ಉತ್ತಮ ಕೆಲಸಕ್ಕೆ ಸಹಕರಿಸಲು ಮನವಿ: ಸಾಬೇರಾಬೇಗಂ

0
36

ಶಹಾಬಾದ: ನಗರಸಭೆಯ ವಾರ್ಡ ನಂ.17ರಲ್ಲಿ ಸೇಂಟ್ ಥಾಮಸ್ ಶಾಲೆಯ ಮುಂಭಾಗದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕಾಗಿ ರಸ್ತೆ ಅಗೆಯಲಾಗಿದ್ದು, ಇನ್ನೂ ಹದಿನೈದು ದಿನಗಳಲ್ಲಿ ಉತ್ತಮ ರಸ್ತೆ ನಿರ್ಮಾಣವಾಗಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಿದೆ.ಆದ್ದರಿಂದ ಸ್ಥಳೀಯ ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ನಗರಸಭೆಯ ಸದಸ್ಯೆ ಸಾಬೇರಾಬೇಗಂ ಹಾಗೂ ಮಾಜಿ ನಗರಸಭೆಯ ಸದಸ್ಯ ನಾಗಣ್ಣ ರಾಂಪೂರೆ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಲ್ಲಿನ ರಸ್ತೆ ಹದಗೆಟ್ಟ ಕಾರಣ ಉತ್ತಮ ರಸ್ತೆ ನಿರ್ಮಾಣವಾಗಬೇಕು. ಅಲ್ಲದೇ ವಾರ್ಡನ ಅಭಿವೃದ್ಧಿ ದೃಷ್ಟಿಯಿಂದ ಈ ಯೋಜನೆಯನ್ನು ಹಾಕಿಕೊಂಡಿದ್ದೆವೆ. ಒಂದು ಉತ್ತಮ ಕೆಲಸವಾಗುವಾಗ ಸ್ವಲ್ಪ ತೊಂದರೆಯಾಗುವುದು ಸಹಜ. ಆದರೆ ಒಂದಿಷ್ಟು ದಿನ ಸಹನೆಯಿಂದ ಕಾಯ್ದುಕೊಂಡರೆ ಸುಮಾರು ವರ್ಷಗಳ ಕಾಲ ಉತ್ತಮ ರಸ್ತೆಯ ಮೇಲೆ ಸಂಚಾರ ಮಾಡಬಹುದು.

Contact Your\'s Advertisement; 9902492681

ಈ ರಸ್ತೆ ನಿರ್ಮಾಣ ಮಾಡುತ್ತಿರುವುದು ಸಾರ್ವಜನಿಕರಿಗಾಗಿ. ಆದ್ದರಿಂದ ಸ್ಥಳೀಯ ನಾಗರಿಕರು ಉತ್ತಮ ಕಾರ್ಯಕ್ಕೆ ಸಹಕರಿಸಬೇಕೆಂದು ಮನವಿ ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here