ರೇಣುಕಾ ಸ್ವಾಮಿ ಕೊಲೆ ಮಾಡಿರುವ ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಲಿ

0
57

ಕಲಬುರಗಿ: ಯುವಕನಾಗಿರುವ ರೇಣುಕಾ ಸ್ವಾಮಿ ಅವರನ್ನು ಕೊಲೆ ಮಾಡಿರುವ ನಟ ದರ್ಶನ ಹಾಗೂ ಅವರ ಗ್ಯಾಂಗಿನ ಎಲ್ಲರಿಗೂ ಕಠಿಣ ಶಿಕ್ಷೆ ಆಗಬೇಕು, ನೊಂದ ಕುಟುಂಬಕ್ಕೆ ಸರಕಾರ ನ್ಯಾಯ ಕೊಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಶಾಂತಗೌಡ ಆರ್. ಮಾಲಿಪಾಟೀಲ ಒತ್ತಾಯಿಸಿದ್ದಾರೆ.

ದರ್ಶನ್ ಪ್ರಭಾವ ವ್ಯಕ್ತಿಯಾಗಿದ್ದಾನೆ. ಯಾವುದೇ ರೀತಿಯಲ್ಲಿ ಕೇಸ್ ಮುಚ್ಚಾಕಲು ಪ್ರಯತ್ನ ಪಟ್ಟರೆ, ರಾಜ್ಯದಂತ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಕೂಡಲೇ, ಅಧಿಕಾರಿಗಳು ನ್ಯಾಯಯುತವಾಗಿ ಕಠಿಣ ಶಿಕ್ಷೆ ವಿಧಿಸಬೇಕು ಆಗ ಮಾತ್ರ ಅಮಾಯಕರಿಗೆ ನ್ಯಾಯ ಸಿಕ್ಕಂತೆ ಆಗುತ್ತದೆ ಎಂದರು.

Contact Your\'s Advertisement; 9902492681

ಚಿತ್ರರಂಗದಿಂದ ದರ್ಶನ್ ಆತನನ್ನು ಕೈ ಬಿಡಲಿ ಇಂಥ ಕೆಟ್ಟ ನಟ ಚಿತ್ರರಂಗದಲ್ಲಿ ಇದ್ದರೆ ಶೋಭೆಯಲ್ಲ, ಹಾಗಾಗಿ ಇಂತ ಕೆಟ್ಟ ವ್ಯಕ್ತಿಯನ್ನು ಕನ್ನಡ ಚಿತ್ರರಂಗದಿಂದ ಹೊರ ಹಾಕಬೇಕು ಆಗ ಮಾತ್ರ ಮುಂದೆ ಇದೊಂದು ಎಚ್ಚರಿಕೆಯ ಪಾಠ ಆಗುತ್ತದೆ ಎಲ್ಲರಿಗೂ ಎಂದರು.

ಆರೋಪಿತ ಎಲ್ಲಾರಿಗೂ ಕೂಡಲೇ ಶಿಕ್ಷೆ ಆಗಲಿ: ರೇಣುಕಾ ಸ್ವಾಮಿ ಅವರನ್ನು ಕಿಡ್ನಾಪ್ ಮಾಡಿ, ತಮಗೆ ತಿಳಿದ ರೀತಿಯಲ್ಲಿ ಒಡೆದು ಕೊಲೆ ಮಾಡಿರುವುದು ಪ್ರಜಾಪ್ರಭುತ್ವದಲ್ಲಿ ತಲೆ ತಗ್ಗಿಸುವ ಕೆಲಸವಾಗಿದೆ,ಇದರ ಬಗ್ಗೆ ರಾಜ್ಯದಂತ ಹೆಚ್ಚು ಹೆಚ್ಚು ಹೋರಾಟ ಆಗಬೇಕು ಆಗ ಮಾತ್ರ ಕೊಲೆಯಾದ ರೇಣುಕಾ ಸ್ವಾಮಿ ಅವರ ಕುಟುಂಬದವರಿಗೆ ಧೈರ್ಯ ತುಂಬಿದಂತೆ ಆಗುತ್ತದೆ ಎಂದು. ಮಾಲಿಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here