ಮಳೆಯಿಂದ ಮನೆಗಳಿಗೆ ನುಗ್ಗಿದ ನೀರು ಕ್ರಮ ಕೈಗೊಳ್ಳ ಅಧಿಕಾರಿಗಳು

0
67

ಶಹಾಬಾದ: ಕಳೆದ ಎರಡು ದಿನಗಗಳ ಹಿಂದಷ್ಟೇ ಧಾರಾಕಾರವಾಗಿ ಸುರಿದ ಮಳೆಗೆ ನಗರದ ಕೆಲವೊಂದ ಪ್ರದೇಶದ ಮನೆಗಳಿಗೆ ಮನೆಗಳಿಗೆ ಮಳೆ ನೀರು ನುಗ್ಗಿದೆ. ಇದರಿಂದಾಗಿ ಮನೆಯಲ್ಲಿರುವ ಸಾಮಾನುಗಳು ಹಾನಿಯಾಗಿದ್ದು, ಈ ಬಗ್ಗೆ ಹಲವು ವರ್ಷಗಳಿಂದ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳದ ನಗರಸಭೆಯ ಅಧಿಕಾರಿಗಳಿಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಮನೆಗಳಿಗೆ ನೀರು ಹೊಕ್ಕಿದ್ದರಿಂದ ಜನರು ರಾತ್ರಿಯಿಡಿ ನೀರು ಹೊರ ಹಾಕುವ ಕೆಲಸ ಮಾಡಬೇಕಾಯಿತು. ಇದರಿಂದ ಜಾಗರಣೆ ಮಾಡುವ ಸ್ಥಿತಿ ನಿರ್ಮಾಣಗೊಂಡಿತ್ತು. ನಿದ್ದೆಯಿಲ್ಲದೇ ಕಾಲ ಕಳೆಯುವಂತಾಗಿದೆ.ನಗರದ ವಾರ್ಡ ನಂ.16 ಅಶೋಕ ನಗರ ಜಂಪ್ ಹತ್ತಿರದ ಶಂಭುಲಿಂಗ ಸ್ವಾಮಿ ಹಾಗೂ ಬಾಬಾ ಗುತ್ತೆದಾರ ಅವರ ಮನೆಯೊಳಗೆ ನೀರು ನುಗ್ಗಿ ಎಲ್ಲಿಲ್ಲದ ಸಂಕಷ್ಟಕ್ಕೆ ಒಳಗಾದರು. ರಾತ್ರಿಯಿಡಿ ನೆರೆಹೊರೆಯವರು ಅವರ ಸಂಕಷ್ಟ ನೋಡಲಾಗದೇ ಮಳೆ ನೀರನ್ನು ತೆಗೆಯುವಲ್ಲಿ ನಿರತರಾಗಿರುವುದು ಕಂಡು ಬಂದಿತು.

Contact Your\'s Advertisement; 9902492681

ಇದು ಪ್ರತಿವರ್ಷ ಇಲ್ಲಿನ ಜನರ ಸಂಕಷ್ಟ ಗೋಳಾಗಿದೆ ಈ ಬಗ್ಗೆ ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪನವರಿಗೆ ತಿಳಿಸಲಾಗಿತ್ತು.ಸ್ಥಳಕ್ಕೆ ಬಂದು ನೋಡಿ ಹೋಗಿದ್ದರು.ನಂತರ ಅವರು ವರ್ಗಾವಣೆಯಾಗಿ ಹೋದ ನಂತರ ಪೌರಾಯುಕ್ತರಾಗಿ ಪಂಕಜಾ ರಾವೂರ ಬಂದ ನಂತರ ಅವರಿಗೂ ಇಲ್ಲಿನ ಸಮಸ್ಯೆ ಬಗ್ಗೆ ತಿಳಿಸಿ, ವೀಕ್ಷಣೆ ಮಾಡಿಸಲಾಯಿತು.

