದ್ಗಾ ಮೈದಾನದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮ ಗುರುಗಳು ಈ ಸಂದರ್ಭದಲ್ಲಿ ಹಬ್ಬದ ಸಂದೇಶ ನೀಡಿ ಬಕ್ರೀದ್ ಹಬ್ಬದ ಆಚರಣೆ ಹಾಗೂ ದಾನ ಧರ್ಮದ ಮಹತ್ವ ಕುರಿತು ಬೋಧನೆ ಮಾಡಿ, ಈದ್ಗಾ ಮೈದಾನದಲ್ಲಿ ಧರ್ಮ ಗುರುಗಳು ಅವರು ಈದ್ ಪ್ರಯುಕ್ತ ಮಾತನಾಡಿ ಏಕ್ ದೇವೋಪಾಸನ ಒಳಗಾಗಿ ಲೌಖಿಕ ಬದುಕು, ದ್ವೇಷ, ಮದ ಮತ್ಸರ ಹಾಗೂ ಗುರು ಹಿರಿಯರಿಗೆ ಮತ್ತು ವಿಶೇಷವಾಗಿ ತಂದೆ ತಾಯಿಗಳಿಗೆ ಅತ್ಯಂತ ಗೌರವಿತವಾಗಿ ಕಾಣುವ ಮೂಲಕ ದೇವರನ್ನು ಮೆಚ್ಚಿಸಬೇಕೆಂದು ಕರೆ ನೀಡಿದರು.
ತನ್ನ ಮನಸ್ಸುಗಳನ್ನು ಹತೊಟೆಯಲ್ಲಿಟ್ಟು ಅಸೂಯೆ, ಆಸೆ, ದುರಾಸೆಗಳಿಗೆ ಬರೆ ಹಾಕಿ ತ್ಯಾಗ ಮತ್ತು ಬಲಿದಾನ ಮಾಡಿ ಪರಸ್ಪರ ಪ್ರತಿ ಸಮಾನತೆ ಹಾಗೂ ಬಡವರ ನೆರವಿಗೆ ಧಾವಿಸುವ ಕಾಳಿಜಿಹೊಂದುವ ಮನಸ್ಥಿತಿ ಹೊಂದುವುದು ಮುಖ್ಯವಾಗಿದ್ದು, ಅನ್ಯಾಯವನ್ನು ತಡೆಯುವಂತರಾಗಬೇಕೆಂದು ಎಂದು ಹೇಳಿದರು.
ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಎಲ್ಲರೂ ಮುಂಜಾನೆಯೇ ಹೊಸಬಟ್ಟೆ ತೊಟ್ಟು ಮಸೀದಿಗಳಲ್ಲಿ ಪ್ರಾರ್ಥನೆ ಮಾಡಿ ನಂತರ ಈದ್ಗಾ ಮೈದಾನಕ್ಕೆ ಆಗಮಿಸಿದರು.
ಈ ಸಂದರ್ಭದಲ್ಲಿ ಜಾಮೀಯಾ ಮಜ್ಜೀದ್‍ನ ಅಧ್ಯಕ್ಷ ಮಹ್ಮದ್ ಮತೀನ್ ಪಟೇಲ್, ಪ್ರಧಾನ ಕಾರ್ಯದರ್ಶಿ ಅಪ್ಸರ್ ಸೇಠ,ಖಜಾಂಚಿ ರಫಿಕ್ ಭಾಗಬಾನ, ಮಹ್ಮದ್ ಮಸ್ತಾನ, ಮಹ್ಮದ್ ಮತೀನ್ ಬಾದಲ್,ನೇಹಾಲ ಶೇಖ್, ಜಮೀರ ಬೇಗ್ ಸೇರಿದಂತೆ ನೂರಾರು ಜನರು ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಬಂಧುಗಳು ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.