ಕುವೈತ್ನೆ ಅಗ್ನಿ ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರಕ್ಕೆ ಸಿಎಂ ಅನುಮೋದನೆ

0
46

ಬೆಂಗಳೂರು; ಕುವೈತ್‍ನ ಮಾಂಗಾಫ್‍ನ ಆಕಸ್ಮಿಕ ಅಗ್ನಿ ದುರಂತದಲ್ಲಿ ಪ್ರಾಣ ಕಳೆದುಕೊಂಡ ಕರ್ನಾಟಕದ ವಿಜಯಕುಮಾರ್ ಬಿನ್ ಕೊಬ್ಬಣ್ಣ ಪ್ರಸನ್ನ ಇವರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪಾವತಿಸಲು ಮುಖ್ಯಮಂತಿಗಳು ಅನುಮೋದಿಸಿರುತ್ತಾರೆ ಎಂದು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರ ಕಚೇರಿಯಿಂದ ತಿಳಿಸಲಾಗಿದೆ.

ಪ್ರಪಂಚದಾದ್ಯಂತ ಹಲವು ರಾಷ್ಟ್ರಗಳಿಂದ ಅದರಲ್ಲೂ ಭಾರತೀಯರು ಕೆಲಸವನ್ನರಸಿ ಗಲ್ಫ್ ರಾಷ್ಟ್ರಗಳಿಗೆ ತಮ್ಮ ಜೀವನ ಗುಣಮಟ್ಟ ಸುಧಾರಣೆಗಾಗಿ ವಲಸೆ ಹೋಗುವುದು ಸರ್ವೆಸಾಮಾನ್ಯವಾಗಿದೆ. ಜೂನ್ 12ರಂದು ಕುವೈತ್‍ನ ಮಾಂಗಾಫ್‍ನಲ್ಲಿರುವ ವಸತಿ ಸಮುಚ್ಛಯವೊಂದರಲ್ಲಿ ಆಕಸ್ಮಿಕವಾಗಿ ನಡೆದ ಅಗ್ನಿ ದುರಂತದಲ್ಲಿ ಸುಮಾರು 45 ಭಾರತೀಯ ಪ್ರಜೆಗಳು ಸಾವನ್ನಪ್ಪಿದ್ದು, ಹಲವರು ತ್ರೀವ್ರ ನಿಗಾಘಟಕದಲ್ಲಿ ಚಿಕಿತ್ಸೆಯನ್ನು ಅಲ್ಲಿನ ಆಸ್ಪತ್ರೆಗಳಲ್ಲಿ ಪಡೆಯುತ್ತಿದ್ದಾರೆ. ಇದೊಂದು ದುರಾದೃಷ್ಟಕರ ಸಂಗತಿಯಾಗಿದ್ದು, ಘಟನೆಯ ಕುರಿತು ನಮ್ಮೆಲ್ಲರಿಗೂ ವಿಷಾಧವಿದೆ.

Contact Your\'s Advertisement; 9902492681

ಈ ಅಗ್ನಿ ದುರಂತದಲ್ಲಿ ಪ್ರಾಣ ಕಳಕೊಂಡವರ ಪೈಕಿ ಕೇರಳ ರಾಜ್ಯದವರೇ ಹೆಚ್ಚಿನವರಾಗಿದ್ದು, ನಮ್ಮ ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಸರಸಂಬ ಗ್ರಾಮದ 40 ವರ್ಷ ವಯಸ್ಸಿನ ವಿಜಯಕುಮಾರ್ ಬಿನ್ ಕೊಬ್ಬಣ್ಣ ಪ್ರಸನ್ನ ಸಹ ಒಬ್ಬರಾಗಿದ್ದರು. ಇವರು ಕುವೈತ್‍ನಲ್ಲಿ ವಾಹನ ಚಾಲಕರಾಗಿ ಕಾರ್ಯನಿರ್ವಹಿಸುತ್ತಾ, ಸುಮಾರು 8 ವರ್ಷಗಳಿಂದ ನೆಲೆಸಿದ್ದರು. ಮೃತರ ಅವಲಂಬಿತ ಕುಟುಂಬದಲ್ಲಿ 8 ಸದಸ್ಯರಿದ್ದಾರೆ. ಸದರಿಯವ ಮೃತ ದೇಹವನ್ನು ಕುವೈತ್ ನಿಂದ ಭಾರತಕ್ಕೆ ತರುವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ಸಮಿತಿಯು ಭಾರತ ಸರ್ಕಾರದೊಂದಿಗೆ ಹಾಗೂ ಕುವೈತ್‍ನ ರಾಯಭಾರಿ ಕಚೇರಿಯೊಂದಿಗೆ ನಿಕಟ ಸಂಪರ್ಕದಲ್ಲಿತ್ತು. ತದನಂತರ ಮೃತದೇಹವನ್ನು ಕೊಚ್ಚಿಯಿಂದ ಹೈದರಾಬಾದ್ ಮೂಲಕ ಮೃತರ ಸ್ವಗ್ರಾಮಕ್ಕೆ ತಲುಪಿಸುವಲ್ಲಿ ಸರ್ಕಾರದ ಅನೇಕ ಅಧಿಕಾರಿ ಸಿಬ್ಬಂದಿಗಳು ಕಾರ್ಯನಿರ್ವಹಿಸಿರುತ್ತಾರೆ. ನಂತರ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಈಗಾಗಲೇ ಕೇರಳ ರಾಜ್ಯ ಸರ್ಕಾರವು ಸದರಿ ಅಗ್ನಿ ದುರಂತದಲ್ಲಿ ಸತ್ತವರ ಕುಟುಂಬದ ಅವಲಂಭಿತ ಸದಸ್ಯರಿಗೆ ರೂ. 5 ಲಕ್ಷಗಳ ಆರ್ಥಿಕ ಪರಿಹಾರ ಘೋಷಿಸಿದೆ. ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕ ವತಿಯಿಂದ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕರ್ನಾಟಕ ರಾಜ್ಯ ಸರ್ಕಾರವು ಸಹ ದಿವಂಗತ ವಿಜಯಕುಮಾರ್ ಬಿನ್ ಕೊಬ್ಬಣ್ಣ ಪ್ರಸನ್ನ ಇವರ ಕುಟುಂಬಕ್ಕೆ ಗರಿಷ್ಠ ಮಟ್ಟದ ಆರ್ಥಿಕ ನೆರವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪಾವತಿಸುವಂತೆ ಕೋರಲಾಗಿತ್ತು. ಇದಕ್ಕೆ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಗಳು ಸದರಿ ಅವಲಂಬಿತ ಕುಟುಂಬದವರಿಗೆ ರೂ. ಐದು ಲಕ್ಷಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡುವಂತೆ ಅನುಮೋದಿಸಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here