ಅವರು ನಿರ್ಲಕ್ಷ್ಯ ಭಾವನೆ ತೋರಿದರು.ಈಗ ಮತ್ತೆ ಡಾ.ಗುರಲಿಂಗಪ್ಪನವರಿಗೆ ಪೌರಾಯುಕ್ತರಾಗಿ ಬಂದಿದ್ದಾರೆ.ಆದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಸುತ್ತಮುತ್ತಲಿನ ಪ್ರದೇಶದ ನೀರು ಇಲ್ಲಿಂದಲೇ ಹರಿದು ಹೋಗುವುದರಿಂದ ಸರಿಯಾದ ಚರಂಡಿ ವ್ಯವಸ್ಥೆಯಿಲ್ಲ.ಮನೆಯ ಮುಂದಿನ ರಸ್ತೆಗಳ ಮೇಲೆ ಮೊಳಕಾಲಿನವರೆಗೆ ನೀರು ನಿಂತು ಸಂಚಾರಕ್ಕೆ ತೊಂದರೆಯಾಗುತ್ತಿದೆ.ಚರಂಡಿ ನಿರ್ಮಾಣ ಮಾಡಿದರೇ ಸಮಸ್ಯೆ ಬಗೆಹರಿಯುತ್ತದೆ. ಕನಿಷ್ಠ ಪಕ್ಷ ನೀರು ನಿಲ್ಲದಂತೆ ತಾತ್ಕಾಲಿಕ ವ್ಯವಸ್ಥೆ ಮಾಡು ಗೋಜಿಗೂ ಮುಂದಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ನಗರಸಭೆಯ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ವಾರ್ಡ ನಂ.9 ಬಿಜೆಪಿ ಉಪಾಧ್ಯಕ್ಷ ಮಹಾದೇವ ಗೊಬ್ಬೂರಕರ್ ಮನೆಯೊಳಗೆ ನೀರು ನುಗ್ಗಿದ್ದರಿಂದ ರಾತ್ರಿಯೆಲ್ಲಾ ಸಂಕಷ್ಟ ಅನುಭವಿಸಿದರು.ಈ ಬಗ್ಗೆ ನಗರಸಭೆಯ ಪೌರಾಯುಕ್ತರಿಗೆ ತಿಳಿಸಿದರೇ ಹಾರಿಕೆ ಉತ್ತರ ನೀಡುತ್ತಿದ್ದಾರೆ.

ಮಳೆಗಾಲ ಆರಂಭವಾಗುವ ಮುನ್ನವೇ ಎಚ್ಚೆತ್ತುಕೊಂಡು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾಗಿತ್ತು. ಅದರೆ, ಬೇಜವಾಬ್ದಾರಿ ಮಾಡಿ, ಯಾವುದೇ ಕ್ರಮ ಕೈಗೊಂಡಿಲ್ಲ. ಇವರ ಅವೈಜ್ಞಾನಿಕ ಕಾಮಗಾರಿ ಮಾಡುತ್ತಿರುವ ತಪ್ಪಿನಿಂದಾಗಿ ನಿವಾಸಿಗಳ ತೊಂದರೆ ಅನುಭವಿಸುವಂತಾಗಿದೆ ಎಂದು ಮಹಾದೇವ ಗೊಬ್ಬೂರಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆ ಬಂದರೆ ಸಾಕು ನಗರದ ಬಾಲಕರ ವಸತಿ ನಿಲಯದ ಮುಂಭಾಗದಲ್ಲಿ ರಸ್ತೆಯ ತುಂಬೆಲ್ಲಾ ನೀರು ತುಂಬಿಕೊಂಡು, ಮಿನಿ ಕೆರೆಯಾಗಿ ಪರಿವರ್ತನೆಯಾಗುತ್ತದೆ. ಮಳೆ ನೀರು ಇಳೆಗೆ ಬಿದ್ದ ಬಳಿಕ ಸರಾಗವಾಗಿ ಹರಿದುಕೊಂಡು ಹೋಗುವಂತೆ ಮಾಡಿಲ್ಲ. ರಸ್ತೆಗಿಂತ ಚರಂಡಿಗಳೇ ಮೇಲಕ್ಕೆ ಮಾಡಲಾಗಿವೆ. ಇನ್ನೂ ಕೆಲವಡೆ ಚರಂಡಿಯ ಅಗತ್ಯವಿದ್ದರೂ ನಿರ್ಮಾಣ ಮಾಡುವ ಗೋಜಿಗೆ ಹೋಗುತ್ತಿಲ್ಲ. ಇನ್ನೂ ಕೆಲವೆಡೆ ಇದ್ದರೂ ಸಹ ಅವುಗಳು ಹೂಳು ತುಂಬಿಕೊಂಡು ದುರ್ವಾಸನೆ ಬೀರುತ್ತಿವೆ. ಯಾವುದೇ ರೀತಿಯಿಂದ ಪ್ರಯೋಜನ ಇಲ್ಲದಂತಾಗಿರುವ ಪರಿಣಾಮ ಸಾರ್ವಜನಿಕರು ಹೈರಾಣ ಆಗಿದ್ದಾರೆ.

