ಕಲಬುರಗಿ: ನಗರದ ಖಾಸಗಿ ಸಭಾಗಂಣದಲ್ಲಿ ರಾಷ್ಟ್ರ ರಕ್ಷಣಾ ಪಡೆ ಜಿಲ್ಲಾ ಪೂರ್ವಭಾವಿ ಸಭೆಯಲ್ಲಿ ಕಠೋರ ಗೋ ರಕ್ಷಕ ಕಠೋರ ಹಿಂದುತ್ವವಾದಿ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕರಾದ ಪುನೀತ್ ಕೆರೆಹಳ್ಳಿ ಸಂಘಟನೆಯ ಸನಾತನ ಹಿಂದೂ ಧರ್ಮ ಉಳಿಯುವಿಗಾಗಿ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ನೂತನವಾಗಿ ರಾಷ್ಟ್ರ ರಕ್ಷಣಾ ಪಡೆ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಮಡಿವಾಳಪ್ಪ ಅಮರಾವತಿ, ನಾಲ್ಕುಚಕ್ರ ತಂಡದ ಮುಖ್ಯಸ್ಥರಾದ ಮಾಲಾ ಕಣ್ಣಿ, ಕಲ್ಯಾಣರಾವ್ ಪಾಟೀಲ್ ಕಣ್ಣಿ, ವೀರಶೈವ ಲಿಂಗಾಯತ ಮಹಾವೇದಿಕೆಯ ರಾಜ್ಯ ಸಮಿತಿಯ ಸದಸ್ಯ ಶ್ರೀಧರ್ ನಾಗನಹಳ್ಳಿ, ಜಿಲ್ಲಾ ಅಧ್ಯಕ್ಷ ಧಯಾನಂದ ಪಾಟೀಲ್, ಆನಂದ ತೀರ್ಥ ಜೋಶಿ, ಪೂರ್ಣಿಮಾ ಕುಲಕರ್ಣಿ, ವಿಜಯಲಕ್ಷ್ಮಿ ಹಿರೇಮಠ್, ಜಯಶ್ರೀ ಜೈನ, ರಾಷ್ಟ್ರ ರಕ್ಷಣಾ ಪಡೆ ಜಿಲ್ಲಾ ಉಪಾಧ್ಯಕ್ಷ ಸತ್ಯ ಪ್ರಮೋದ್ ನವಲಿ, ಗಂಗಾಧರ್ ಹಲಬಾ, ಸಂಗಮೇಶ ದೇವರನಾವದಾಗಿ, ವಿಠ್ಠಲ್ ಕುಲಕರ್ಣಿ, ಪ್ರಜ್ವಲ್ ಕುಲಕರ್ಣಿ, ಗೋ ರಕ್ಷಕ ರಘು ಗುತ್ತೇದಾರ ಸೇರಿದಂತೆ ರಾಷ್ಟ್ರರಕ್ಷಣಾ ಪಡೆ ಕಾರ್ಯಕರ್ತರು ಉಪಸ್ಥಿತರಿದ್ದರು.