ಶಾಲೆಯಲ್ಲಿ ಹೊಣೆಗಾರಿಕೆ ನೀಡುವ ಸಮಾರಂಭ

0
25

ಕಲಬುರಗಿ: ಇಂದಿನ ಮಕ್ಕಳಿಗೆ ಕೇವಲ ಪುಸ್ತಕ ಓದು ನೀಡುವುದಷ್ಟೇ ನಮ್ಮ ಕರ್ತವ್ಯವಾಗಬಾರದು. ಅವರಿಗೆ ಹೊಣೆಗಾರಿಕೆ ನಿಭಾಯಿಸುವ ಮತ್ತು ನಾಯಕತ್ವದ ಗುಣ ಪರಿಚಯಿಸುವ ಕೆಲಸ ಆಗಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪ ಹೇಳಿದರು.

ಹೈಕೋರ್ಟ್ ಸಮೀಪ ಇರುವ ಬೆಥನಿ ಕಾನ್ವೆಂಟ್ ಪ್ರೌಢ ಶಾಲೆಯಲ್ಲಿ ನಡೆದ ಹೊಣೆಗಾರಿಕೆ ನೀಡುವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಇಂಗ್ಲಿಷ ಭಾಷೆ ದುಡಿಮೆಯ ಭಾಷೆಯಾಗಿದೆ. ಆದರೆ, ಕನ್ನಡ ಭಾಷೆ ನಮ್ಮತಾಯಿಭಾಷೆ. ಅದನ್ನು ಕೂಡ ನಾವು ಮರೆಯಬಾದರು. ಕನ್ನಡ ನಮ್ಮ ಸ್ವಾಭಿಮಾನದ ಭಾಷೆಯಾಗಿದೆ. ಆದ್ದರಿಂದ ಎಲ್ಲರೂ ಕನ್ನಡವನ್ನು ಮಾತನಾಡಿ ಉಳಿಸುವ ನಿಟ್ಟಿನಲ್ಲಿ ಮುನ್ನಡೆಯಬೇಕು ಎಂದರು.

ಉದಯವಾಣಿ ವರದಿಗಾರ ಸೂರ್ಯಕಾಂತ್ ಎಂ.ಜಮಾದಾರ ಮಾತನಾಡಿ, ಮಕ್ಕಳಿಗೆ ಯಾರೂ ಮಾರ್ಗದರ್ಶಿಯರು ಎನ್ನುವುದು ಈಗ ತುಂಬಾ ಮುಖ್ಯವಾಗಿದೆ. ಬಹುತೇಕ ಸಿನೆಮಾ ಹೀರೋಗಳು, ಸ್ಪೋರ್ಟ್ ಸೇರಿದಂತೆ ಇತರೆ ವಲಯದಲ್ಲಿನ ಸಾಧಕರು ಹೀರೋಗಳಾಗುತ್ತಿದ್ದಾರೆ. ಅವರನ್ನು ದೊಡ್ಡ ಮಟ್ಟದಲ್ಲಿ ಫಾಲೋ ಮಾಡಲಾಗುತ್ತಿದೆ. ಆದರೆ, ವಾಸ್ತವದಲ್ಲಿನಮ್ಮ ಜೀವನ ಸದೃಢವಾಗಿರಲಿ, ಶಿಕ್ಷಣವಂತರಾಗಲಿ, ದೊಡ್ಡನೌಕರಿಗಳನ್ನು ಸಂಪಾದಿಸಿ ಸುಖವಾಗಿರಲಿ ಎಂದು ಅನುದಿನ ಹಾರೈಸುವ ಅಪ್ಪ ಅಮ್ಮ ನಮಗೆ ನಿಜವಾದ ಹೀರೋ, ಅವರನ್ನೇ ನಾವು ಫಾಲೋ ಮಾಡಬೇಕಿದೆ. ಉಳಿದೆಲ್ಲರೂ ನಮ್ಮ ಎಂಟಟೇನರ್‌ ಎಂದರು.

ಶಾಲೆಯ ಸಂಪರ್ಕ ಅಧಿಕಾರಿ ಸಿಸ್ಟರ್ ಸಿಂಪ್ಲಿನಾ ಬಿಎಸ್ ಮಾತನಾಡಿ, ಇಂಗ್ಲಿಷ್ ಮಾಧ್ಯವಾದರೂ ನಾವು ಶಾಲೆಗಳಲ್ಲಿ ಕನ್ನಡವನ್ನು ಕಲಿಸುತ್ತೇವೆ. ಅವರ ಮಾತೃ ಭಾಷೆಯಲ್ಲಿಯೂ ಅವರಿಗೆ ತಿಳಿವು ನೀಡಲಾಗುತ್ತದೆ. ಇದರಿಂದ ಮಕ್ಕಳು ವಿಕಾಸ ಹೊಂದಲು ಸಾಧ್ಯವಾಗುತ್ತದೆ ಎಂದ ಅವರು, ಇಂದಿನ ಮಕ್ಕಳಲ್ಲಿ ನಾಯಕತ್ವ ಗುಣ ಹುಟ್ಟಿನಿಂದಲೇ ಬರುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ನಡೆದು ಹೋಗಲು ಶಿಕ್ಷಕರು ಮತ್ತು ಪಾಲಕರು ಮಾರ್ಗ ದರ್ಶನ ಮಾಡಬೇಕು ಎಂದರು.

ಈ ವೇಳೆಯಲ್ಲಿ ಹೈಸ್ಕೂಲ್ ವಿಭಾಗದ ಹೆಡ್‌ಬಾಯ್ ಸಂದೇಶ ಮತ್ತು ಹೆಡ್ ಗರ್ಲ್ ಸಹನಾ ಮತ್ತು ಪ್ರಾಥಮಿಕ ವಿಭಾಗದ ಹೆಡ್‌ ಬಾಯ್ ಆದರ್ಶ, ಹೆಡ್ ಗರ್ಲ್ ಸಂಮೃಧಿ ಅವರ ನೇತೃತ್ವದಲ್ಲಿ ಒಟ್ಟು 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನಾಯಕತ್ವದ ಹಾಗೂ ಕರ್ತವ್ಯ ಕುರಿತ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಈ ವೇಳೆಯಲ್ಲಿ ಮುಖ್ಯೋಪಾಧ್ಯಾಯರಾದ ಫಿಲೋಮಿನಾ ಸಲ್ದಾನಾ, ಸಿಸ್ಟರ್ ಜೋಸ್ಟಿನ್, ಸಿಸ್ಟರ್ ಎಲಿವಿನ್, ಕವಿತಾ ಕೋಣಿನ್, ರೋಮನಾ, ಹಿಮಬಿಂದು, ಈ ಶಶಿಕಲಾ, ಅಶ್ವಿನಿ, ಲಕ್ಷ್ಮಿ, ರೂಪಾ, ಆಶಾ, ಭವಾನಿ, ಜ್ಯೋತಿ, ಸುಮಿತ್ರಾ, ಅಶೋಕ, ಶರಣು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here