ಮಳೆಗಾಲ ಆರಂಭದಲ್ಲಿಯೇ ಇμÉ್ಟೂಂದು ಸಮಸ್ಯೆ ಆಗುತ್ತಿದ್ದು ಇನ್ನೂ ಮುಗಿಯುವುದೊರಳಗೆ ಏನೇನ್ ಆಗುತ್ತದೆಯೇ ಎಂಬುದು ಗೊತ್ತಾಗುತ್ತಿಲ್ಲ.ಮನೆಯೊಳಗೆ ನೀರು ನುಗ್ಗಿದ ಬಗ್ಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳ ಅಧಿಕಾರಿಗಳು ಇದ್ದರೇ ನಮಗೇನು ಪ್ರಯೋಜನ.ಜಿಲ್ಲಾಧಿಕಾರಿಗಳೇ ಇಂತಹ ಅಧಿಕಾರಿಗಳನ್ನು ಇಲ್ಲಿಂದ ವರ್ಗಾವಣೆ ಮಾಡಿ. – ಮಹಾದೇವ ಗೊಬ್ಬೂರಕರ್ ಬಿಜೆಪಿ ಉಪಾಧ್ಯಕ್ಷ.

ಪ್ರತಿ ಬಾರಿ ಮಳೆ ಬಂದರೆ ನಗರದ ಹಾಸ್ಟೆಲ್ ಮುಂಭಾಗದಲ್ಲಿ ರಸ್ತೆಗಳೆಲ್ಲ್ಲವೂ ಕೆಸರುಮಯವಲ್ಲದೇ ಸುಮಾರು ಬಸವೇಶ್ವರ ವೃತ್ತದವರೆಗೆ ನೀರು ಸಾಕಷ್ಟು ಪ್ರಮಾಣದಲ್ಲಿ ನಿಲ್ಲುತ್ತದೆ. ಇದೆಲ್ಲಾ ಗೊತ್ತಿದ್ದರೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಹಿನ್ನೆಲೆ ನಾವು ಸಮಸ್ಯೆ ಅನುಭವಿಸುವಂತಾಗಿದೆ. ಎಇಇ, ಜೆಇಗಳು ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಹೋಗುವ ಪರಿಪಾಠ ಬಿಡಬೇಕಾಗಿದೆ.ಜನರ ಸಮಸ್ಯೆಗೆ ಸ್ಪಂದಿಸಬೇಕಾಗಿದೆ.ಇದೇ ಪರಿಸ್ಥಿತಿ ಮುಂದುವರೆದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ.- ಮಹ್ಮದ್ ಮುಸ್ತಾಕ್ ಹಾಗೂ ಪ್ರವೀಣ ರಾಜನ್ ನಗರದ ನಿವಾಸಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here